ಗಾಂಧೀಜಿ ಬದಲು ಗೋಡ್ಸೆ ನೆಹರು ಹತ್ಯೆ ಮಾಡಬೇಕಿತ್ತು!

Subscribe to Oneindia Kannada

ಬೆಂಗಳೂರು, ಅ.25: 'ನಾಥೂರಾಮ್ ಗೋಡ್ಸೆ ಗುರಿ ಬದಲಾಗಬೇಕಿತ್ತು, ಆತ ಮಹಾತ್ಮ ಗಾಂಧೀಜಿ ಅವರ ಬದಲಾಗಿ ಜವಾಹರಲಾಲ್ ನೆಹರು ಅವರನ್ನು ಹತ್ಯೆ ಮಾಡಿದ್ದರೆ ದೇಶ ಯಾವಾಗಲೋ ಉದ್ಧಾರವಾಗುತ್ತಿತ್ತು' ಹೀಗೊಂದು ಬರಹ ಆರ್ ಎಎಸ್ ಎಸ್ ಮುಖವಾಣಿ ಕೇರಳದ ಕೇಸರಿಯಲ್ಲಿ ಪ್ರಕಟವಾಗಿದ್ದು ವಿವಾದಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ಗೋಪಾಲಕೃಷ್ಣನ್ ಎಂಬ ಲೇಖಕ ತಮ್ಮ ಬರಹದಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆಹರು ಸ್ವಾರ್ಥವೇ ಭಾರತದ ಇಬ್ಭಾಗಕ್ಕೆ ಕಾರಣವಾಯಿತು. ಇದು ದೇಶದ ಅಧಃಪತನಕ್ಕೆ ಕಾರಣವಾಯಿತು ಎಂದು ಬರೆದಿದ್ದಾರೆ.[ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು]

neharu

ಗಾಂಧೀಜಿ ಸಿದ್ಧಾಂತಗಳನ್ನು ಸಾಯಿಸಿದವರೇ ನೆಹರು. ಉದ್ದೇಶಪೂರ್ವಕವಾಗಿ ಬ್ರಿಟಿಷ್ ಸರ್ಕಾರದೊಂದಿಗೆ ಗಾಂಧಿ ಮಾತನಾಡುವ ಅನೇಕ ಅವಕಾಶಗಳನ್ನು ತಪ್ಪಿಸಿದರು. ನೆಹರುಗೆ ಹೋಲಿಸಿದರೆ ಗೋಡ್ಸೆಯೇ ಎಷ್ಟೋ ಪರವಾಗಿಲ್ಲ. ಇತಿಹಾಸದ ವಿದ್ಯಾರ್ಥಿಗಳು ಕಲಿಯಬೇಕಾದದ್ದು ಬಹಳಷ್ಟಿದೆ. ಇಲ್ಲಿ ಗೋಡ್ಸೆ ಗಾಂಧೀಜಿ ಹತ್ಯೆ ಮಾಡಿದ ಎನ್ನುವುದಕ್ಕಿಂತ ಮುಖ್ಯವಾಗಿ ಗೋಡ್ಸೆ ಗುರಿ ಬದಲಾಗಬೇಕಿತ್ತು ಎಂಬುದೇ ಮುಖ್ಯ. ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.[ಉಕ್ಕಿನ ಮಹಿಳೆ vs ಉಕ್ಕಿನ ಮನುಷ್ಯ ಏನಿದರ ಮರ್ಮ?]

ಅಖಂಡ ಭಾರತವನ್ನು ಒಡೆಯಲು ನೆಹರು ಕಾರಣ. ನೆಹರುಗೆ ಅಂತಾರಾಷ್ಟ್ರೀಯ ನಾಯಕನಾಗಿ ಬೆಳೆಯಬೇಕೆಂಬ ಹಪಹಪಿ ಇತ್ತು. ತನಗಿಂತ ಜನಪ್ರಿಯರಾಗಿದ್ದ ಗಾಂಧೀಜಿ ಏಳಿಗೆಯನ್ನು ನೆಹರು ಸಹಿಸಲಿಲ್ಲ. ಅನೇಕ ಬಾರಿ ಗಾಂಧೀಜಿ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲು ಪ್ರತಯತ್ನಿಸಿದ್ದರು ಎಂದು ಬಿ.ಗೋಪಾಲಕೃಷ್ಣನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಖಂಡನೆ
ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದೊಂದು ವಿವಾದಾತ್ಮಕ ಮತ್ತು ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಲೇಖನ ಎಂದು ಹೇಳಿದೆ. ಕಾಂಗ್ರೆಸ್ ಮುಖಂಡ ಅಭೀಷೇಕ್ ಸಿಂಘ್ವಿ ಮಾತನಾಡಿ, ಇದು ಆರ್ ಎಸ್‌ ಎಸ್ ನ ಕೆಟ್ಟ ಮನೋಭಾವ ತೋರಿಸುತ್ತದೆ. ಜನರು ಬಿಜೆಪಿ ಮತ್ತು ಕೇಸರಿ ಪಡೆಗಳ ಸಣ್ಣತನವನ್ನು ಅರ್ಥ ಮಾಡಿಕೊಳ್ಳಬೇಕು. ದುರದೃಷ್ಟವೆಂದರೆ ಇಂಥ ಜನರ ಕೈಗೆ ಜನರು ಅಧಿಕಾರ ಸಿಕ್ಕಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kesari, the RSS mouthpiece in Kerala has published an article which indirectly suggests that Nathuram Godse should have killedJawaharlal Nehru instead of Mahatma Gandhi. According to media reports, the writer of this controversial article is B Gopalkrishnan, who fought unsuccessfully on a BJP ticket in the Lok Sabha elections.
Please Wait while comments are loading...