Get Updates
Get notified of breaking news, exclusive insights, and must-see stories!

Adani: ಕೈಗಾರಿಕಾ ವಲಯಕ್ಕೆ ಗುಡ್‌ನ್ಯೂಸ್: ಅದಾನಿ ಟೋಟಲ್ ಗ್ಯಾಸ್‌ನಿಂದ ನೈಸರ್ಗಿಕ ಅನಿಲ ದರದಲ್ಲಿ ಭಾರಿ ಇಳಿಕೆ

Adani Gas: ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಕೆಲವು ಕೈಗಾರಿಕಾ ಗ್ರಾಹಕರಿಗೆ ಪೂರೈಕೆಯಾಗುವ ಹೆಚ್ಚುವರಿ ನೈಸರ್ಗಿಕ ಅನಿಲ (Natural Gas)ದ ಬೆಲೆಯನ್ನು ಇಳಿಕೆ ಮಾಡಿದೆ. ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (SCM)ಗೆ ಈ ಹಿಂದೆ ಇದ್ದ ₹119.90 ದರವನ್ನು ಈಗ ₹82.95ಕ್ಕೆ ಇಳಿಸಲಾಗಿದೆ. ಕಂಪನಿ ಪ್ರಕಟಣೆಯ ಪ್ರಕಾರ, ಪರಿಷ್ಕೃತ ದರಗಳು ಮಾರ್ಚ್ 16ರಂದು ಬೆಳಿಗ್ಗೆ 06:00 ಗಂಟೆಯಿಂದ ಜಾರಿಗೆ ಬಂದಿವೆ. ಈ ನಿರ್ಧಾರವು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಕೈಗಾರಿಕಾ ವಲಯಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ.

ಮಾರುಕಟ್ಟೆಯಲ್ಲಿ ಪೂರೈಕೆ ವ್ಯತ್ಯಯಗಳು ಮುಂದುವರಿದಿದ್ದರೂ ಸಹ, ಅನಿಲದ ಮೂಲ ಬೆಲೆಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. "ಅನಿಲ ಪೂರೈಕೆಯಲ್ಲಿನ ಮಿತಿಗಳ ನಡುವೆಯೂ ವ್ಯವಸ್ಥೆಯ ಸ್ಥಿರತೆ ಮತ್ತು ಅನಿಲದ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಮೂಲ ಬೆಲೆ ಇಳಿಕೆಯಾದ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

Adani Total Gas Cuts Excess Natural Gas Price to 82 95 per SCM for Industrial Users Know details

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಭಾರತಕ್ಕೆ ಪೂರೈಕೆಯಾಗುವ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಹಿಂದೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಒಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಗ್ರಾಹಕರು ತಾವು ಒಪ್ಪಂದ ಮಾಡಿಕೊಂಡ ಒಟ್ಟು ಅನಿಲದ ಪ್ರಮಾಣದಲ್ಲಿ ಕೇವಲ ಶೇ 40ರಷ್ಟು ಮಾತ್ರ ಬಳಸುವಂತೆ ಮತ್ತು ಅನಿಲ ಬಳಕೆಯನ್ನು ಕಡಿತಗೊಳಿಸುವಂತೆ ಕಂಪನಿ ತಿಳಿಸಿತ್ತು. ಪೂರೈಕೆ ವ್ಯತ್ಯಯದ ಕಾರಣದಿಂದ ಅನಿಲವನ್ನು ಸಮರ್ಪಕವಾಗಿ ನಿರ್ವಹಿಸಿ ಎಲ್ಲ ಗ್ರಾಹಕರಿಗೂ ಸಮಾನವಾಗಿ ವಿತರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಒಪ್ಪಂದದ ಪ್ರಮಾಣದ 40% ಮಿತಿಯನ್ನು ಮೀರಿ ಬಳಸುವ ಅನಿಲಕ್ಕೆ ಸ್ಪಾಟ್ ಮಾರುಕಟ್ಟೆ ದರಗಳು ಅನ್ವಯಿಸಲಾಗುತ್ತಿವೆ. ಈ ವಿಭಾಗಕ್ಕೆ ಅನ್ವಯಿಸುವ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
2026 ಮಾರ್ಚ್ 3ರಂದು ಘೋಷಿಸಿದ್ದ ಹೆಚ್ಚುವರಿ ಅನಿಲದ ದರವನ್ನು ಈಗ ಕಡಿತಗೊಳಿಸಲಾಗಿದೆ. ಇದಕ್ಕೂ ಮೊದಲು ಪ್ರತಿ ಎಸ್‌ಸಿಎಂಗೆ ₹119.90 ಆಗಿದ್ದ ದರವನ್ನು ₹82.95ಕ್ಕೆ ಇಳಿಸಲಾಗಿದೆ. ಈ ಪರಿಷ್ಕೃತ ದರವು ಮಾರ್ಚ್ 16ರಿಂದ ಜಾರಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ ಸಹ, ಸಿಸ್ಟಮ್‌ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಅನಿಲದ ಸಮಾನ ವಿತರಣೆಯನ್ನು ನಿರ್ವಹಿಸಲು ಕಂಪನಿಯು ಶ್ರಮಿಸುತ್ತಿದೆ. ಇದರ ನಡುವೆಯೇ, ಮೂಲ ಅನಿಲದ ಬೆಲೆಗಳು ಕಡಿಮೆಯಾಗಿರುವ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚುವರಿ ಅನಿಲ ಪೂರೈಕೆಗೆ ಸಂಬಂಧಿಸಿದ ಇತರ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಮೊದಲಿನಂತೆಯೇ ಮುಂದುವರಿಯಲಿವೆ, ಅವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅಸ್ತಿತ್ವದಲ್ಲಿರುವ ಆದೇಶದ ಪ್ರಕಾರ ಕೈಗಾರಿಕಾ ಗ್ರಾಹಕರಿಗೆ ಶೇ 80ರಷ್ಟು ಅನಿಲ ಪೂರೈಕೆ ಮಾಡುವ ಕುರಿತು ಗೇಲ್ (GAIL India) ಇಂಡಿಯಾ ಲಿಮಿಟೆಡ್‌ನಿಂದ ಸ್ಪಷ್ಟನೆಯನ್ನು ಕೋರಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲೇ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಕಂಪನಿಯು ನೈಸರ್ಗಿಕ ಅನಿಲ (CNG) ಹಾಗೂ ಮನೆಗಳಿಗೆ ಪೈಪ್ ಮೂಲಕ ಪೂರೈಸುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ದರಗಳನ್ನು ಹೆಚ್ಚಿಸದಿರಲು ನಿರ್ಧರಿಸಿತ್ತು. ಆದರೆ, ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲು ಆರಂಭವಾದ ಹಿನ್ನೆಲೆ, ಕಂಪನಿಯು ಕೆಲವು ದೊಡ್ಡ ಕೈಗಾರಿಕಾ ಗ್ರಾಹಕರಿಗೆ ಅನಿಲ ಪೂರೈಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು ಎಂದು ತಿಳಿಸಿದೆ.

ಕಂಪನಿಯ ಸುಮಾರು ಶೇ 70ರಷ್ಟು ಅನಿಲವು ಸ್ಥಳೀಯವಾಗಿ (ದೇಶೀಯವಾಗಿ) ಲಭ್ಯವಾಗುತ್ತದೆ. ಇದನ್ನು ಮುಖ್ಯವಾಗಿ ಸಿಎನ್‌ಜಿ (CNG) ವಾಹನ ಬಳಕೆದಾರರಿಗೆ ಮತ್ತು ಮನೆಗಳಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮೂಲಕ ಪೂರೈಸಲಾಗುತ್ತದೆ. ಈ ವಿಭಾಗದ ಗ್ರಾಹಕರಿಗೆ ಅನ್ವಯವಾಗುವ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಸುಮಾರು ಶೇ 30ರಷ್ಟು ಅನಿಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಎಲ್‌ಎನ್‌ಜಿ ಮೂಲಕ ಪಡೆಯಲಾಗುತ್ತದೆ. ಇದನ್ನು ಬಹುತೇಕ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಪೂರೈಸಲಾಗುತ್ತದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನಿಲ ಹಂಚಿಕೆಯ ಆದ್ಯತೆಗಳನ್ನು ಪರಿಷ್ಕರಿಸಿದೆ. ಇದರ ಅನ್ವಯ, ಸಿಎನ್‌ಜಿ ಮತ್ತು ಗೃಹಬಳಕೆಯ ಪಿಎನ್‌ಜಿ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಮದು ಮಾಡಿಕೊಂಡ ಎಲ್‌ಎನ್‌ಜಿ ದರಗಳನ್ನು ಒಟ್ಟುಗೂಡಿಸಿ ನಿಗದಿಪಡಿಸಲಾಗಿದೆ. ಇದರ ಪರಿಣಾಮವಾಗಿ ಅನಿಲದ ದರ ಕಡಿಮೆಯಾಗಿದ್ದು, ಆ ಲಾಭವನ್ನು ಈಗ ಗ್ರಾಹಕರಿಗೆ ಹಂಚಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಹಿಂದೆ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ನಿಗದಿಪಡಿಸಿದ ಶೇ 40ರಷ್ಟು ಮಿತಿಯನ್ನು ಮೀರಿ ಅನಿಲ ಬಳಸಿದರೆ, ಹೆಚ್ಚುವರಿ ಬಳಕೆಯ ಅನಿಲಕ್ಕೆ ಪ್ರತಿ ಎಸ್‌ಸಿಎಂಗೆ ಸುಮಾರು ₹119 ದರ ವಿಧಿಸಲಾಗುತ್ತಿತ್ತು.
ಪ್ರಸ್ತುತ ಅನಿಲ ಪೂರೈಕೆಯಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಲೇ, ಎಲ್ಲಾ ವರ್ಗದ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಕಂಪನಿಯು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+