ಬೂದಿಮುಚ್ಚಿದ್ದ 'ಅಸಹಿಷ್ಣುತೆ' ಕೆಂಡ ಕೆದಕಿದ ಕರಣ್ ಜೋಹರ್!

Subscribe to Oneindia Kannada

ಜೈಪುರ, ಜನವರಿ, 22: ಅಮೀರ್ ಖಾನ್ ಮತ್ತು ಶಾರುಖ್ ನಂತರ ಬಾಲಿವುಡ್ ನಿರ್ದೇಶಕ, ನಟ ಕರಣ್ ಜೋಹರ್ ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ. ಝೀ ಜೈಪುರ್ ಲಿಟ್ರೇಚರ್ ಫೆಸ್ಟಿವಲ್ ನಲ್ಲಿ ಮಾತನಾಡಿದ ಜೋಹರ್ 'ಭಾರತ ಒಂದು ಕಷ್ಟದ ದೇಶ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಮತ್ತೊಂದು ಆರಂಭ ಬರೆದಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ನನಗೆ ಜೋಕ್ ನಂತೆ ಕಂಡುಬರುತ್ತಿದೆ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಿದರೇ ನೀಮಗೆ ದೇಶದಲ್ಲಿ ಕಾದಿರುವುದು ಜೈಲು ಶಿಕ್ಷೆ. ಎಂದು ಕರಣ್ ಜೋಹರ್ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.[ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದಿದ್ದ ಪ್ರೇಕ್ಷಕ!]

14 ವರ್ಷದ ಹಿಂದೆ ನನ್ನ ಸಿನಿಮಾವೊಂದರಲ್ಲಿ ರಾಷ್ಟ್ರಗೀತೆಯನ್ನು ಬಳಸಿಕೊಂಡಿದ್ದಕ್ಕೆ ಈಗಲೂ ನಾನು ಕ್ಷಮೆ ಕೇಳಬೇಕು ಎಂದು ಜನರು ಹೇಳುತ್ತಾರೆ. ನಮ್ಮದು ಕನಸುಗಳನ್ನು ಕಟ್ಟಿ ಕೊಡುವ ಕೆಲಸ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.[ಪ್ರೇಕ್ಷಕ ಪ್ರಭುಗಳೆದಿರು ಕಳಚಿಬಿತ್ತು ಕಿಂಗ್ ಖಾನ್ ಕಿರೀಟ]

ಶಾರುಖ್ ಜನ್ಮದಿನದ ಮಾತು

ಶಾರುಖ್ ಜನ್ಮದಿನದ ಮಾತು

ತಮ್ಮ ಜನ್ಮದಿನದಂದೇ ಬಾಲಿವುಡ್ ಬಾದ್ ಷಾ ದೇಶದಲ್ಲಿ ದೇಶಭಕ್ತಿ ಬಗ್ಗೆ ಮಾತನಾಡುವುದೋ ದೊಡ್ಡ ತಪ್ಪು. ದೇಶ ಭಕ್ತಿಯನ್ನು ಪ್ರಕಟಮಾಡಿದರೆ ಆತ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ಅಮೀರ್ ಏನು ಹೇಳಿದ್ದರು?

ಅಮೀರ್ ಏನು ಹೇಳಿದ್ದರು?

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದು ನಮ್ಮ ಕುಟುಂಬದ ಅನುಭವಕ್ಕೂ ಬಂದಿದೆ. ಮಕ್ಕಳ ಭವಿಷ್ಯಕ್ಕಾಗಿ ಈ ದೇಶವನ್ನು ತೊರೆಯೋಣ ಎಂದು ಹೆಂಡತಿ ಕಿರಣ್ ತರಾವ್ ನನ್ನಲ್ಲಿ ಹೇಳಿದ್ದರು ಎಂದು ಅಮೀರ್ ಖಾನ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ವಿವಾದದ ಕಿಡಿ ಹಬ್ಬಿಸಿತ್ತು.

ಅಸಹಿಷ್ಣುತೆ ಪರವಾಗಿ ನಿಂತವರು

ಅಸಹಿಷ್ಣುತೆ ಪರವಾಗಿ ನಿಂತವರು

ಶಾರುಖ್ ಖಾನ್, ಅಮೀರ್ ಖಾನ್, ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಎ ಆರ್ ರೆಹಮಾನ್ ಸಹ ಕೆಲವೊಂದು ಸಂದರ್ಭದಲ್ಲಿ ಅಸಹಿಷ್ಣುತೆ ಪರವಾಗಿ ಮಾತನಾಡಿದ್ದ ರಾಜಕಿಯೇತರ ಗಣ್ಯರು.

ಲೇ ಚೆಲ್ ಎಂದಿದ್ದ ಭಾರತೀಯ

ಲೇ ಚೆಲ್ ಎಂದಿದ್ದ ಭಾರತೀಯ

ಶಾರುಖ್ ಅಭಿನಯದ ದಿಲ್ವಾಲೆ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ನಿರೀಕ್ಷಿತ ಮಟ್ಟದ ಗಳಿಕೆ ಮಾಡಲು ವಿಫಲವಾಗಿತ್ತು. ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದ ಶಾರುಖ್ ಸಿನಿಮಾ ಬಿಡುಗಡೆಗೆ ಮುನ್ನ ಕ್ಷಮೆ ಕೇಳಿ ಸುದ್ದಿಯಾಗಿದ್ದರು.

ಸಾಮಾಜಿತ ತಾಣದಲ್ಲಿ ವಿರೋಧ

ಸಾಮಾಜಿತ ತಾಣದಲ್ಲಿ ವಿರೋಧ

ಖಾನ್ ಗಳ ಹೇಳಿಕೆಗೆ ಸಾಮಾಜಿಕ ತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನಾಗರಿಕರು ತಮ್ಮ ಅಭಿಪ್ರಾಯವನ್ನು ಕಟುವಾಗಿ ಹೊರಹಾಕಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Bollywood actors Aamir Khan, Shah Rukh Khan, now, Bollywood filmmaker Karan Johar has also joined the intolerance debate. When Karan Johar was asked about why he did not join this debate, the filmmaker sparked a controversy by saying that freedom of expression in India "is the biggest joke". He further went on to say that "revealing in today's time can land you in jail"
Please Wait while comments are loading...