Karnataka Rain: ಕಾವೇರಿ - ಕೃಷ್ಣ ನದಿ ವಿಚಾರದಲ್ಲಿ ಏಕಕಾಲಕ್ಕೆ ಕರ್ನಾಟಕಕ್ಕೆ ಸಂಕಷ್ಟ: ಮಹಾರಾಷ್ಟ್ರ - ತಮಿಳುನಾಡು ಕ್ಯಾತೆ
Karnataka Rain: ಕರ್ನಾಟಕಕ್ಕೆ ಇದೀಗ ಏಕಕಾಲಕ್ಕೆ ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಈ ವರ್ಷ ನೈಋತ್ಯ ಮಾನ್ಸೂನ್ನಲ್ಲಿ ಮಳೆ ಕೊರತೆ ಎದುರಾಗಿದೆ. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಇದೀಗ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ಕಾವೇರಿ ನದಿ ನೀರು ವಿಚಾರವು ಇದೀಗ ತಮಿಳುನಾಡು ಕಾಂಗ್ರೆಸ್ vs ಕರ್ನಾಟಕ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಬಿಜೆಪಿ ಎನ್ನುವಂತಾಗಿದೆ.
ಕಾಂಗ್ರೆಸ್ ಪಕ್ಷವು ಕಾವೇರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾಂಗ್ರೆಸ್ ಪಕ್ಷದ ತಮಿಳುನಾಡು ಸಂಸದರು ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ನೀರು ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆಯು ಶಾಸನಬದ್ಧ ನಿರ್ದೇಶನಗಳನ್ನು ಉಲ್ಲಂಘಿಸುತ್ತಿದೆ ಮತ್ತು ತಮಿಳುನಾಡು ರೈತರನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಬುಧವಾರ ಲೋಕಸಭೆಯಲ್ಲಿ ಮುಂದೂಡಿಕೆ ಸೂಚನೆ ನೋಟಿಸ್ ಸಲ್ಲಿಸಿ, ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸದಿರುವ ಕುರಿತು ತುರ್ತು ಚರ್ಚೆ ನಡೆಸುವಂತೆ ಆಗ್ರಹಿಸಿದ್ದಾರೆ. ಇದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಂದುವರಿದು ಕಾವೇರಿ ನೀರಿನ ಕೊರತೆಯಿಂದಾಗಿ ತಮಿಳುನಾಡಿನಲ್ಲಿ ಈಗಾಗಲೇ ಕುರುವೈ ಬೆಳೆಗಳನ್ನು ಹಾನಿಗೊಳಗಾಗಿವೆ. ಆದರೆ ಮುಂಬರುವ ಸಾಂಬಾ ಕೃಷಿ ಅಪಾಯದಲ್ಲಿದೆ, ಇದು ಲಕ್ಷಾಂತರ ರೈತರ ಜೀವನೋಪಾಯ ಮತ್ತು ರಾಜ್ಯದ ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಟ್ಯಾಗೋರ್ ಅವರು ಹೇಳಿದ್ದಾರೆ. ಜುಲೈ 29 ರಿಂದ 15 ದಿನಗಳವರೆಗೆ ಕರ್ನಾಟಕಕ್ಕೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ CWRC ನಿರ್ದೇಶನ ನೀಡಿದೆ ಎಂದು ಅವರು ಗಮನ ಸೆಳೆದಿದ್ದಾರೆ. ಸಮಿತಿಯ ಪ್ರಕಾರ ಜುಲೈ 26 ರವರೆಗೆ ತಮಿಳುನಾಡು ನಿಗದಿತ 35.391 ಟಿಎಂಸಿಯಲ್ಲಿ ಕೇವಲ 3.543 ಟಿಎಂಸಿ ಮಾತ್ರ ಪಡೆದಿದೆ, ಇದು ನಿರೀಕ್ಷಿತ ಪ್ರಮಾಣದ ಕೇವಲ 10.01% ರಷ್ಟಿದೆ ಎಂದೂ ಹೇಳಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ನಿರ್ದೇಶನಗಳು ಹಾಗೂ ಸುಪ್ರೀಂ ಕೋರ್ಟ್ನಿಂದ ಎತ್ತಿಹಿಡಿಯಲ್ಪಟ್ಟಿರುವ ಕಾವೇರಿ ನ್ಯಾಯಮಂಡಳಿಯ ತೀರ್ಪು ಕಾನೂನುಬದ್ಧವಾಗಿ ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರವು ಈ ನಿರ್ದೇಶನಗಳನ್ನು ಅನುಸರಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತುರ್ತು ಸಭೆಯನ್ನು ಕರೆಯಬೇಕು ಹಾಗೂ ಬಾಕಿ ಇರುವ ನೀರನ್ನು ತಕ್ಷಣ ಬಿಡುಗಡೆ ಮಾಡುವ ಮೂಲಕ ತಮಿಳುನಾಡು ರೈತರನ್ನು ರಕ್ಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹೆಚ್ಚುತ್ತಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಸುಪ್ರೀಂ ಕೋರ್ಟ್ ಬೆಂಬಲಿತ ಕಾವೇರಿ ನೀರು ಹಂಚಿಕೆ ಚೌಕಟ್ಟನ್ನು ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳುವ ನಿರೀಕ್ಷೆಯಿದ್ದರೂ, ಯಾವುದೇ ಹಸ್ತಕ್ಷೇಪವು ಕರ್ನಾಟಕದಲ್ಲಿ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು. ಅಲ್ಲದೆ ಈ ವಿಷಯವು ಹೆಚ್ಚು ಭಾವನಾತ್ಮಕ ವಿಷಯವಾಗಿದೆ. ತಮಿಳುನಾಡು CWRC ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸುತ್ತಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿಗೆ ರಾಜಕೀಯ ಪ್ರಶ್ನೆಯಾಗಿದ್ದರೆ. ಕರ್ನಾಟಕದ ಜನರಿಗೆ ಜೀವನಾಧಾರ ವಿಷಯವಾಗಿದೆ.
Karnataka Rain: ಮಹಾರಾಷ್ಟ್ರದಿಂದಲೂ ಕರ್ನಾಟಕಕ್ಕೆ ಸಂಕಷ್ಟ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆದಿದ್ದರೆ, ಇತ್ತ ಮಹಾರಾಷ್ಟ್ರದಿಂದಲೂ ಸಂಕಷ್ಟ ಎದುರಾಗಿದೆ. ಕೃಷ್ಣ ನದಿಗೆ ಮತ್ತೊಂದು ಅಣೆಕಟ್ಟು ಕಟ್ಟುವುದಾಗಿ ಮಹಾರಾಷ್ಟ್ರ ಹೇಳಿದೆ. ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಯಲ್ಲಿ ಪ್ರವಾಹ ನಿಯಂತ್ರಿಸುವ ಉದ್ದೇಶದಿಂದ ಕೃಷ್ಣಾ ನದಿಗೆ ಹೊಸದಾಗಿ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರವು ಹೇಳಿದೆ. ಇದರಿಂದ ಕೃಷ್ಣಾ ನದಿಯನ್ನೇ ನಂಬಿಕೊಂಡಿರುವ ಕರ್ನಾಟಕದ ಗಡಿ ಭಾಗದ ಜನರಲ್ಲಿ ಆತಂಕ ಮೂಡಿದೆ.


Click it and Unblock the Notifications
