ಕೇಂದ್ರ ಚುನಾವಣಾ ಆಯೋಗ ಆಯುಕ್ತರಾಗಿ ಬ್ರಹ್ಮ ಅಧಿಕಾರ ಸ್ವೀಕಾರ

ನವದೆಹಲಿ, ಜ.16: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕಗೊಂಡಿರುವ ಹರಿ ಶಂಕರ್ ಬ್ರಹ್ಮ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ವಿ. ಎಸ್‌. ಸಂಪತ್‌ ಅವರಿಂದ ತೆರವಾಗಿರುವ ಸ್ಥಾನಕ್ಕೆ ಬ್ರಹ್ಮ ಅವರನ್ನು ಆಯ್ಕೆ ಮಾಡಲಾಗಿತು.

65ವರ್ಷ ವಯಸ್ಸಿನ ಆಯುಕ್ತ ವಿಎಸ್ ಸಂಪತ್ ಅವರು ಅಧಿಕಾರ ತೊರೆದ ಬೆನ್ನಲ್ಳೇ ಹಿರಿಯ ಆಯುಕ್ತರಾಗಿರುವ ಬ್ರಹ್ಮ ಅವರನ್ನು ಆಯೋಗದ ಮುಖ್ಯ ಆಯುಕ್ತರನ್ನಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇಮಕ ಮಾಡಿದ್ದಾರೆ ಎಂದು ಕಾನೂನು ಸಚಿವಾಲಯದ ಪ್ರಕಟಿಸಿತ್ತು.

HS Brahma new Chief Election Commissioner

ಆಂಧ್ರಪ್ರದೇಶದ 1975ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅಸ್ಸಾಂ ಮೂಲದ ಬ್ರಹ್ಮ(64) ಅವರ ಅಧಿಕಾರ ಅವಧಿಯೂ ತೀರಾ ಕಡಿಮೆ ಅವಧಿಯದ್ದಾಗಿದೆ. ಏ.19ರಂದು 65ನೇ ವರ್ಷಕ್ಕೆ ಕಾಲಿಡುವ ಬ್ರಹ್ಮ ಅವರು ಹುದ್ದೆ ತೊರೆಯಬೇಕಾಗುತ್ತದೆ. ಸಂವಿಧಾನದಲ್ಲಿ ಚುನಾವಣಾ ಮುಖ್ಯ ಆಯುಕ್ತದ ವಯೋಮಿತಿ 65 ವರ್ಷಕ್ಕೆ ಸೀಮಿತಗೊಳಿಸಲಾಗಿದೆ.

2010ರ ಆಗಸ್ಟ್ 25 ರಂದು ಆಯುಕ್ತರಾಗಿ ನೇಮಕಗೊಳ್ಳುವುದಕ್ಕೂ ಮೊದಲು ಕೇಂದ್ರ ಇಂಧನ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಬ್ರಹ್ಮ ಅವರನ್ನು ಸಂಪ್ರದಾಯದಂತೆ ಸೇವಾ ಹಿರಿತನವನ್ನು ಆಧರಿಸಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಜೆಎಂ ಲಿಂಗ್ಡೋ ನಂತರ ಈಶಾನ್ಯ ರಾಜ್ಯದ ಐಎಎಸ್ ಅಧಿಕಾರಿಯೊಬ್ಬರು ಈ ಉನ್ನತ ಸ್ಥಾನಕ್ಕೇರಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+