Gen Z: ಭಾರತದ ಭವಿಷ್ಯ ನಿರ್ಧರಿಸಲಿರುವ ಜೆನ್‌ಜೀ: 12 ವರ್ಷಗಳಲ್ಲಿ ಇದೇ ಮೊದಲು; ರಾಜಕೀಯ ಪಕ್ಷಗಳ ಲೆಕ್ಕಾಚಾರವೇನು

Gen Z: ದೇಶದಾದ್ಯಂತ ಜೆನ್‌ಜೀ (ಯುವ ಸಮುದಾಯ) ನಡೆಸಿದ ಹೋರಾಟಕ್ಕೆ ಜಯ ಸಂದಿದೆ. ದೇಶದಾದ್ಯಂತ ನಡೆದ ಜೆನ್‌ಜೀ ಹೋರಾಟಕ್ಕೆ ಬಿಜೆಪಿ ಮಣಿದಿದೆ. ಬಿಜೆಪಿ - ಎನ್‌ಡಿಎ ಸರ್ಕಾರದಲ್ಲಿ ಹಾಗೂ ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ಇದೇ ಮೊದಲ ಬಾರಿ ಕೇಂದ್ರ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೇಶದಾದ್ಯಂತ ಜೆನ್‌ಜೀಗಳು ನಡೆಸುತ್ತಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳ ರಾಷ್ಟ್ರಗಳಲ್ಲಿ ಜೆನ್‌ಜೀ ಹೋರಾಟಗಳು ನಡೆದಿದ್ದು, ಕ್ರಾಂತಿಕಾರಿ ಬದಲಾವಣೆಗಳು ಆಗಿವೆ. ಭಾರತದಲ್ಲಿ ನಡೆದ ಜೆನ್‌ಜೀಗಳ ಹೋರಾಟವು ತೀವ್ರ ಭಿನ್ನವಾಗಿತ್ತು. ಜೆನ್‌ಜೀಗಳ ತೀವ್ರ ಹೋರಾಟ ಹಾಗೂ ಡ್ಯಾಮೇಜ್ ಕಂಟ್ರೋಲ್ ಸೇರಿದಂತೆ ಹಲವು ಕಾರಣಗಳಿಗೆ ಮಣಿದಿರುವ ಕೇಂದ್ರ ಸರ್ಕಾರವು ಕೊನೆಗೂ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಆ ರೀತಿ ನೋಡಿದರೆ ಇತ್ತೀಚಿನ ದಿನಗಳಲ್ಲಿ ಜೆನ್‌ಜೀ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿವೆ.

Gen Z

ಹೌದು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಯುವಕರ ಹೋರಾಟವು ಕಳೆದ ಒಂದು ವಾರದಿಂದ ಗಂಭೀರ ಸ್ವರೂಪವನ್ನು ಪಡೆದುಕೊಂಡಿತ್ತು. ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಪವಾಸ ಸತ್ಯಾಗ್ರಹದ ವಿಚಾರದಲ್ಲಿ ಮಧ್ಯಪ್ರವೇಶಗಳ ನಂತರ ಹೋರಾಟ ಭಿನ್ನ ಸ್ವರೂಪ ಪಡೆದುಕೊಳ್ಳುವುದಕ್ಕೆ ಪ್ರಾರಂಭವಾಯಿತು. ನೆರೆಯ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಹೋರಾಟ ಹಾಗೂ ಅದರ ಪರಿಣಾಮಗಳನ್ನು ಭಾರತವೂ ಸಹ ಸೂಕ್ಷ್ಮವಾಗಿಯೇ ಗಮನಿಸಿದೆ. ಇನ್ನು ಜೆನ್‌ಜೀಗಳ ವಿಚಾರದಲ್ಲಿ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಸಹ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ.

ಇತ್ತೀಚಿಗೆ ಕೇರಳದ ಸಚಿವ ಸಂಪುಟ ರಚನೆ ಹಾಗೂ ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ದೇಶದ ವಿವಿಧ ಪ್ರಮುಖ ನಾಯಕರು ಜೆನ್‌ಜೀಗಳ ನಾಡಿಮಿಡಿತವನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿರುವವರು ಜೆನ್‌ಜೀಗಳೇ ಎನ್ನುವುದೇ ಇದಕ್ಕೆ ಮುಖ್ಯ ಕಾರಣ.

ಜೆನ್‌ಜೀಗಳನ್ನು ಸೆಳೆಯಲು ಅವರೊಂದಿಗೆ ಸಂವಹನಕ್ಕೆ ವೇದಿಕೆ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕನೆಕ್ಟ್‌ ಆಗಿರುವಂತೆ ರೀಲ್ಸ್‌ಗಳನ್ನು ಮಾಡುವಂತೆ ಕೇಂದ್ರ ಸಚಿವರಿಗೆ ನಿರ್ದೇಶನ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು ಎನ್ನುತ್ತಿದ್ದಾರೆ. ಇದೆಲ್ಲವೂ ಸಹ ಜೆನ್ ಜೀ ಯುವಕರನ್ನು ಗಮನದಲ್ಲಿ ಇರಿಸಿಕೊಂಡು ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇ ಆಗಿವೆ.

ಕಾಕ್ರೋಚ್ ಜನತಾ ಪಾರ್ಟಿಯ 3 ಹೊಸ ಬೇಡಿಕೆಗಳು!

ಇನ್ನು ಕಾಕ್ರೋಚ್ ಜನತಾ ಪಾರ್ಟಿಯ ಇನ್ನೂ ಮೂರು ಬೇಡಿಕೆಗಳು ಬಾಕಿ ಇವೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಹೇಳಿದ್ದಾರೆ.

CJPಯ ಬೇಡಿಕೆಗಳ ಸ್ಥಿತಿ (ನವೀಕರಿಸಲಾಗಿದೆ):

1. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು - ✅ ಈಡೇರಿದೆ

2. ಆತ್ಮಹತ್ಯೆಯಿಂದ ಮೃತಪಟ್ಟ ಎಲ್ಲಾ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ - ಬಾಕಿ ಇದೆ

3. ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬಾರದು - ಬಾಕಿ ಇದೆ

4. RAF ಹಾಗೂ ದೆಹಲಿ ಪೊಲೀಸರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು - ಬಾಕಿ ಇದೆ

ಜಂತರ್ ಮಂತರ್‌ನಲ್ಲಿರುವ ಪ್ರತಿಭಟನಾಕಾರರು ಹಾಗೂ ದೇಶದಾದ್ಯಂತದ ವಿದ್ಯಾರ್ಥಿಗಳು ಉಳಿದ ಬೇಡಿಕೆಗಳು ಈಡೇರುವ ನಿರೀಕ್ಷೆಯಲ್ಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಯಶಸ್ಸು!

ಇನ್ನು ಕಳೆದ ಕೆಲವೇ ತಿಂಗಳುಗಳ ಮುಂಚೆ ಪ್ರಾರಂಭವಾದ ಕಾಕ್ರೋಚ್ ಜನತಾ ಪಾರ್ಟಿಯ ಆಂದೋಲನವು ದೇಶದಾದ್ಯಂತ ವ್ಯಾಪಿಸಿ, ಪ್ರಥಮ ಗೆಲುವನ್ನೂ ದಾಖಲಿಸಿದೆ. ಸಿಜೆಪಿ ಪ್ರತಿಭಟನೆಯ ಯಶಸ್ಸಿನ ಹಿಂದಿರುವ ಬಹುದೊಡ್ಡ ಕಾರಣವೆಂದರೆ ದೇಶದಲ್ಲಿ ದೊಡ್ಡ ಸಮಸ್ಯೆ ಆಗಿರುವ ಗುಣಮಟ್ಟದ ಉದ್ಯೋಗಗಳ ಲಭ್ಯತೆ ಇಲ್ಲದಿರುವುದು. ಅಂದರೆ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಇಲ್ಲದೆ ಇರುವುದು.

ಉದ್ಯೋಗ ಸೃಷ್ಟಿ ಪ್ರತಿ ವರ್ಷ ಕಡಿಮೆ ಆಗಿದೆ. ಏಕೆಂದರೆ ಜನಸಂಖ್ಯೆಯ 45% ರಷ್ಟು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಬಲವಾದ ಜಿಡಿಪಿ ಬೆಳವಣಿಗೆಯು ಹೆಚ್ಚಿನ ಉದ್ಯೋಗದೊಂದಿಗೆ ಸಂಬಂಧ ಹೊಂದಿದ್ದರೂ, ಪ್ರಸ್ತುತ ಸವಾಲು ಎಂದರೆ ಪದವೀಧರರನ್ನು ಸಹ ಗಿಗ್ ವರ್ಕ್ ಅಥವಾ ಅನೌಪಚಾರಿಕ ಉದ್ಯೋಗಗಳಿಗೆ ತಳ್ಳಲಾಗುತ್ತಿದೆ. ನೀಟ್ ಹಾಗೂ ಪ್ರಮುಖ ಪ್ರಶ್ನೆ ಪತ್ರಿಕೆಗಳ ಸೋರಿಕೆಯೊಂದಿಗೆ ಇದೂ ಸಹ ಪ್ರಮುಖ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+