• search

ಹಾಡಹಗಲೇ ರೂಪದರ್ಶಿಯ ಸ್ಕರ್ಟ್ ಎಳೆದು ಲೈಂಗಿಕ ದೌರ್ಜನ್ಯ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಇಂದೋರ್, ಏಪ್ರಿಲ್ 23 : ಎಂಟು ತಿಂಗಳ ಮಗುವಿನ ಬರ್ಬರ ಅತ್ಯಾಚಾರ, ಹತ್ಯೆ ಕಂಡ ಇಂದೋರ್ ನಲ್ಲಿ, ನಾಗರಿಕರು ನಾಚಿಕೆಯಿಂದ ತಲೆತಗ್ಗಿಸುವಂಥ ಮತ್ತೊಂದು ಹೀನಾಯ ಘಟನೆ ಭಾನುವಾರ ನಡೆದಿದೆ.

    ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ರೂಪದರ್ಶಿಯ ಮಿನಿ ಸ್ಕರ್ಟ್ ಅನ್ನು ಎಳೆದು ಲೈಂಗಿಕ ದೌರ್ಜನ್ಯ ಎಸಗಲು ಇಬ್ಬರು ದುರುಳರು ಯತ್ನಿಸಿದ್ದು, ಆಗ ನಡೆದ ಜಟಾಪಟಿಯಲ್ಲಿ ರೂಪದರ್ಶಿಯ ವಾಹನ ಅಪಘಾತಕ್ಕೀಡಾಗಿ ಅವರಿಗೆ ಗಾಯವಾಗಿದೆ.

    ಲೈಂಗಿಕ ಅಪರಾಧ ಪ್ರಕರಣ: ಪೊಲೀಸರಿಗೆ ಮತ್ತೆ ತರಬೇತಿ ಕೊಡಿ

    ನಾಚಿಕೆಗೇಡಿನ ಸಂಗತಿಯೆಂದರೆ, ಹಾಡಹಗಲೇ ಎಲ್ಲರೆದುರಿನಲ್ಲಿ ಈ ಘಟನೆ ನಡೆಯುತ್ತಿದ್ದರೆ ಯಾರೂ ಆ ರೂಪದರ್ಶಿಯ ಸಹಾಯಕ್ಕೆ ಬಂದಿಲ್ಲ. ಗಾಯದ ಮೇಲೆ ಉಪ್ಪು ಸುರಿದಂತೆ, ರೂಪದರ್ಶಿಯನ್ನು ಮೇಲೆತ್ತಲು ಬಂದ ಇಬ್ಬರು ಹಿರಿಯರು, ನೀನಿಂಥ ಸ್ಕರ್ಟ್ ತೊಟ್ಟಿದ್ದರಿಂದಲೇ ಆ ದುರುಳರು ಹೀಗೆ ಮಾಡಿದ್ದು ಎಂದು ವ್ಯಂಗ್ಯವಾಡಿದ್ದಾರೆ.

    Indore Models skirt pulled in broad daylight by molesters

    ಅತ್ಯಂತ ಜನನಿಬಿಡವಾದ ಪ್ರದೇಶದಲ್ಲಿ ರೂಪದರ್ಶಿಯ ಸ್ಕರ್ಟ್ ಎಳೆಯಲು ಆ ವ್ಯಕ್ತಿಗಳು ಯತ್ನಿಸಿದ್ದು ಮಾತ್ರವಲ್ಲ, "ಇದರ ಕೆಳಗೆ ಏನಿದೆ ನೋಡು" ಎಂಬಂತಹ ಅಸಹ್ಯಕರ ಮಾತುಗಳನ್ನು ಕೂಡ ಆಡಿ ನಕ್ಕಿದ್ದಾರೆ. ಆ ವ್ಯಕ್ತಿಗಳು ಕೂಡಲೆ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ನೇಹಿತೆಯ ಸಹಾಯದಿಂದ ಕೆಫೆಯೊಂದಕ್ಕೆ ಹೋಗಿ ಬಟ್ಟೆ ಸರಿ ಮಾಡಿಕೊಂಡಿದ್ದಾರೆ ರೂಪದರ್ಶಿ.

    ಕಾಮಪಿಪಾಸುಗಳಾ, ಪ್ಲೀಸ್ ನಮ್ಮನ್ನು ಬದುಕಲು ಬಿಡಿ!

    ತನ್ನ ಕಥನವನ್ನು ಆಕ್ರೋಶಭರಿತ ನುಡಿಗಳಲ್ಲಿ ತೆರೆದಿಟ್ಟಿರುವ ರೂಪದರ್ಶಿ, ಇನ್‌ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಇಡೀ ಘಟನೆಯನ್ನು ವಿವರಿಸಿದ್ದಾರೆ. ಟ್ವಿಟ್ಟರ್ ನಲ್ಲಿಯೂ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿವರಗಳನ್ನು ನೀಡಿ, ತನ್ನ ಸಹಾಯಕ್ಕೆ ಬರದವರ ಮೇಲೆ ಛೀಮಾರಿ ಹಾಕಿದ್ದಾರೆ.

    8 ತಿಂಗಳ ಹಸುಗೂಸಿನ ಅತ್ಯಾಚಾರ, ಬರ್ಬರ ಕೊಲೆ

    ಆ ಇಬ್ಬರು ಕೂಡಲೆ ಅಲ್ಲಿಂದ ಪಾರಾಗಿದ್ದರಿಂದ ಅವರನ್ನು ಆಕೆ ಬೆನ್ನತ್ತಿದರೂ ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ, ಅವರ ವಾಹನದ ನಂಬರ್ ಗುರುತು ಹಿಡಿಯಲೂ ಅವರಿಗೆ ಆಗಿಲ್ಲ. ಕೆಲ ಹೊತ್ತಿನ ನಂತರ ಅದೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲದಿರುವುದು ಕಂಡುಬಂದಿದೆ.

    ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

    ಹಿರಿಯರು ಆಡಿರುವ ನುಡಿಗಳ ಬಗ್ಗೆ ನೊಂದು, "ನಾನೇನು ಧರಿಸಬೇಕು ಅದು ನನ್ನ ಆಯ್ಕೆ. ಆದರೆ ನಾನು ಮಿನಿ ಸ್ಕರ್ಟ್ ಹಾಕಿದ್ದೀನಂತ ನನ್ನ ಮೇಲೆ ದೌರ್ಜನ್ಯ ಎಸಗಲು ಮತ್ತು ಅಹಸ್ಯಕರವಾಗಿ ವರ್ತಿಸಲು ಯಾರಿಗೂ ಹಕ್ಕಿಲ್ಲ. ಆ ಹಿರಿಯರು ಹಾಗೆ ಹೇಳಿದ್ದು ಕೇಳಿ ನನಗೆ ತುಂಬಾ ಬೇಜಾರಾಯಿತು" ಎಂದು ಕಂಬನಿ ಮಿಡಿದಿದ್ದಾರೆ.

    ರೂಪದರ್ಶಿಗೆ ಸಾಮಾಜಿಕ ತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ದಯವಿಟ್ಟು ಯಾರೂ ನನಗೆ ಕರೆ ಮಾಡಬೇಡಿ, ನನ್ನ ಹೆಸರು ನಮೂದಿಸಬೇಡಿ. ನಾನು ಈ ವಿಷಯ ಇಲ್ಲಿ ವಿವರಿಸಿದ್ದು ಇಂಥ ಘಟನೆ ಮತ್ತೆ ನಡೆಯಬಾರದು ಎಂದು ಮಾತ್ರ ಎಂದು ಆ ರೂಪದರ್ಶಿ ಬೇಡಿಕೊಂಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    A city model on Sunday took to twitter and instagram to narrate the humiliating experience. The model and blogger from Indore detailed in a Twitter thread the sexual harassment that she went through.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more