ಮಂತ್ರಿ ಆಗ್ತೀನಿ ಅಂತ ಊಟಕ್ಕೆ ಕುಳಿತ ಡಿಕೆ ಶಿವಕುಮಾರ್

ಬೆಂಗಳೂರು, ನ. 13: ಕರ್ನಾಟಕ ಕಾಂಗ್ರೆಸ್ಸಿನ ವರ್ಚಸ್ವೀ ನಾಯಕ ಡಿಕೆ ಶಿವಕುಮಾರ್ ತಮ್ಮ ರಾಜಕೀಯ ಪಟ್ಟುಗಳನ್ನೆಲ್ಲಾ ಪಣಕ್ಕಿಟ್ಟು ರಾಜ್ಯದಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ತಮ್ಮ ಮತ್ತು ರಮ್ಯಾರನ್ನು ಗೆಲ್ಲಿಸುವ ಮೂಲಕ ತಮ್ಮ ತಾಕತ್ತು ಏನು ಎಂಬುದನ್ನು ಹೈಕಮಾಂಡಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಆದರೂ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲುವುದು ಡಿಕೆಶಿಗೆ ತಪ್ಪಲಿಲ್ಲ. ಅಂದರೆ ಅವರಿಗೆ ಮಂತ್ರಿ ಸ್ಥಾನ ದಕ್ಕಲಿಲ್ಲ. ಆದರೂ ಎದೆಗುಂದದ ಡಿಕೆಶಿ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಆ ಪ್ರಯತ್ನದಲ್ಲಿರುವಾಗಲೇ... ತಮ್ಮೆದುರು ಪದೇ ಪದೆ ಕಾಣಿಸಿಕೊಳ್ಳುತ್ತಿದ್ದ ಡಿಕೆಶಿಯನ್ನು ಕಂಡು 'ಅಚ್ಚಾ ಹಮ್ ದೇಖೇಂಗೆ' ಎಂದು ಅಭಯ'ಹಸ್ತ' ನೀಡಿದ್ದೇ ತಡ

DK Shivakumar made Rajasthan assembly election incharge for Congress

ಆನಂದತುಂದಿಲಿತರಾದ ಡಿಕೆಶಿ ಸಾಹೇಬರು 'ಭಾಗ್ಯದ ಬಾಗಿಲು ತೆರೆಯಿತು. ಹೈಕಮಾಂಡ್ ನನ್ನನ್ನು ಈ ಬಾರಿ ಮಂತ್ರಿಯನ್ನಾಗಿ ಮಾಡುವುದು ಖಚಿತ ಎಂದು ಪರಿಭಾವಿಸಿಕೊಂಡು ಬೆಂಗಳೂರಿಗೆ ಬಂದವರೇ 'ನೋಡ್ತಿರಿ ಇನ್ನೆರಡು ದಿನದಲ್ಲಿ ಸಿಹಿ ಸುದ್ದಿ ಕೊಡ್ತೀನಿ' ಎಂದು ಆಯ್ದ ಪತ್ರಕರ್ತರೆದುರು ಬಹು ಆಸೆಯಿಂದ ಹೇಳಿಕೊಂಡರು.

ಆದರೆ ಆ ಎರಡು ದಿನ ಕಳೆದು ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಡಿಕೆಶಿಗೆ ಕಾಲ್ಕೆಳಗಿನ ಭೂಮಿ ಕಂಪಿಸಿದಂತಾಗಿದೆ. ಏಕೆಂದರೆ 52 ವರ್ಷದ ಡಿಕೆಶಿಗೆ ಮಂತ್ರಿಯಾಗುವ ಭಾಗ್ಯ ಮತ್ತೆ ಕೈತಪ್ಪಿದೆ. ಆದರೂ ಮಂಡ್ಯ/ಕನಕಪುರದಲ್ಲಿ ಡಿಕೆಶಿ ಸಂಘಟನಾ ಸಾಮರ್ಥ್ಯ ಮೆಚ್ಚಿದ ಹೈಕಮಾಂಡ್ ಕೊನೆಗೂ ಡಿಕೆಶಿಗೆ ಬುಲಾವ್ ಕೊಟ್ಟೇ ಬಿಟ್ಟಿತು. ಎದ್ನೋ ಬಿದ್ನೋ ಎಂದು ದೆಹಲಿ ತಲುಪಿಕೊಂಡ ಡಿಕೆಶಿಯನ್ನು ಹೈಕಮಾಂಡ್ ಸೀದಾ ಜೈಪುರಕ್ಕೆ ಅಟ್ಟಿದೆ.

ರಾಣಿಸ್ಥಾನದಲ್ಲಿ ಡಿಕೆಶಿ ಅನಭಿಶಕ್ತ ದೊರೆ?:
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ಉಸ್ತುವಾರಿಯನ್ನು ನೀವೇ ವಹಿಸಿಕೊಳ್ಳಿ. ಅಷ್ಟೇ ಅಲ್ಲ. ಅಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಮುಂದಿದೆ ನಿಮಗೆ 'ಭಾರಿ ಕೊಡುಗೆ' ಎಂದು ಮತ್ತೆ ಅಶ್ವಮೇಧ ಕುದುರೆಯೆದುರು ಕ್ಯಾರೆಟ್ ಕಟ್ಟಿ ಬಿಟ್ಟಿದೆ. ಹಾಗಾಗಿ ಡಿಕೆಶಿ ಸಾಹೇಬರು ಈಗ ರಾಜಸ್ಥಾನದಲ್ಲಿ ಚುನಾವಣೆ ಕಾಲೇ ಊಟಕ್ಕೆ ಕುಳಿತಿದ್ದಾರೆ.

ಆದರೆ ಅದು ರಾಣಿಸ್ಥಾನವಾಗಿದೆ. ಬಿಜೆಪಿಯ 2,000 ಕೋಟಿ ರೂ ಆಸ್ತಿವಂತ ವಸುಂಧರಾರಾಜೇ ಸಿಂಧ್ಯಾ ಈ ಬಾರಿ ಗೆಲುವು ತಮ್ಮದೇ ಎಂದು ಆಸ್ಥಾನದಲ್ಲಿ ಕುಳಿತುಬಿಟ್ಟಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನದಲ್ಲಿ ಈ ಬಾರಿ interesting battle. ಅಲ್ಲಿ ಕಾಂಗ್ರೆಸ್ ಗೆದ್ದರೆ ಡಿಕೆಶಿ ಅನಭಿಶಕ್ತ ದೊರೆಯಾಗುವುದು ಕಟ್ಟಿಟ್ಟಬುತ್ತಿ.

200 ಸದಸ್ಯರ ರಾಜಸ್ಥಾನ ವಿಧಾನಸಭೆಗೆ ಮುಂದಿನ ತಿಂಗಳು ಡಿಸೆಂಬರ್ 1 ರಂದು ಚುನಾವಣೆ ನಡೆಯಲಿದೆ. 8ರಂದು ಫಲಿತಾಂಶ ಹೊರಬೀಳಲಿದೆ. All the best DK Shivakumar!

Rajasthan Assembly Election Schedule 2013:
Date of Issue of Gazette Notification: Tuesday, 5th November 2013
Last Date for Nominations: Tuesday, 12th November 2013
Scrutiny of Nominations to be closed on: Wednesday, 13th November 2013
Last Date for withdrawing the candidatures: Saturday, 16th November 2013
Date of Poll: Sunday, 1st December 2013
Date of counting the votes: Sunday, 8th December 2013

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+