ಉಗ್ರರ ವಿರುದ್ಧದ ಸಮರಕ್ಕೆ ಕೈ ಜೋಡಿಸಲಿವೆ ಭಾರತ-ಆಫ್ರಿಕಾ
ನವದೆಹಲಿ, ಸೆಪ್ಟೆಂಬರ್ 28 : ಭಾರತ ಮತ್ತು ಆಫ್ರಿಕಾ ನಡುವಿನ ಮೂರನೇ ಶೃಂಗಸಭೆ ಅಕ್ಟೋಬರ್‌ನಲ್ಲಿ ನಡೆಯಲಿದೆ. ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡುವ ಕುರಿತು ಈ ಸಭೆಯಲ್ಲಿ ಉಭಯ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ.
ಅಕ್ಟೋಬರ್ 26 ರಿಂದ 30ರ ತನಕ ಈ ಶೃಂಗಸಭೆ ನಡೆಯಲಿದ್ದು, ಆಫ್ರಿಕಾದಿಂದ 40ಕ್ಕೂ ಅಧಿಕ ನಾಯಕರು ಸಭೆಗೆ ಆಗಮಿಸಲಿದ್ದಾರೆ. ಬಿಹಾರ ಚುನಾವಣೆ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ['ದಾವೂದ್ ಕರಾಚಿಯಲ್ಲಿದ್ರೆ ಕ್ರಿಕೆಟ್ ಆಡೋಕೆ ಸಾಧ್ಯನಾ?']

ಭಯೋತ್ಪಾದನೆ ವಿರುದ್ಧ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಹೋರಾಡಬೇಕು ಎಂದು ಹೇಳುತ್ತಿರುವ ಪ್ರಧಾನಿ ಮೋದಿ ಆಫ್ರಿಕಾದ ನಾಯಕರ ಜೊತೆಯೂ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ಆಫ್ರಿಕಾವೂ ಭಯೋತ್ಪಾದಕರ ಉಪಟಳ ಎದುರಿಸುತ್ತಿದೆ. [ಉಗ್ರ ಮೊಹಮ್ಮದ್ ನವೀದ್ ಲಷ್ಕರ್ ಸೇರಿದ್ದು ಹೇಗೆ?]
ಭಯೋತ್ಪಾದನೆ ವಿರುದ್ಧ ಒಂದು ರಾಷ್ಟ್ರ ಏಕಾಂಗಿಯಾಗಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂಬುದು ಮೋದಿ ಅವರ ಅಭಿಪ್ರಾಯ. ಸಿರಿಯಾ, ಇರಾಕ್‌ನಲ್ಲಿ ಕುಳಿತಿರುವ ಐಎಸ್‌ಐಎಸ್ ಅಲ್ಲಿಂದಲೇ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ವಿವಿಧ ದೇಶಗಳು ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕು ಎಂದು ಮೋದಿ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಈ ಶೃಂಗಸಭೆ ಅತಿ ಮಹತ್ವದ್ದಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಯತ್ನವೂ ಇದಾಗಿದೆ. ಭಯೋತ್ಪಾದನೆ ನಿರ್ಮೂಲನೆ ಜೊತೆ ಹಲವು ವಿಚಾರಗಳ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ.












Click it and Unblock the Notifications