ಅಸ್ಸಾಂ : ಭಯೋತ್ಪಾದಕರ ಸಂಚು ವಿಫಲಗೊಳಿಸಿದ ಸೇನೆ
ನವದೆಹಲಿ, ಆಗಸ್ಟ್ 14 : ಅಸ್ಸಾಂನಲ್ಲಿ ಸಂಭವಿಸಬಹುದಾಗಿದ್ದ ಭಾರೀ ಭಯೋತ್ಪಾದಕ ದಾಳಿಯನ್ನು ಸೇನೆ ವಿಫಲಗೊಳಿಸಿದೆ. ರೈಲ್ವೆ ಹಳಿಯ ಮೇಲೆ ಇಟ್ಟಿದ್ದ ಸ್ಫೋಟಕಗಳನ್ನು ಸೇನೆ ವಶಪಡಿಸಿಕೊಂಡಿದ್ದು, ನಿಷ್ಕ್ರಿಯಗೊಳಿಸಿದೆ.
ಕೋಕ್ರಾಜಾರ್-ಗೌಹಾತಿ ರೈಲ್ವೆ ಹಳಿಯ ಮೇಲೆ ಇಡಲಾಗಿದ್ದ 7 ಕೆಜಿ ಸ್ಫೋಟಕಗಳನ್ನು ಸೇನಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಸ್ವಾತಂತ್ರ ದಿನಾಚರಣೆ ಹಿನ್ನಲೆಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ ಸೂಚನೆ ರವಾನಿಸಿತ್ತು.

ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಉಧಾಂಪುರ್‌ನಲ್ಲಿ ಕೆಲವು ದಿನಗಳ ಹಿಂದೆ ಭಯೋತ್ಪಾದಕ ದಾಳಿ ನಡೆದಿತ್ತು. ಉಧಾಂಪುರ್‌ನಲ್ಲಿ ಉಗ್ರ ಮೊಹಮ್ಮದ್ ನವೀದ್‌ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಆದ್ದರಿಂದ ದೇಶದ ಇತರ ರಾಜ್ಯಗಳಲ್ಲಿ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿದೆ. [ಉಗ್ರ ನವೀದ್ NIA ವಶಕ್ಕೆ]
ಸ್ವಾತಂತ್ರ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications