ದೇಶದಲ್ಲಿ ಬೆಂಕಿಯಂತೆ ಸುಡುತ್ತಿರುವ ನಗರಗಳ ಪೈಕಿ 9 ಮಹಾರಾಷ್ಟ್ರದಲ್ಲಿವೆ!

ನಾಗಪುರ, ಏ.27: ಇಡೀ ಭಾರತವೇ ಬೆಂಕಿಯಲ್ಲಿ ಬೆಂದಂತಾಗುತ್ತಿದೆ. ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ಏರುತ್ತಲೇ ಹೋಗುತ್ತಿವೆ.

ವಿಶ್ವದಲ್ಲೇ ಅತಿ ಹೆಚ್ಚು ಬಿಸಿಲಿರುವ ನಗರಗಳ ಪಟ್ಟಿಯನ್ನು ವೆಬ್‌ಸೈಟ್‌ ಒಂದು ಬಿಡುಗಡೆ ಮಾಡಿದೆ, ಅದರಲ್ಲಿ 15ಕ್ಕೆ 15 ನಗರಗಳೂ ಭಾರತದ್ದೇ ಆಗಿರುವುದು ಹೆಚ್ಚು ಆತಂಕಕ್ಕೀಡು ಮಾಡಿದೆ.

ಆ 15 ನಗರಗಳ ಪೈಕಿ 9 ನಗರಗಳು ಮಹಾರಾಷ್ಟ್ರದಲ್ಲಿವೆ ಎಂದರೆ ಮಹಾರಾಷ್ಟ್ರದಲ್ಲಿ ಎಷ್ಟು ಉಷ್ಣಾಂಶವಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ.

Indias hottest cities 9 of the 15 from Mharashtra

ಎಲ್ ಡೊರಾಡೋ ವೆಬ್‌ಸೈಟ್ ಮಾಹಿತಿ ಪ್ರಕಾರ ಮಧ್ಯಪ್ರದೇಶದ ಕಾರ್‌ಗಾವ್ ನಲ್ಲಿ ಶುಕ್ರವಾರ ಅತಿ ಹೆಚ್ಚು ಅಂದರೆ 46.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ವಿದರ್ಭಾದ ಅಕೋಲ್ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಗರಿಷ್ಠ ಉಷ್ಣಾಂಶ 46.4 ಡಿಗ್ರಿ ಸೆಲ್ಸಿಯಸ್ ಇದೆ. 15 ನಗರಗಳ ಪೈಕಿ 9 ನಗರಗಳು ಮಹಾರಾಷ್ಟ್ರದ್ದಾಗಿವೆ. ಮಧ್ಯಪ್ರದೇಶದ ಮೂರು ನಗರಗಳು, ಉತ್ತರ ಪ್ರದೇಶದ ಎರಡು ನಗರಗಳು, ತೆಲಂಗಾಣದ ಒಂದು ನಗರವೂ ಸೇರಿದೆ.

ಅಲ್ಲಿ 42 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ನಾಗಪುರ ವಿಶ್ವದಲ್ಲೇ ಅತಿ ಹೆಚ್ಚು ತಾಪಮಾನವುಳ್ಳ ನಗರವಾಗಿದೆ. ಅಮರಾವತಿ, ಬ್ರಹ್ಮಪುರಿ, ಚಂದ್ರಾಪುರ, ವರ್ಧಾದಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಎನ್‌ಜಿಓ ನೀಡಿರುವ ಮಾಹಿತಿ ಪ್ರಕಾರ ಚಂದ್ರಾಪುರದ 15 ಕಿ,ಮೀ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪಕ್ಷಿಗಳು ಮೃತಪಟ್ಟಿವೆ. ಅಕೋಲಾ, ಅಮರಾವತಿ, ನಾಗಪುರದಲ್ಲಿ ಕೆಲವೇ ದಿನಗಳಲ್ಲಿ ಗರಿಷ್ಠ ಉಷ್ಣಾಂಶ 47 ಡಿಗ್ರಿ ತಲುಪುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಕಲಬುರಗಿಯಲ್ಲಿ 43.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+