ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನೋತ್ಸವ: ಹುಟ್ಟುಹಬ್ಬ ಆಚರಣೆಗೆ ಸಜ್ಜಾದ ಭಾರತ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 14: ವಿಶ್ವದ ಅತಿದೊಡ್ಡ ಗಣರಾಜ್ಯ ಭಾರತಕ್ಕೆ ಸ್ವತಂತ್ರ ಬಂದು 67 ವರ್ಷಗಳು ಕಳೆದರೂ ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಮಹಿಳೆ ಮಕ್ಕಳ ಮೇಲೆ ದೌರ್ಜನ್ಯದಿಂದ ಮುಕ್ತವಾಗಿಲ್ಲ. ನಕ್ಸಲರು, ಉಗ್ರರ ಜತೆ ಕಾದಾಟದ ಜತೆಗೆ ಕೋಮು ಗಲಭೆಗಳು, ರಾಜ್ಯ ವಿಭಜನೆಯ ಕೂಗು ಕಾಡುತ್ತಲೇ ಇದೆ. ಎಲ್ಲದರ ನಡುವೆ ಭಾರತ ಮತ್ತೊಮ್ಮೆ ಜನ್ಮದಿನ ಆಚರಣೆಗೆ ಸಜ್ಜಾಗಿದೆ.

ಅತ್ಯಂತ ಹೆಚ್ಚಿನ ಯುವ ಶಕ್ತಿಯನ್ನು ಹೊಂದಿರುವ ದೇಶವಾಗಿರುವ ಭಾರತ ಇಂದಿಗೂ ಕೃಷಿ ಪ್ರಧಾನ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ. ಅಣುಶಕ್ತಿ, ಕ್ರಿಕೆಟ್, ವಿಜ್ಞಾನ, ತಂತ್ರ ಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ.[ಆ.14ರಂದೇ ಪಾಕಿಸ್ತಾನದ ಸ್ವತಂತ್ರ ದಿನಾಚರಣೆ ಏಕೆ?]

ಅಭೂತಪೂರ್ವ ಭದ್ರತೆಯ ನಡುವೆ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ. [ಜಾಲತಾಣಗಳಲ್ಲಿ ನಿರಾತಂಕವಾಗಿ ಧ್ವಜ ಪ್ರದರ್ಶಿಸಿ]

ಬೆಂಗಳೂರಿನಲ್ಲಿ ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಂದಿನಂತೆ ಜನತೆಗೆ ಭರವಸೆ ನೀಡುವ ಭಾಷಣ ಮಾಡಲಿದ್ದಾರೆ. ದೇಶದ ಹಲವೆಡೆ ಸಂಭ್ರಮದ ಹುಟ್ಟುಹಬ್ಬ ಆಚರಣೆಗೆ ನಡೆದಿರುವ ಪೂರ್ವ ತಯಾರಿ ಚಿತ್ರಗಳು ಇಲ್ಲಿವೆ. ಚಿತ್ರಗಳ ಕೃಪೆ: ಪಿಟಿಐ.

ಹೈದರಾಬಾದಿನಲ್ಲಿ ಪೊಲೀಸ್ ಅಧಿಕಾರಿಗಳು

ಹೈದರಾಬಾದಿನಲ್ಲಿ ಪೊಲೀಸ್ ಅಧಿಕಾರಿಗಳು

ಹೈದರಾಬಾದಿನಲ್ಲಿ ಪೊಲೀಸ್ ಅಧಿಕಾರಿಗಳು ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಸಮವಸ್ತ್ರ ಧರಿಸಿ ಸಿದ್ಧರಾಗಿದ್ದಾರೆ. ಗೋಲ್ಕೊಂಡದ ಕೋಟೆಯಲ್ಲಿ ಕುಳಿತ ದೃಶ್ಯ.

ಅಮೃತ್ ಸರ್ ನಲ್ಲಿ ಶಾಲಾ ಮಕ್ಕಳ ಸಂಭ್ರಮ

ಅಮೃತ್ ಸರ್ ನಲ್ಲಿ ಶಾಲಾ ಮಕ್ಕಳ ಸಂಭ್ರಮ

ಅಮೃತ್ ಸರ್ ನಲ್ಲಿ ಶಾಲಾ ಮಕ್ಕಳು ಸ್ವತಂತ್ರ ದಿನಕ್ಕಾಗಿ ಸಂಭ್ರಮದಿಂದ ತಯಾರಾಗುತ್ತಿದ್ದಾರೆ. ಸಾಂಪ್ರದಾಯಿಕ ಪಂಜಾಬಿ ಉಡುಗೆಗಳನ್ನು ತೊಟ್ಟ ವಿದ್ಯಾರ್ಥಿನಿಯರು ಗುರು ನಾನಕ್ ಸ್ಟೇಡಿಯಂನಲ್ಲಿ ಕಂಡು ಬಂದಿದ್ದು ಹೀಗೆ

ಪಶ್ಚಿಮ ಬಂಗಾಲದ ಗ್ರಾಮದ ಮಕ್ಕಳು

ಪಶ್ಚಿಮ ಬಂಗಾಲದ ಗ್ರಾಮದ ಮಕ್ಕಳು

ಪಶ್ಚಿಮ ಬಂಗಾಲದ ದಕ್ಷಿಣ ದಿನಾಜ್ ಪುರ್ ಬಳಿಯ ಗ್ರಾಮದ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ಚಿತ್ರ.

ನವದೆಹಲಿಯಲ್ಲಿ ಸಂಸತ್ತು ಅಲಂಕೃತಗೊಂಡಿದೆ

ನವದೆಹಲಿಯಲ್ಲಿ ಸಂಸತ್ತು ಅಲಂಕೃತಗೊಂಡಿದೆ

ನವದೆಹಲಿಯಲ್ಲಿ ಸಂಸತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ.PTI Photo by Kamal Singh

ಗುವಾಹಟಿಯಲ್ಲಿ ಬಿಗಿ ಭದ್ರತೆ

ಗುವಾಹಟಿಯಲ್ಲಿ ಬಿಗಿ ಭದ್ರತೆ

ಅಸ್ಸಾಂನ ಗುವಾಹಟಿಯಲ್ಲಿ ಶುಕ್ರವಾರದಂದು ಬಾಂಬ್ ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿದೆ. ಸರಾಯಿಘಾಟ್ ಸೇತುವೆ ಮೇಲೆ ರೈಲ್ವೆ ಟ್ರ್ಯಾಕ್ ಕಾಯುತ್ತಿರುವ ಯೋಧರು.

ಕೆಂಪುಕೋಟೆ ಬಳಿ ಪರೇಡ್ ಗೆ ಸಿದ್ಧತೆ

ಕೆಂಪುಕೋಟೆ ಬಳಿ ಪರೇಡ್ ಗೆ ಸಿದ್ಧತೆ

ಕೆಂಪುಕೋಟೆ ಬಳಿ ಪರೇಡ್ ಗೆ ಸಿದ್ಧತೆ ಪೂರ್ಣಗೊಂಡಿದೆ. ಭಾರತೀಯ ಜಲಸೇನೆಯ ಯೋಧರ ಮ್ಯೂಸಿಕ್ ಬ್ಯಾಂಡ್ ತಂಡ ಪಥ ಸಂಚಲನದ ತಾಲೀಮು ನಡೆಸಿದ್ದು ಹೀಗೆ

ಬೆಂಗಾಲದ ಹಸಿರು ಪರಿಸರದಲ್ಲಿ ತ್ರಿವರ್ಣ ಧ್ವಜ

ಬೆಂಗಾಲದ ಹಸಿರು ಪರಿಸರದಲ್ಲಿ ತ್ರಿವರ್ಣ ಧ್ವಜ

ಪಶ್ಚಿಮ ಬೆಂಗಾಲದ ಬಿರ್ ಬಮ್ ನ ಪಾರುಯಿ ಪ್ರದೇಶದಲ್ಲಿ ಹಸಿರು ಪರಿಸರದಲ್ಲಿ ತ್ರಿವರ್ಣ ಧ್ವಜ ಹಿಡಿದು ಹೊರಟ ಮಕ್ಕಳು.

ದಾರ್ಜಲಿಂಗ್ ನಿಂದ್ ಬಂದ ನೃತ್ಯಗಾರರು

ದಾರ್ಜಲಿಂಗ್ ನಿಂದ್ ಬಂದ ನೃತ್ಯಗಾರರು

ದಾರ್ಜಲಿಂಗ್ ನಿಂದ್ ಬಂದ ನೃತ್ಯಗಾರರು ಸ್ವಾತಂತ್ರೋತ್ಸವ ದಿನಕ್ಕಾಗಿ ತಯಾರಿ ನಡೆಸಿದ್ದಾರೆ. PTI Photo by Swapan Mahapatra

ಅಲಂಕಾರಗೊಂಡ ಬಣ್ಣದ ಚಿಲುಮೆ

ಅಲಂಕಾರಗೊಂಡ ಬಣ್ಣದ ಚಿಲುಮೆ

ಸಂಸತ್ತಿನ ಮುಂದುಗಡೆ ಇರುವ ಚಿಲುಮೆ ಈಗ ಬಣ್ಣಗಳಿಂದ ಕಂಗೊಳಿಸುತ್ತಿದೆ. ಗುರುವಾರ ರಾತ್ರಿ ಚಿಲುಮೆ ಕಾಣಿಸಿದ್ದು ಹೀಗೆ PTI Photo by Kamal Singh

ಕೋಲ್ಕತ್ತಾದಲ್ಲಿ ಸಾಂಪ್ರದಾಯಿಕ ವಾದ್ಯ, ನೃತ್ಯ

ಕೋಲ್ಕತ್ತಾದಲ್ಲಿ ಸಾಂಪ್ರದಾಯಿಕ ವಾದ್ಯ, ನೃತ್ಯ

ಕೋಲ್ಕತ್ತಾದಲ್ಲಿ ಸಾಂಪ್ರದಾಯಿಕ ವಾದ್ಯ, ನೃತ್ಯ, ಗೀತ ನಾಯನದ ತಯಾರಿ.

English summary
India's history is replete with invaders from foreign lands who came to plunder its riches. As India gears up to celebrate its 69th Independence Day, we take a look at preparation from nook and corner of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X