ಮೊಬೈಲನ್ನೇ ಮುಟ್ಟದ ಈ 6 ವರ್ಷದ ಬಾಲಕನ ಐಕ್ಯೂ 147! ಈಗಾಗಲೇ 3000 ಪುಸ್ತಕ ಓದಿ ಸಾಧನೆ ಮಾಡಿದ ಅರ್ಜುನ್

ಇತ್ತೀಚಿನ ದಿನಗಳಲ್ಲಿ ಮಕ್ಕಳು ಊಟ ಮಾಡಬೇಕಾದರೂ, ಅಳುವಾಗ ಸುಮ್ಮನಾಗಲೂ, ಮಲಗುವಾಗಲೂ ಕೈಯಲ್ಲಿ ಮೊಬೈಲ್ ಬೇಕೇ ಬೇಕು ಎಂಬ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್ ಗೀಳಿಗೆ ಅಂಟಿಕೊಂಡಿರುವ ಮಕ್ಕಳ ಬೆಳೆವಣಿಗೆ ಹಾಗೂ ಭವಿಷ್ಯದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ.

ಆದರೆ, ಇಲ್ಲೊಬ್ಬ 6 ವರ್ಷದ ಬಾಲಕ ಮೊಬೈಲ್ ಫೋನ್ ಮುಟ್ಟದೆ, ಕೇವಲ ಪುಸ್ತಕಗಳನ್ನ ಓದುತ್ತಾ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ. ಕೆನಡಾದಲ್ಲಿ ನೆಲೆಸಿರುವ ಈ ಬಾಲಕನ ಹೆಸರು ಅರ್ಜುನ್ ಪ್ರಜಾಪತಿ.

How 6 Year Old Arjun Prajapati Achieved A 147 IQ Without Smartphones A Lesson For All Parents

ಬಾಲ ಪ್ರತಿಭೆ ಅರ್ಜುನ್ ಪ್ರಜಾಪತಿ ಹಿನ್ನೆಲೆ

ಅರ್ಜುನ್ ಪ್ರಜಾಪತಿ ಕೆನಡಾದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಾನೆ. ಈತನ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರೆ, ತಾಯಿ ವಕೀಲರಾಗಿದ್ದಾರೆ. ಸುಶಿಕ್ಷಿತ ಕುಟುಂಬದ ಹಿನ್ನೆಲೆ ಹೊಂದಿರುವ ಈ ದಂಪತಿ, ತಮ್ಮ ಮಗನ ಬೆಳೆವಣಿಗೆಗೆ ಬೇಕಾದ ಪೂರಕವಾದ ವಾತಾವರಣವನ್ನ ಮನೆಯಲ್ಲಿಯೇ ನಿರ್ಮಿಸಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇರುವುದು ಸಾಮಾನ್ಯ. ಆದರೆ, ಈ ದಂಪತಿ ತಮ್ಮ ಮಗನಿಗೆ ಆ ಗೀಳು ಅಂಟದಂತೆ ಅತ್ಯಂತ ಎಚ್ಚರಿಕೆ ವಹಿಸಿದ್ದು, ಇದರಿಂದ ಯಶಸ್ವಿ ಕೂಡ ಆಗಿದ್ದಾರೆ.

ಈಗಾಗಲೇ 3000 ಪುಸ್ತಕಗಳ ಓದಿದ ಬಾಲಕ

ಅಚ್ಚರಿಯ ವಿಚಾರವೆಂದರೆ, 6 ವರ್ಷದ ಅರ್ಜುನ್ ಇದುವರೆಗೂ ಸ್ಮಾರ್ಟ್‌ಫೋನ್ ಅನ್ನು ಬಳಸಿಯೇ ಇಲ್ಲ. ಆತನಿಗೆ ಮೊಬೈಲ್ ಫೋನ್ ನೀಡದಿರಲು ಪೋಷಕರೇ ತುಂಬ ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದಾರೆ. ಆತನಿಗೆ ಏನಾದರೂ ಹೊಸ ವಿಷಯ ತಿಳಿಯುವ ಕುತೂಹಲ ಮೂಡಿದರೆ, ತಾಯಿಯ ಸಮ್ಮುಖದಲ್ಲಿ ಮಾತ್ರ ಕಂಪ್ಯೂಟರ್ ಮೂಲಕ ಇಂಟರ್ನೆಟ್ ಬಳಸಲು ಅವಕಾಶವಿದೆ.

ಅದು ಕೇವಲ ಆತನ ಕುತೂಹಲ ತಣಿಸಲು ಹಾಗೂ ಜ್ಞಾನ ಹೆಚ್ಚಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ಮೊಬೈಲ್ ಸ್ಕ್ರೀನ್‌ನಿಂದ ದೂರ ಉಳಿದ ಪರಿಣಾಮವಾಗಿ, ಅರ್ಜುನ್ ಕೇವಲ ಆರು ವರ್ಷದೊಳಗೆ ಬರೋಬ್ಬರಿ 3000ಕ್ಕೂ ಹೆಚ್ಚು ಪುಸ್ತಕಗಳನ್ನ ಓದಿ ಮುಗಿಸಿದ್ದಾನೆ.

147 ಐಕ್ಯೂ ಮಟ್ಟ, ಮೆನ್ಸಾ ಮತ್ತು ಇಂಟರ್‌ಟೆಲ್ ಮಾನ್ಯತೆ

ಸಾಮಾನ್ಯವಾಗಿ ವಯಸ್ಕರ ಐಕ್ಯೂ ಅಂದರೆ ಬುದ್ಧಿಮತ್ತೆ ಸೂಚ್ಯಂಕ ಮಟ್ಟ 85 ರಿಂದ 115ರ ನಡುವೆ ಇರುತ್ತದೆ. ಚಿಕ್ಕ ಮಕ್ಕಳಲ್ಲಿ ಇದು ಇನ್ನೂ ಕಡಿಮೆ ಇರುತ್ತದೆ ಎನ್ನಬಹುದು. ಆದರೆ, 6 ವರ್ಷದ ಅರ್ಜುನ್ ಐಕ್ಯೂ ಮಟ್ಟ 147 ಇದೆ ಎಂದರೆ ನೀವು ನಂಬಲೇಬೇಕು.

ಈತನ ಅದ್ಭುತ ಬುದ್ಧಿಮತ್ತೆಯನ್ನ ಗುರುತಿಸಿರುವ ಜಗತ್ತಿನ ಪ್ರತಿಷ್ಠಿತ 'ಮೆನ್ಸಾ' ಹಾಗೂ 'ಇಂಟರ್‌ಟೆಲ್' ಸಂಸ್ಥೆಗಳು ಆತನಿಗೆ ತಮ್ಮ ಸಂಸ್ಥೆಯ ಅಧಿಕೃತ ಸದಸ್ಯತ್ವವನ್ನ ನೀಡಿ ಗೌರವಿಸಿವೆ. ಪ್ರಪಂಚದ ಅತ್ಯಂತ ಬುದ್ಧಿವಂತ ಮಕ್ಕಳನ್ನ ಮಾತ್ರ ಈ ಸಂಸ್ಥೆಗಳು ತಮ್ಮ ಸದಸ್ಯರನ್ನಾಗಿ ಆಯ್ಕೆ ಮಾಡುತ್ತವೆ.

ಸ್ಕ್ರೀನ್ ಟೈಮ್ ನಿಯಂತ್ರಣಕ್ಕೆ ಪೋಷಕರಿಗೆ ಬಹುದೊಡ್ಡ ಪಾಠ

ಕೆನಡಾದಲ್ಲಿ ಪ್ರತಿ ವರ್ಷ ಮಕ್ಕಳ ಐಕ್ಯೂ ಅಳೆಯಲು ವಿಶೇಷ ಪರೀಕ್ಷೆಗಳು ನಡೆಯುತ್ತವೆ. ಅರ್ಜುನ್ ತನ್ನ ನಾಲ್ಕನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ. 1000 ಮಕ್ಕಳು ಭಾಗವಹಿಸಿದ್ದ ಈ ಪರೀಕ್ಷೆಯಲ್ಲಿ ಆತ 997 ಮಕ್ಕಳಿಗಿಂತ ಅತಿ ಹೆಚ್ಚು ಐಕ್ಯೂ ಹೊಂದಿದ್ದ. ಐದನೇ ವಯಸ್ಸಿಗೆ ಮತ್ತೆ ಅದೇ ಪರೀಕ್ಷೆ ಬರೆದಾಗ, 10,000 ಮಕ್ಕಳಲ್ಲಿ 9999 ಮಕ್ಕಳಿಗಿಂತ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡ.

ಒಟ್ಟಾರೆಯಾಗಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಭವಿಷ್ಯ ಹಾಳು ಮಾಡುವ ಪೋಷಕರಿಗೆ ಅರ್ಜುನ್ ಪ್ರಜಾಪತಿ ಸಾಧನೆ ಬಹುದೊಡ್ಡ ಪಾಠವಾಗಿದೆ. ಇಂಟರ್ನೆಟ್ ಮತ್ತು ಮೊಬೈಲ್ ಬಳಕೆಯ ಮೇಲೆ ನಿಯಂತ್ರಣವಿದ್ದರೆ ಹಾಗೂ ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ಬೆಳೆಸಿದರೆ, ಮಕ್ಕಳು ಎಂತಹ ಅದ್ಭುತ ಸಾಧನೆ ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಅರ್ಜುನ್ ಅತ್ಯುತ್ತಮ ಉದಾಹರಣೆಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+