ರೈಲ್ವೆ ನಿಲ್ದಾಣದ ಕುಡಿಯುವ ನೀರಲ್ಲಿ ಡೇಂಜರಸ್ ಬ್ಯಾಕ್ಟೀರಿಯಾ ಪತ್ತೆ, ಮಾರಣಾಂತಿಕ ಕಾಯಿಲೆ ಆತಂಕ : ಸಿಎಜಿ ವರದಿ

ದೇಶಾದ್ಯಂತ ದಿನನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಪ್ರಯಾಣದ ನಡುವೆ ಬಾಯಾರಿಕೆಯಾದವರು ರೈಲ್ವೆ ನಿಲ್ದಾಣದಲ್ಲಿ ಕುಡಿಯಲು ನೀರು ತಗೆದುಕೊಳ್ಳುತ್ತಾರೆ. ಆದರೆ ಪ್ರಯಾಣಿಕರ ದಾಹ ತೀರಿಸಬೇಕಾದ ರೈಲ್ವೆ ನಿಲ್ದಾಣದ ಈ ಕುಡಿಯುವ ನೀರು ಈಗ ವಿಷಕಾರಿಯಾಗಿದೆ ಎಂದರೆ ನೀವು ನಂಬುತ್ತೀರಾ?.

ಹೌದು, ಇತ್ತೀಚೆಗೆ ಮಂಡನೆಯಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಈ ಆಘಾತಕಾರಿ ವಿಚಾರ ಬಯಲಾಗಿದೆ ನೋಡಿ. ಕಲುಷಿತ ಆಹಾರ ಮತ್ತು ಬೇಕರಿ ಉತ್ಪನ್ನಗಳ ಬಗ್ಗೆ ಆತಂಕ ಮೂಡಿರುವಾಗಲೇ, ಇದೀಗ ದೇಶದ ಹಲವು ಪ್ರತಿಷ್ಠಿತ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾಗುವ ನೀರಿನಲ್ಲಿ ಡೇಂಜರಸ್ 'ಇ-ಕೋಲೈ' (E. coli) ಬ್ಯಾಕ್ಟೀರಿಯಾ ಪತ್ತೆಯಾಗಿದೆ.

Railway Station

ಸಿಎಜಿ ತನ್ನ ವರದಿಯಲ್ಲಿ, 2019-20 ರಿಂದ 2023-24ರ ಅವಧಿಯವರೆಗೆ ದೇಶದ 5,908 ನಾನ್-ಸಬರ್ಬನ್ ರೈಲ್ವೆ ನಿಲ್ದಾಣಗಳನ್ನ ಪರಿಶೀಲನೆಗೆ ಒಳಪಡಿಸಿದೆ. ಈ ನಿಲ್ದಾಣಗಳು ಪ್ರತಿದಿನ 7,424 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನ ನಿರ್ವಹಿಸುತ್ತವೆ ಹಾಗೂ ವಾರ್ಷಿಕವಾಗಿ 292 ಕೋಟಿಗೂ ಹೆಚ್ಚು ಪ್ರಯಾಣಿಕರು ಇಲ್ಲಿ ಓಡಾಡುತ್ತಾರೆ. ಇಷ್ಟೊಂದು ಬೃಹತ್ ಪ್ರಮಾಣದ ಜನಸಂದಣಿ ಇರುವ ಸ್ಥಳಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನ ಕಡೆಗಣಿಸಿರುವುದು ಈಗ ತೀವ್ರ ಟೀಕೆಗೆ ಗುರಿಯಾಗಿದೆ.

ಇ-ಕೋಲೈ ಬ್ಯಾಕ್ಟೀರಿಯಾ ಪತ್ತೆಯಾದ ಪ್ರಮುಖ ರೈಲ್ವೆ ನಿಲ್ದಾಣಗಳು

ಸಿಎಜಿ ನಡೆಸಿದ ಪರೀಕ್ಷೆಗಳಲ್ಲಿ ಹಲವಾರು ಪ್ರಮುಖ ಜಂಕ್ಷನ್‌ಗಳಲ್ಲಿ ನೀಡುವ ನೀರಿನಲ್ಲಿ ಈ ಅಪಾಯಕಾರಿ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ಮುಖ್ಯವಾಗಿ ದಕ್ಷಿಣ ರೈಲ್ವೆಯ ಕೊಯಮತ್ತೂರು ಮತ್ತು ಪಾಲಕ್ಕಾಡ್ ಜಂಕ್ಷನ್, ದಕ್ಷಿಣ ಮಧ್ಯ ರೈಲ್ವೆಯ ಹೈದರಾಬಾದ್, ಹಾಗೂ ಕೇಂದ್ರ ರೈಲ್ವೆಯ ಪ್ರಮುಖ ನಿಲ್ದಾಣಗಳಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT), ಭಿವಂಡಿ ರೋಡ್, ಕಲ್ಯಾಣ್, ಲೋನಾವಲಾ ಮತ್ತು ಪೂರ್ವ ರೈಲ್ವೆಯ ಮಧುಪುರ ನಿಲ್ದಾಣಗಳಲ್ಲಿ ಇ-ಕೋಲೈ ಬ್ಯಾಕ್ಟೀರಿಯಾ ಕಂಡುಬಂದಿದೆ. ಇದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ.

ಕಲುಷಿತ ನೀರು ಸೇವನೆಯಿಂದ ಎದುರಾಗುವ ಆರೋಗ್ಯದ ಅಪಾಯಗಳು

ಈ ರೈಲ್ವೆ ನಿಲ್ದಾಣದಲ್ಲಿ ಸಿಗುವ ಕಲಿಷಿತ ಕುಡಿಯುವ ನೀರು ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ. ಇ-ಕೋಲೈ ಬ್ಯಾಕ್ಟೀರಿಯಾವು ಫುಡ್ ಪಾಯಿಸನಿಂಗ್, ಬೇಧಿ, ಮತ್ತು ವಿಶೇಷವಾಗಿ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಮೂತ್ರಪಿಂಡ ವೈಫಲ್ಯದಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.

ಮುಂಬೈ, ಕೇರಳ, ತಮಿಳುನಾಡು ಹಾಗೂ ಜಾರ್ಖಂಡ್‌ನ ಹಲವು ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದಾಗ ನೀರಿನಲ್ಲಿ ಕ್ಲೋರಿನ್ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಕಡಿಮೆ ಅಥವಾ ಹೆಚ್ಚು ಇರುವುದು ಕಂಡುಬಂದಿದೆ. ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸದಿರುವುದೇ ಇಂತಹ ಅಪಾಯಕ್ಕೆ ಪ್ರಮುಖ ಕಾರಣವಾಗಿದೆ.

ರೈಲ್ವೆ ಇಲಾಖೆಯ ನಿರ್ಲಕ್ಷ್ಯ

ಬರೀ ಕಲುಷಿತ ನೀರು ಮಾತ್ರವಲ್ಲ, ಮೂಲಭೂತ ಸೌಕರ್ಯಗಳ ಕೊರತೆಯನ್ನೂ ಸಹ ಸಿಎಜಿ ವರದಿ ಎತ್ತಿ ತೋರಿಸಿದೆ. ಪರಿಶೀಲನೆ ನಡೆಸಲಾದ 512 ನಾನ್-ಸಬರ್ಬನ್ ರೈಲ್ವೆ ನಿಲ್ದಾಣಗಳ ಪೈಕಿ 458 ನಿಲ್ದಾಣಗಳಲ್ಲಿ ಅಂದರೆ ಶೇ.89 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲಾ. ಫ್ಯಾನ್, ಕುಳಿತುಕೊಳ್ಳುವ ಆಸನಗಳು, ಮತ್ತು ಶೌಚಾಲಯಗಳ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ. ಅನೇಕ ನಿಲ್ದಾಣಗಳಲ್ಲಿ ಶೌಚಾಲಯಗಳು ಸ್ವಚ್ಛತೆಯಿಲ್ಲದ ಕಾರಣ ಬಳಸಲು ಯೋಗ್ಯವಾಗಿಲ್ಲ.

ಇನ್ನೂ ವಿಪರ್ಯಾಸವೆಂದರೆ, ಪ್ರಯಾಣಿಕರ ಸೌಲಭ್ಯಗಳಿಗಾಗಿ ಮೀಸಲಿಟ್ಟ ಬಜೆಟ್‌ನ ಶೇಕಡಾ 36 ರಿಂದ 44ರಷ್ಟು ಅನುದಾನವನ್ನ ರೈಲ್ವೆ ಇಲಾಖೆ ಬಳಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂಬುದನ್ನು ಸಹ ವರದಿ ತಿಳಿಸಿದೆ.

ಸರ್ಕಾರದ ಹೊಸ ಕ್ರಮಗಳು

ವರದಿಯ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ, ದೇಶಾದ್ಯಂತ ಸುಮಾರು 20,000 ಕೇಂದ್ರಗಳಲ್ಲಿ ಹೊಸ "ಟ್ಯಾಂಕ್ ಟು ಟ್ಯಾಪ್" ವಾಟರ್ ಫಿಲ್ಟ್ರೇಶನ್ ಸಿಸ್ಟಮ್ ಮತ್ತು ವಾಟರ್ ಕೂಲರ್‌ಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ.

ಇದರ ಜೊತೆಗೆ ಹಳೆಯ ನೀರಿನ ಟ್ಯಾಂಕ್‌ಗಳನ್ನ ಬದಲಾಯಿಸುವುದು, ನಿಗದಿತ ಸಮಯಕ್ಕೆ ಅವುಗಳನ್ನ ಶುಚಿ ಮಾಡಿ ಮತ್ತು ನಿಯಮಿತವಾಗಿ ನೀರಿನ ಗುಣಮಟ್ಟವನ್ನ ಪರೀಕ್ಷಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯನ್ನ ರೈಲ್ವೆ ಮಂಡಳಿಯ ಹಂತದಲ್ಲೇ ನೇರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+