ಬಿಸಿಲಿನ ಶಾಖದಿಂದ ಮುಕ್ತಿ ಪಡೆಯಲು ರಾಗಿ, ಬಾರ್ಲಿ ಮಾಲ್ಟ್‌ಗಳೇ ರಾಮಬಾಣ

ಬೇಸಿಗೆ ಕಾಲ ಆರಂಭವಾದಂತೆಯೇ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಡೀಹೈಡ್ರೇಶನ್, ತಲೆನೋವು, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಸಮಯದಲ್ಲಿ ದೇಹಕ್ಕೆ ಸರಿಯಾದ ಆಹಾರ ಮತ್ತು ಪೌಷ್ಟಿಕಾಂಷ ಅಗತ್ಯ.

ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ರಾಗಿ ಮಾಲ್ಟ್‌ ಹಾಗೂ ಬಾರ್ಲಿ ಮಾಲ್ಟ್ ಕುಡಿಯುವುದು ಬೆಸ್ಟ್‌ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಎರಡೂ ಮಾಲ್ಟ್‌ಗಳಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಅಲ್ಲದೆ ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತವೆ.

Summer Heat Relief

ರಾಗಿ ಮಾಲ್ಟ್ ಪ್ರಯೋಜನಗಳು

ಅಮೃತ ಧಾನ್ಯ' ಎಂದೇ ಕರೆಯಲ್ಪಡುವ ರಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಇರುವ ಪೋಶಕಾಂಶಗಳು ಸಿಗುತ್ತವೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿವಿಧ ವಿಟಮಿನ್‌ಗಳಿದ್ದು ಬೇಸಿಗೆಯಲ್ಲಿ ಮನುಷ್ಯನ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತವೆ. ಇದರಲ್ಲಿರುವ ಖನಿಜಾಂಶ ಎಲುಬುಗಳನ್ನು ಬಲಪಡಿಸುತ್ತದೆ. ಮಕ್ಕಳಿಗೂ ಮತ್ತು ವಯೋವೃದ್ಧರಿಗೂ ರಾಗಿ ಮಾಲ್ಟ್ ಅತ್ಯಂತ ಉಪಯುಕ್ತವಾಗಿದೆ.

ರಾಗಿ ಮಾಲ್ಟ್‌ ಸೇವನೆಯಿಂದ ಆಗುವ ಪ್ರಯೋಜನ ಏನು?

  • ರಾಗಿ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

  • ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ

  • ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ

  • ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯವಾಗುತ್ತದೆ

  • ತೂಕ ಕಡಿಮೆ ಮಾಡಲು ಸಹಕಾರಿ

    ರಾಗಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

    ಎಚ್ಚರಿಕೆ ಅಗತ್ಯ

    ರಾಗಿಯಲ್ಲಿ ಆಕ್ಸಲೇಟ್‌ಗಳು ಹೆಚ್ಚು ಇರುವುದರಿಂದ ಕಿಡ್ನಿ ಸ್ಟೋನ್ ಅಥವಾ ಕಿಡ್ನಿ ಸಂಬಂಧಿತ ಸಮಸ್ಯೆ ಇರುವವರು ಹೆಚ್ಚು ಪ್ರಮಾಣದಲ್ಲಿ ರಾಗಿ ಮಾಲ್ಟ್‌ ಸೇವಿಸುವುದು ಸರಿಯಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಬಾರ್ಲಿ ಮಾಲ್ಟ್ ಪ್ರಯೋಜನಗಳು:

    ಬಾರ್ಲಿ ಕೂಡ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಉತ್ತಮ ಪಾನೀಯ. ಬಾರ್ಲಿಯಲ್ಲಿ ಪೀಚು (ಫೈಬರ್) ಅಂಶ ಹೆಚ್ಚು ಇರುವುದರಿಂದ ಹಸಿವು ತಡವಾಗಿ ಆಗುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯಕ.

    ಬಾರ್ಲಿ ಮಾಲ್ಟ್ ತಯಾರಿಸುವ ವಿಧಾನ:

    ಬಾರ್ಲಿ ಮಾಲ್ಟ್ ತಯಾರಿಸುವ ವಿಧಾನ ಬಹಳ ಸರಳವಾಗಿದೆ. ಮೊದಲು ಒಂದು ಕಪ್ ಬಾರ್ಲಿಯನ್ನು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಬೇಕು. ಬಳಿಕ ನೆನಸಿದ ನೀರನ್ನು ತೆಗೆದು ಬಾರ್ಲಿ ಬೇರ್ಪಡಿಸಬೇಕು. ನಂತರ ಅದಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಈ ಮಾಲ್ಟ್‌ ತಣ್ಣಗಾದ ಬಳಿಕ ನಿಮಗೆ ಇಷ್ಟವಾದರೆ, ಅದಕ್ಕೆ ಮಜ್ಜಿಗೆ, ಉಪ್ಪು ಮತ್ತು ಜೀರಿಗೆ ಸೇರಿಸಿ ಕುಡಿಯಬಹುದು. ಸ್ವಲ್ಪ ನಿಂಬೆ ರಸ ಹಾಕಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.


    ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ

    ಬಾರ್ಲಿ ಮಾಲ್ಟ್ ಸೇವನೆಯಿಂದ ದೇಹಕ್ಕೆ ತಂಪು ದೊರೆಯುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಧಾರಿಸಲು, ತೂಕ ನಿಯಂತ್ರಿಸಲು ಮತ್ತು ಬೊಜ್ಜು ಮುಂತಾದ ಸಮಸ್ಯೆಗಳನ್ನು ದೂರ ಇಡಲು ಸಹಕಾರಿಯಾಗಿದೆ.

    ಒಟ್ಟಿನಲ್ಲಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ತೆಂಗಿನಕಾಯಿ ನೀರು, ಕಬ್ಬಿನ ರಸ ಸೇರಿದಂತೆ ಪೌಷ್ಟಿಕ ಪಾನೀಯಗಳ ಜೊತೆ ರಾಗಿ ಮಾಲ್ಟ್‌ ಅಥವಾ ಬಾರ್ಲಿ ಮಾಲ್ಟ್‌ ಸೇವಿಸಿದರೆ ದೇಹಕ್ಕೆ ಶಕ್ತಿ ಮತ್ತು ತಂಪು ಎರಡೂ ದೊರೆಯುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಸೂಚನೆ: ಈ ಮೇಲಿನ ಪಾನಿಯಗಳನ್ನು ಸೇವಿಸುವುದಕ್ಕೂ ಮುನ್ನ ನೀವು ನಿಮ್ಮ ವೈದ್ಯರ ಸಲಹೆ ಪಡೆಯುವದು ಅಗತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+