ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ

ನವದೆಹಲಿ, ಅ.4 : ಲೋಕಸಭೆ ಚುನಾವಣೆಗೂ ಮುನ್ನ ನಡೆಯವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ನವದೆಹಲಿ, ಮಿಜೋರಾಂ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ್ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ವಿ.ಸಂಪತ್, ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ಎಲ್ಲಾ ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ ನರಕಾತ್ಮಕ ಮತದಾನ ಮಾಡಲು ಎಲ್ಲಾ ಚುನಾವಣೆಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

5 ರಾಜ್ಯಗಳಿಂದ ಸೇರಿ ಒಟ್ಟು 11 ಕೋಟಿ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ 5 ರಾಜ್ಯಗಳಲ್ಲಿಯೂ ನೀತಿ ಸಂಹಿತೆ ಜಾರಿಗೆ ಬರಲಿದೆ. 1 ಲಕ್ಷ 30 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಂಪತ್ ಹೇಳಿದರು. ಚುನಾವಣೆಗೂ ಮೊದಲು ಮತದಾರರಿಗೆ ಗುರುತಿನ ಚೀಟಿ ತಲುಪಿಸಲಾಗುವುದು ಎಂದರು. ಮತದಾನದ ಕುರಿತು ಮಾಹಿತಿ

ನವ ದೆಹಲಿಯಲ್ಲಿ ಡಿ.4ರಂದು ಚುನಾವಣೆ

ನವ ದೆಹಲಿಯಲ್ಲಿ ಡಿ.4ರಂದು ಚುನಾವಣೆ

ನವದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಡಿ.4ರಂದು ಚುನಾವಣೆ ನಡೆಯಲಿದೆ. ಡಿ.8ರಂದು ಮತ ಎಣಿಕೆ ನಡೆಯಲಿದೆ. ಡಿಸೆಂಬರ್ ಡಿ.17ರಂದು ನವದೆಹಲಿಯ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ.

ಛತ್ತೀಸ್ ಗಢ್ ನಲ್ಲಿ 2 ಹಂತದಲ್ಲಿ ಚುನಾವಣೆ

ಛತ್ತೀಸ್ ಗಢ್ ನಲ್ಲಿ 2 ಹಂತದಲ್ಲಿ ಚುನಾವಣೆ

ಛತ್ತೀಸ್ ಗಢ್ ನಲ್ಲಿ ಎರಡು ಹಂತದಲ್ಲಿ ನ.11 ಮತ್ತು 19 ಚುನಾವಣೆ ನಡೆಯಲಿದೆ. ಈ ಚುನಾವಣಾ ಫಲಿತಾಂಶ ಡಿ.8ರಂದು ಪ್ರಕಟಗೊಳ್ಳಲಿದೆ. ರಾಜ್ಯದ ಒಟ್ಟು 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಛತ್ತೀಸ್ ಗಢ್ ವಿಧಾನಸಭೆ ಅವಧಿ ಜನವರಿ 4, 2014 ರಂದು ಪೂರ್ಣಗೊಳ್ಳಲಿದೆ.

ರಾಜಸ್ಥಾನದಲ್ಲಿ ಡಿ.1ರಂದು ಚುನಾವಣೆ

ರಾಜಸ್ಥಾನದಲ್ಲಿ ಡಿ.1ರಂದು ಚುನಾವಣೆ

ರಾಜಸ್ಥಾನದ 200 ಕ್ಷೇತ್ರಗಳಿಗೆ ಡಿ.1ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ರಾಜಸ್ಥಾನ ವಿಧಾನಸಭೆಯ ಅವಧಿ ಡಿ.31ರಂದು ಅಂತ್ಯಗೊಳ್ಳಲಿದೆ.

ಮಧ್ಯಪ್ರದೇಶದಲ್ಲಿ ನ.25ರಂದು ಚುನಾವಣೆ

ಮಧ್ಯಪ್ರದೇಶದಲ್ಲಿ ನ.25ರಂದು ಚುನಾವಣೆ

ಮಧ್ಯಪ್ರದೇಶದ ರಾಜ್ಯದ 231 ಕ್ಷೇತ್ರಗಳಿಗೆ ನ.25ರಂದು ಚುನಾವಣೆ ನಡೆಯಲಿದೆ. ಈ ರಾಜ್ಯದ ಮತ ಎಣಿಕೆಯೂ ಡಿ.8ರಂದು ಪ್ರಕಟವಾಗಲಿದೆ. ಮಧ್ಯಪ್ರದೇಶ ವಿಧಾನಸಭೆ ಅವಧಿ ಡಿ.12ರಂದು ಮುಕ್ತಾಯವಾಗಲಿದೆ.

ಮಿಜೋರಾಂ ನಲ್ಲಿ ಡಿ.4 ರಂದು ಚುನಾವಣೆ

ಮಿಜೋರಾಂ ನಲ್ಲಿ ಡಿ.4 ರಂದು ಚುನಾವಣೆ

ಮಿಜೋರಾಂ ರಾಜ್ಯದಲ್ಲಿ 40 ಕ್ಷೇತ್ರಗಳಿಗೆ ಡಿ.4ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿ.8ರಂದು ನಡೆಯುತ್ತದೆ. ಮಿಜೋರಾಮ್ ವಿಧಾನಸಭೆಯ ಅವಧಿ ಡಿ.15ರಂದು ಕೊನೆಗೊಳ್ಳಲಿದೆ. (ಚಿತ್ರಕೃಪೆ : ಮಿಜೋರಾಂ ವೀಕಿ)

ನರೇಂದ್ರ ಮೋದಿ ಮೋಡಿ ನಡೆಯುತ್ತಾ?

ನರೇಂದ್ರ ಮೋದಿ ಮೋಡಿ ನಡೆಯುತ್ತಾ?

ಲೋಕಸಭೆ ಚುನಾವಣೆಗೂ ಮೊದಲು ಈ 5 ರಾಜ್ಯಗಳ ಚುನಾವಣೆ ನಡೆಯುತ್ತಿದೆ. ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಕ ಮೊದಲ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಈ ಚುನಾವಣೆಗಳಗಳು ಮಹತ್ವ ಪಡೆದುಕೊಂಡಿವೆ. ಐದು ರಾಜ್ಯಗಳಲ್ಲೂ ಮೋದಿ ಜಾದೂ ನಡೆಯುತ್ತದೆಯೇ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+