ಕಾಶ್ಮೀರದಲ್ಲಿ 21 ವರ್ಷದ ಹಿಜ್ಬುಲ್‌ ಮುಜಾಹಿದ್ದಿನ್‌ ಕಮಾಂಡರ್ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ಜುಲೈ 09 : ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಬ್ದುಲ್ ಬುರ್ಹಾನ್‌ ವನಿಯನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರದ ಯುವಕರಿಗೆ ಬಂದೂಕು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದ ಬುರ್ಹಾನ್ ತಲೆಗೆ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.

ಅನಂತನಾಗ್ ಜಿಲ್ಲೆಯ ಕೊಕೇರ್ ನಾಗ್ ಪದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬುರ್ಹಾನ್ (21) ಮತ್ತು ಆತನ ಸಹಚರರಾದ ಸರ್ತಾಜ್ ಅಹಮದ್ ಶೇಖ್ ಮತ್ತು ಬಶೀರ್ ಲಷ್ಕರಿ ಅವರನ್ನು ಹತ್ಯೆ ಮಾಡಿದ್ದಾರೆ. [ಕಣ್ಣೀರಲ್ಲಿ ತಾರಿಷಿ ಕುಟುಂಬ, ಇಂಥ ನೋವಿಗೆ ಕೊನೆ ಯಾವಾಗ?]

Burhan Wani

15ನೇ ವಯಸ್ಸಿನಲ್ಲಿಯೇ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರ ಸಂಘಟನೆ ಸೇರಿದ್ದ ಬುರ್ಹಾನ್ ಬಹು ಬೇಗನೆ ಕಮಾಂಡರ್ ಆಗಿದ್ದ. ಉಗ್ರ ಸಂಘಟನೆ ಸೇರಿದ ಮೊದಲ ವಿದ್ಯಾವಂತ ಯುವಕ ಎಂಬ ಹಣೆಪಟ್ಟಿಯನ್ನು ಈತ ಹೊಂದಿದ್ದ. ಕಾಶ್ಮೀರದ ಯುವಕರು ಬಂದೂಕು ಹಿಡಿಯಿರಿ ಎಂದು ಆತ ಕರೆ ಕೊಟ್ಟಿದ್ದ. [ಬಾಂಗ್ಲಾ ದಾಳಿ: ಸ್ನೇಹಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುಸೇನ್]

ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯನಾಗಿದ್ದ ಬುರ್ಹಾನ್ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ. ಉಗ್ರ ಸಂಘಟನೆ ಸೇರುವುದಕ್ಕೂ ಮೊದಲು ವಿದ್ಯಾಭ್ಯಾಸದ ಬಗ್ಗೆ ಬುರ್ಹಾನ್‌ಗೆ ಅಪಾರವಾದ ಆಸಕ್ತಿ ಇತ್ತು. ಕ್ರಿಕೆಟ್ ಆಟದ ಬಗ್ಗೆ ಆತ ಬಹಳ ಆಕರ್ಷಿತನಾಗಿದ್ದ.

ಅಬ್ದುಲ್ ಬುರ್ಹಾನ್‌ ವನಿಯನ್ನು ದಕ್ಷಿಣ ಕಾಶ್ಮೀರದ 28ಕ್ಕೂ ಹೆಚ್ಚು ವಿದ್ಯಾವಂತ ಯುವಕರನ್ನು ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರ ಸಂಘಟನೆಗೆ ಸೇರಿಸಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಣೆ ಮಾಡಿದೆ. ಅಲ್‌ ಖೈದಾ, ಐಎಸ್‌ಐಎಸ್ ಸಂಘಟನೆಗಳ ನಾಯಕರಂತೆ ಸಂಘಟನೆಯ ಪ್ರಚಾರಕ್ಕೆ ಈತ ಸಾಮಾಜಿಕ ಜಾಲ ತಾಣಗಳನ್ನು ಬಳಸುತ್ತಿದ್ದ. [ಪಿಟಿಐ ಚಿತ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Abdul Burhan Wani the 21 year old commander of the Hizbul Mujahideen in Kashmir has been killed in an encounter. The social media savvy Burhan had created a furore with his posts. He was killed in a police encounter at Kokarnag today with the police. The area falls under South Kashmir.
Please Wait while comments are loading...