ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತಿ ಉದ್ದದ ಸುರಂಗ ಮಾರ್ಗ ಶೀಘ್ರ ಸಿದ್ಧ

|
Google Oneindia Kannada News

ನವದೆಹಲಿ, ಡಿಸೆಂಬರ್‌ 16: ಭಾರತೀಯ ರೈಲ್ವೇ ಗುರುವಾರ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಧಮ್‌ಪುರ ಶ್ರೀನಗರ ಬಾರಾಮುಲ್ಲಾ ರೈಲು ಸಂಪರ್ಕದ (USBRL) 111 ಕಿಮೀ ನಿರ್ಮಾಣ ಹಂತದಲ್ಲಿರುವ ಬನಿಹಾಲ್-ಕತ್ರಾ ವಿಭಾಗದಲ್ಲಿ ಸುರಂಗವನ್ನು ಪೂರ್ಣಗೊಳಿಸಿದೆ. 12.89 ಕಿಮೀ ಸುರಂಗವು ಭಾರತದ ಅತಿ ಉದ್ದದ "ಎಸ್ಕೇಪ್ ಟನಲ್" ಆಗಿದೆ.

IRCTCಯ ಶೇ. 5ರಷ್ಟು ಷೇರು ಮಾರಲು ಮುಂದಾದ ಸರ್ಕಾರIRCTCಯ ಶೇ. 5ರಷ್ಟು ಷೇರು ಮಾರಲು ಮುಂದಾದ ಸರ್ಕಾರ

ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಸುರಂಗ ಮಾರ್ಗ (ಎಸ್ಕೇಪ್ ಟನಲ್) ಅನ್ನು ನಿರ್ಮಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಹಿಮಾಲಯದ ರಾಂಬನ್ ರಚನೆಯ ಮೂಲಕ ಹಾದುಹೋಗುತ್ತದೆ. ಇದಲ್ಲದೇ ಖೋಡಾ, ಹಿಂಗ್ನಿ, ಕುಂದನ್ ನಲ್ಲಾ ಮುಂತಾದ ಚೆನಾಬ್ ನದಿಯ ವಿವಿಧ ಕ್ಯಾನಲ್‌ಗಳ ಜೋಡಣೆಯ ಉದ್ದಕ್ಕೂ ಹಾದು ಹೋಗುತ್ತವೆ. ಇದರ ಕೊರೆಯುವಿಕೆಯು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

Indias longest escape tunnel is ready soon

ಬನಿಹಾಲ್-ಕತ್ರಾ ಮಾರ್ಗದಲ್ಲಿ ಇದು ನಾಲ್ಕನೇ ಸುರಂಗ ಮಾರ್ಗವಾಗಿದೆ. ಈ ವರ್ಷದ ಜನವರಿಯಲ್ಲಿ ಟಿ-49 ಎಂಬ 12.75 ಕಿ.ಮೀ ಸುರಂಗವನ್ನು ಪೂರ್ಣಗೊಳಿಸಲಾಯಿತು. ಡ್ರಿಲ್ ಮತ್ತು ಬ್ಲಾಸ್ಟ್ ಪ್ರಕ್ರಿಯೆಗಳ ಆಧುನಿಕ ತಂತ್ರವಾದ ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್‌ನಿಂದ ಇದನ್ನು ನಿರ್ಮಿಸಲಾಗಿದೆ. ಹಾರ್ಸ್‌ಶೂ ಆಕಾರದ ಎಸ್ಕೇಪ್ ಟನಲ್ ದಕ್ಷಿಣ ಭಾಗದಲ್ಲಿ ಸುಂಬರ್ ಸ್ಟೇಷನ್ ಯಾರ್ಡ್ ಮತ್ತು ಟಿ-50 ಸುರಂಗವನ್ನು ಸಂಪರ್ಕಿಸುತ್ತದೆ. ಸುಂಬರ್‌ನಲ್ಲಿ ದಕ್ಷಿಣ ತುದಿಯ ಎತ್ತರವು ಸರಿಸುಮಾರು 1400.5 ಮೀಟರ್‌ಗಳು ಮತ್ತು ಉತ್ತರದ ತುದಿಯು 1558.84 ಮೀಟರ್‌ಗಳು ಆಗಿರುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

Indias longest escape tunnel is ready soon

ಸುರಂಗ ಟಿ-49 ಒಂದು ಅವಳಿ ಕೊಳವೆಯ ಸುರಂಗವಾಗಿದ್ದು, ಮುಖ್ಯ ಸುರಂಗ (12.75 ಕಿಮೀ) ಮತ್ತು ಎಸ್ಕೇಪ್ ಟನಲ್ (12.895 ಕಿಮೀ) 33 ಅಡ್ಡ ಮಾರ್ಗಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಯುಎಸ್‌ಬಿಆರ್‌ಎಲ್ ಯೋಜನೆಯ ಭಾಗವಾಗಿ ಬನಿಹಾಲ್-ಕತ್ರಾ ವಿಭಾಗವನ್ನು ನಿರ್ಮಿಸಲಾಗುತ್ತಿದೆ. ಯೋಜನೆಯ ಒಟ್ಟು 272 ಕಿಲೋಮೀಟರ್‌ಗಳ ಪೈಕಿ 161 ಕಿಮೀ ಈಗಾಗಲೇ ಕಾರ್ಯಾರಂಭ ಮಾಡಿದೆ.

English summary
Indian Railways on Thursday completed tunneling on the 111 km under-construction Banihal-Katra section of the Udhampur Srinagar Baramulla Rail Link (USBRL) in Jammu and Kashmir. The 12.89 km tunnel is the longest "escape tunnel" in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X