Ola, Uber, Rapidoಗೆ ಕೇಂದ್ರದಿಂದ ಹೊಸ ನಿಯಮ: ಈ ಕಾರಣಕ್ಕೆ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಅವಕಾಶವಿಲ್ಲ!

Ola, Uber, Rapido: ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಲ್ಲದೆ ಇದರೊಂದಿಗೆ ಕೇಂದ್ರ ಸರ್ಕಾರವು ದೇಶದ ಪ್ರಮುಖ ಕ್ಯಾಬ್‌ ಅಗ್ರಿಗೇಟರ್‌ಗಳಾದ ಓಲಾ (Ola), ಊಬರ್ (Uber) ಹಾಗೂ ರ‍್ಯಾಪಿಡೋ (Rapido) ಕಂಪನಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ನಿರ್ದೇಶನ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವು ಹಾಗೂ ಮಾರ್ಗಸೂಚಿಗಳಿಂದ ರ‍್ಯಾಪಿಡೋ ಸೇರಿದಂತೆ ಹಲವು ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಬೈಕ್ ಟ್ಯಾಕ್ಸಿಗಳ ಬಳಕೆಯು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೆಚ್ಚಾಗಿದೆ. ಆದರೆ ಬೈಕ್ ಟ್ಯಾಕ್ಸಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೀಗ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರವು ತಿಳಿಸಿದೆ. ಸುರಕ್ಷತೆ, ವಿಮೆ ಹಾಗೂ ಕಾರ್ಯಾಚರಣೆಯ ಮಾನದಂಡಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಸಮಗ್ರ ನಿಯಮಾಗಳು ಇಲ್ಲ. ಹೀಗಾಗಿ, ಬಾಡಿಗೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲವೆಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

Ola Uber Rapido

ಇನ್ನು ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಸ್ಪಷ್ಟ ನೀತಿ ರೂಪಿಸುವ ವರೆಗೆ ಬೈಕ್‌ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಅಲ್ಲದೆ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸುವ ಮತ್ತು ಬೈಕ್‌ ಟ್ಯಾಕ್ಸಿಗಳಾಗಿ ಬಳಸಲು ಪರವಾನಗಿ ನೀಡುವ ಅರ್ಜಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಹೈಕೋರ್ಟ್‌ ಜನವರಿ 23ರಂದು ನಿರ್ದೇಶನ ನೀಡಿತ್ತು. ಕರ್ನಾಟಕ ಸರ್ಕಾರವು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿತ್ತು.

ಇದರಲ್ಲಿ ಆಟೋ ಮತ್ತು ಕ್ಯಾಬ್‌ಗಳಲ್ಲಿ ಇರುವಂತಹ ಅಗತ್ಯ ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆಯು ಬೈಕ್‌ಗಳಲ್ಲಿ ಇರುವುದಿಲ್ಲ. ಬೈಕ್ ಅನ್ನು ಟ್ಯಾಕ್ಸಿಗಳಾಗಿ ಬಳಸುವುದು ಅಪಘಾತಗಳಿಗೆ ಕಾರಣವಾಗಲಿದೆ. ಅಲ್ಲದೆ ಸಾವು ಸಂಭವಿಸಿದಾಗ ಸಿಗುವ ವಿಮಾ ರಕ್ಷಣೆ ಮತ್ತು ಮಹಿಳೆಯರ ಸುರಕ್ಷತೆಯ ವಿಷಯಗಳಲ್ಲಿ ಗಂಭೀರ ಸಮಸ್ಯೆಗಳಿವೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಕೇಂದ್ರ ಸರ್ಕಾರದಿಂದಲೂ ಶಾಕ್

ಇನ್ನು ಓಲಾ, ಊಬರ್ ಹಾಗೂ ರ‍್ಯಾಪಿಡೋ ಕಂಪನಿಗಳಿಗೆ ಕೇಂದ್ರ ಸರ್ಕಾರವು ಸಹ ಶಾಕ್ ಕೊಟ್ಟಿದೆ. ಈ ಆ್ಯಪ್‌ಗಳಲ್ಲಿ ಪ್ರಯಾಣಿಕರನ್ನು ದಾರಿ ತಪ್ಪಿಸುವ ಹಾಗೂ ಅನವಶ್ಯಕವಾಗಿ ಗೋಚರಿಸುವ ಫ್ರೀ-ರೈಡ್‌ ಟ್ರಿಪ್‌ ವೈಶಿಷ್ಟ್ಯವನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಸಚಿವಾಲಯವು ಮಹತ್ವದ ಆದೇಶ ಹೊರಡಿಸಿದೆ.

ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿಗಳು, 2025ರ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಟೋ, ಕ್ಯಾಬ್‌ ಸಿಗದ ಇದ್ದಾಗ ಪ್ರಯಾಣಿಕರು ಅನಿವಾರ್ಯವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.

ಮುಖ್ಯವಾಗಿ ಟಿಪ್ಪಿಂಗ್‌ ವೈಶಿಷ್ಟ್ಯವು ಪ್ರಯಾಣ ಮುಗಿದ ನಂತರ ಮಾತ್ರ ಕಾಣಿಸಲಿದೆ. ಬುಕಿಂಗ್ ಮಾಡುವಾಗ ಹಾಗೂ ಪ್ರಯಾಣದ ಮಧ್ಯದಲ್ಲಿ ಇದನ್ನು ಕಾಣಿಸುವಂತೆ ಮಾಡುವಂತಿಲ್ಲ. ಅಲ್ಲದೆ ಟಿಪ್ಸ್‌ನಲ್ಲಿ ಕಂಪನಿಗಳು ಕಮಿಷನ್ ಪಡೆಯುವಂತಿಲ್ಲ ಎಂದೂ ಹೇಳಲಾಗಿದೆ.

ರ‍್ಯಾಪಿಡೋ (Rapido) ಕ್ಯಾಬ್ ಸೇವೆಗೆ ಅನುಮತಿ

ಇನ್ನು ಕರ್ನಾಟಕದಲ್ಲಿ ರ‍್ಯಾಪಿಡೋ (Rapido) ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿಗೆ ಅವಕಾಶ ಇಲ್ಲ ಎಂದು ಹೇಳಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ರ‍್ಯಾಪಿಡೋ (Rapido) ಕ್ಯಾಬ್ ಸೇವೆಗೆ ಅಧಿಕೃತ ಲೈಸೆನ್ಸ್‌ ನೀಡಿದೆ. ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರವು 2016ರ ನಿಯಮಗಳ ಅಡಿಯಲ್ಲಿ ಈ ಅನುಮತಿ ಕೊಟ್ಟಿದ್ದು, ಈ ಪರವಾನಗಿ ಅವಧಿ 2031ರ ಆಗಸ್ಟ್‌ವರೆಗೆ ಮಾನ್ಯವಾಗಿರಲಿದೆ. ಇನ್ನು ರ‍್ಯಾಪಿಡೋ ಈಗಾಗಲೇ ಕರ್ನಾಟಕದ 21 ನಗರಗಳಲ್ಲಿ ಸೇವೆ ನೀಡುತ್ತಿದೆ. 3.14 ಲಕ್ಷಕ್ಕೂ ಹೆಚ್ಚು ಚಾಲಕರು ಹಾಗೂ 2.04 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಈ ಲೈಸೆನ್ಸ್‌ನಿಂದ ಸುರಕ್ಷಿತ, ನಿಯಮಾನುಸಾರ ಮತ್ತು ವಿಶ್ವಾಸಾರ್ಹ ಕ್ಯಾಬ್ ಸೇವೆ ಮುಂದುವರಿಸಲು ರ‍್ಯಾಪಿಡೋಗೆ ಅವಕಾಶ ಸಿಗಲಿದೆ ಎಂದೂ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+