ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.14ರಂದೇ ಪಾಕಿಸ್ತಾನದ ಸ್ವತಂತ್ರ ದಿನಾಚರಣೆ ಏಕೆ?

By Mahesh
|
Google Oneindia Kannada News

ಬೆಂಗಳೂರು, ಆ.14: ಬ್ರಿಟಿಷ್ ಸರ್ವಾಧಿಕಾರದಿಂದ ಮುಕ್ತಗೊಂಡು ಆಗಸ್ಟ್ 15, 1947 ರಂದು ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡವು. ಆದರೆ, ಭಾರತ ಹಾಗೂ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ಆಚರಣೆ ದಿನದಲ್ಲಿ ಮಾತ್ರ ವ್ಯತ್ಯಾಸ ಎದ್ದು ಕಾಣಬಹುದಾಗಿದೆ. ಭಾರತಕ್ಕಿಂತ ಒಂದು ದಿನ ಮೊದಲು ಪಾಕಿಸ್ತಾನ ಸ್ವತಂತ್ರ ದಿನವನ್ನು ಆಚರಿಸುತ್ತದೆ, ಏಕೆ ಹೀಗೆ?

ಕಾರಣ 1: ಪಾಕಿಸ್ತಾನ ತನ್ನ ಮೊದಲ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 15ರಂದೇ ಆಚರಿಸಿಕೊಂಡಿತ್ತು. ಅದರೆ, ನಂತರದ ವರ್ಷಗಳಲ್ಲಿ ಆಗಸ್ಟ್ 14ಕ್ಕೆ ಬದಲಾಯಿಸಲಾಯಿತು. ಬ್ರಿಟಿಷ್ ವೈಸ್ ರಾಯ್ ಲಾರ್ಡ್ ಮೌಂಟ್ ಬಾಟನ್ ಅವರು ತಮ್ಮ ಅನುಕೂಲಕ್ಕಾಗಿ ದಿನಾಂಕವನ್ನು ಹಿಂದು ಮುಂದು ಮಾಡಿದರು.

1945ರ ಮಹಾ ವಿಶ್ವಯುದ್ಧದಲ್ಲಿ ಜಪಾನ್ ಶರಣಾಗತಿ ಹಾಗೂ ಮೈತ್ರಿಕೂಟದ ವಿಜಯೋತ್ಸವದ ಸಂಸ್ಮರಣೆಯನ್ನು ಆಚರಿಸಲು ತೆರಳಬೇಕಿದ್ದ ಮೌಂಟ್ ಬಾಟನ್ ಅವರು ಆಗಸ್ಟ್ 14 ರಂದು ಪಾಕಿಸ್ತಾನಕ್ಕೆ ಸ್ವತಂತ್ರ ಘೋಷಿಸಿ, ಆಗಸ್ಟ್ 15 ರಂದು ಭಾರತಕ್ಕೆ ಸ್ವತಂತ್ರ ನೀಡಿದರು.

Why Pakistan celebrates its I-Day on Aug 14

ಕಾರಣ 2: 1948ರಲ್ಲಿ ಪಾಕಿಸ್ತಾನದಲ್ಲಿ ಸ್ವತಂತ್ರ ದಿನಾಚರಣೆ ಸಂದರ್ಭಕ್ಕೆ ಸರಿಯಾಗಿ ರಂಜಾನ್ ಆಚರಣೆಯೂ ಇತ್ತು. ಹೀಗಾಗಿ ರಂಜಾನ್ ಮಾಸದ 27ನೇ ದಿನಕ್ಕೆ ಅನುಗುಣವಾಗಿ ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಆಗಸ್ಟ್ 14ರಂದೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

1947ರ ಭಾರತೀಯ ಸ್ವತಂತ್ರ ದಿನಾಚರಣೆ ಕಾಯ್ದೆ ಪ್ರಕಾರ '"As from the fifteenth day of August, nineteen hundred and forty-seven, two independent Dominions shall be set up in India, to be known respectively as India and Pakistan." ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಪಾಕಿಸ್ತಾನ ತನ್ನ ಅನುಕೂಲಕ್ಕಾಗಿ ಒಂದು ದಿನ ಮುಂಚಿತವಾಗಿ ಹಬ್ಬ ಆಚರಿಸುತ್ತಾ ಬಂದಿದೆ.

ಪಾಕಿಸ್ತಾನದ ಸ್ಥಾಪಕ ಮಹಮ್ಮದ್ ಆಲಿ ಜಿನ್ನಾ ಅವರು ಆಗಸ್ಟ್ 15ರನ್ನು ಪಾಕಿಸ್ತಾನ ಹುಟ್ಟುಹಬ್ಬ ಆಚರಣೆಗೆ ಕರೆ ನೀಡಿದ್ದರು. 1948ರ ಜುಲೈನಲ್ಲಿ ಪಾಕಿಸ್ತಾನ ಅಂಚೆ ಕಚೇರಿ ಪ್ರಕಟಿಸಿದ ಗೌರವ ಸೂಚಕ ಅಂಚೆ ಚೀಟಿಗಳಲ್ಲೂ ಆಗಸ್ಟ್ 15, ಪಾಕಿಸ್ತಾನದ ಸ್ವತಂತ್ರ ದಿನಾಚರಣೆ ಎಂದೇ ನಮೂದಿಸಲಾಗಿತ್ತು.

English summary
The separate states of India and Pakistan were created at midnight on August 15, 1947. Yet while India celebrates that day as its independence day, Pakistan celebrates its independence day a day before. Why it is so?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X