Hydrogen Bike: 180 ಕಿ.ಮೀ ಮೈಲೇಜ್, ಪೆಟ್ರೋಲ್-ವಿದ್ಯುತ್ ಬೇಕಾಗಿಲ್ಲ! ಭಾರತದಲ್ಲಿ ಹೊಸ ಆವಿಷ್ಕಾರ ಎಥನಾಲ್ ಸಹ ಬೇಡ
Hydrogen Bike: ಮಹಾರಾಷ್ಟ್ರದ ಇಬ್ಬರು ಯುವಕರು ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಜಗತ್ತಿನಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಹಾಗೂ ಎಥನಾಲ್‌ನಿಂದಲೂ ಚಲಾಯಿಸಬಹುದಾದ ವಾಹನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಎಥನಾಲ್‌ನಿಂದ ವಾಹನಗಳಲ್ಲಿ ಮೈಲೇಜ್ ಕೊರತೆ ಇದೆ ಎನ್ನುವ ಆರೋಪವೂ ಸಹ ಕೇಳಿ ಬಂದಿದೆ. ಆದರೆ ಭಾರತದಲ್ಲಿ ಹೊಸ ಹೊಸ ಅನ್ವೇಷಣೆಗಳಿಗೆ ಕಡಿಮೆ ಏನಿಲ್ಲ. ಇದೀಗ ಮಹಾರಾಷ್ಟ್ರದ ಇಬ್ಬರು 180 ಕಿ.ಮೀ. ವರೆಗೆ ಪ್ರಯಾಣಿಸಲು ಸಾಧ್ಯವಾಗುವ ಹೈಡ್ರೋಜನ್ ಬೈಕ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ವಿಶೇಷತೆ ಏನೆಂದರೆ, ಈ ಬೈಕ್ ಅನ್ನು ವಿದ್ಯುತ್ ಅಥವಾ ಪೆಟ್ರೋಲ್ ಬಳಕೆ ಮಾಡದೆಯೂ ಚಲಾಯಿಸಬಹುದಾಗಿದೆ.
ಮಹಾರಾಷ್ಟ್ರದ ಪುಣೆಯ ಸತ್ಯಜಿತ್ ಫಡ್ಕೆ ಮತ್ತು ಸುಪ್ರಿಯಾ ಪಟವರ್ಧನ್ ಅವರು ಮೇಡ್-ಇನ್-ಇಂಡಿಯಾ ಹೈಡ್ರೋಜನ್ ಚಾಲಿತ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಇದು ಸುಮಾರು ಎರಡು ನಿಮಿಷಗಳ ಇಂಧನ ತುಂಬುವಿಕೆಯೊಂದಿಗೆ 180 ಕಿ.ಮೀ. ವರೆಗೆ ಪ್ರಯಾಣಿಸಬಹುದು. ಈ ಹೊಸ ಹಾಗೂ ಭವಿಷ್ಯದ ಬೈಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಜಗತ್ತಿನಲ್ಲಿ ಸಾಂಪ್ರದಾಯಿಕ ಹೊಸ ಪೆಟ್ರೋಲ್ ವಾಹನಗಳು ಟ್ರೆಂಡ್ ಸೃಷ್ಟಿ ಮಾಡುತ್ತಿರುವಾಗಲೇ ಹೈಡ್ರೋಜನ್ ಚಾಲಿತ ಬೈಕ್ ಟ್ರೆಂಡ್ ಸೃಷ್ಟಿ ಮಾಡಿದ್ದು ಹಲವರು ಗಮನ ಸೆಳೆದಿದೆ. ಇಂಧನ ತುಂಬುವ ಸಮಯ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಸವಾಲು ಇರುವ ಸಂದರ್ಭದಲ್ಲಿಯೇ ಹೈಡ್ರೋಜನ್ ಚಾಲಿತ ಬೈಕ್ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಹೈಡ್ರೋಜನ್ ಬಳಕೆ ಇನ್ನೂ ಭಾರತದಲ್ಲಿ ಪರಿಚಯಿಸಲಾಗಿಲ್ಲ. ಆದರೆ ಈ ರೀತಿಯ ಹೊಸ ಆವಿಷ್ಕಾರಗಳನ್ನು ಭಾರತೀಯ ಎಂಜಿನಿಯರ್‌ಗಳು ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಭಾರತದ ಈ ಮಾದರಿಯ ಆವಿಷ್ಕಾರಗಳು ವಿಶ್ವವನ್ನೇ ಸೆಳೆಯಲಿದೆ ಎನ್ನಲಾಗಿದೆ.
Hydrogen Bike: ನೆಟ್ಟಿಗರು ಹೇಳಿದ್ದೇನು
ಇನ್ನು ಮಹಾರಾಷ್ಟ್ರದ ಇಬ್ಬರು ಎಂಜಿನಿಯರರು ಅಭಿವೃದ್ಧಿಪಡಿಸಿರುವ ಹೈಡ್ರೋಜನ್ ಚಾಲಿತ ಬೈಕ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದಲ್ಲಿ ಈ ರೀತಿ ಅನೇಕ ಆಸಕ್ತಿದಾಯಕ ಆವಿಷ್ಕಾರಗಳು ನಡೆಯುತ್ತಿವೆ. ಆದರೆ ಅವುಗಳಲ್ಲಿ ಕೆಲವು ಸಾರ್ವಜನಿಕರಿಗೆ ಎಂದಿಗೂ ಲಭ್ಯವಾಗಲಿಲ್ಲ. ಉದಾಹರಣೆಗಳಲ್ಲಿ ನೀರು ಆಧಾರಿತ ತಂತ್ರಜ್ಞಾನವನ್ನು ಬಳಸುವ ಕಾರುಗಳು ಮತ್ತು ಪಾಚಿ ಮತ್ತು ಸಸ್ಯಗಳಿಂದ ಡೀಸೆಲ್ ಅಥವಾ ಇತರ ಇಂಧನಗಳನ್ನು ಉತ್ಪಾದಿಸುವಂತಹ ವಿಚಾರಗಳು ಸೇರಿವೆ ಇವುಗಳ ಆವಿಷ್ಕಾರ ಅಥವಾ ಇದರ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಯಾವುದೂ ಸಹ ಕಾರ್ಯರೂಪಕ್ಕೆ ಬರುತ್ತಿಲ್ಲವೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಹೈಡ್ರೋಜನ್ ಬೈಕ್ ಬಗ್ಗೆ ಜನರು ಹಲವು ಕುತೂಹಲಕಾರಿ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಹೈಡ್ರೋಜನ್ ಸಂಗ್ರಹಣೆ ಮತ್ತು ಸಾಗಣೆ ದೊಡ್ಡ ಸವಾಲಾಗಿದೆ. ಇದಕ್ಕೆ ಪರಿಹಾರ ಕಂಡುಕೊಂಡರೆ ಹೈಡ್ರೋಜನ್‌ನ್ನು ದೊಡ್ಡ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತದೆ. ಆದರೂ, ಈ ಕೆಲಸ ನಿಜಕ್ಕೂ ಉತ್ತಮವಾಗಿದೆ ಎಂದು ಸಾಗರ್ ಎನ್ನುವವರು ಹೇಳಿದ್ದಾರೆ.


Click it and Unblock the Notifications
