ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್‌ಗಿಂತ ಮೊದಲು ಧ್ಯಾನಚಂದ್‌ಗೆ ಭಾರತ ರತ್ನ ಸಿಗಬೇಕಿತ್ತು

By Prasad
|
Google Oneindia Kannada News

ಬೆಂಗಳೂರು, ನ. 16 : ವೆಸ್ಟ್ ಇಂಡೀಸ್ ವಿರುದ್ಧ 200ನೇ ಟೆಸ್ಟ್ ಆಡಿದ ನಂತರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸಚಿನ್ ತೆಂಡೂಲ್ಕರ್ ಭಾರತ ಸರಕಾರ ನೀಡುವ ಪರಮೋಚ್ಚ ನಾಗರಿಕ ಪ್ರಶಸ್ತಿ 'ಭಾರತ ರತ್ನ'ಕ್ಕೆ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಭಾರತ ರತ್ನ ಪಡೆಯುತ್ತಿರುವ ಮೊದಲ ಮತ್ತು ಅತಿ ಕಡಿಮೆ ವಯಸ್ಸಿನ ವ್ಯಕ್ತಿ ಸಚಿನ್ ಆಗಿದ್ದಾರೆ.

ಆದರೆ, ಅವರಿಗಿಂತ ಮೊದಲು ಭಾರತ ಹಾಕಿಯ ಧ್ರುವತಾರೆ, ಡಾನ್ ಬ್ರಾಡ್ಮನ್ ಅವರಿಂದಲೂ ಹೊಗಳಿಸಿಕೊಂಡಿದ್ದ ಧ್ಯಾನಚಂದ್ ಅವರಿಗೆ ಮೊದಲು 'ಭಾರತ ರತ್ನ' ಪ್ರಶಸ್ತಿ ದೊರೆಯಬೇಕಿತ್ತು ಎಂಬ ಮಾತುಗಳು ಎಲ್ಲ ವಲಯಗಳಿಂದ ಕೇಳಿಬರುತ್ತಿವೆ. ಏಕೆಂದರೆ, ಎರಡು ವರ್ಷಗಳ ಹಿಂದೆ ಧ್ಯಾನಚಂದ್ ಮತ್ತು ಸಚಿನ್ ಇಬ್ಬರಲ್ಲಿ ಮೊದಲಿಗೆ ಯಾರಿಗೆ ಸಿಗಬೇಕು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ಲತಾ ಮಂಗೇಶ್ಕರ್ ಅವರು ಮೋದಿಯನ್ನು ಹೊಗಳಿದ್ದಕ್ಕಾಗಿ ಭಾರತ ರತ್ನ ಕಿತ್ತುಕೊಳ್ಳಿ ಎನ್ನುವ ಕಾಂಗ್ರೆಸ್ಸಿಗರು, ಸಚಿನ್ ಒಂದು ವೇಳೆ ಮೋದಿಯನ್ನು ಹೊಗಳಿದರೆ ಈ ಪ್ರಶಸ್ತಿಯನ್ನು ಕಿತ್ತುಕೊಳ್ಳುವ ಧೈರ್ಯವನ್ನು ಕಾಂಗ್ರೆಸ್ ತೋರುತ್ತಾ ಎಂಬ ಪ್ರಶ್ನೆಯನ್ನು ಓದುಗರೊಬ್ಬರು ಎಸೆದಿದ್ದಾರೆ. ಇದು ಹುಳುಕು ಹುಡುಕುವ ಸಮಯವಲ್ಲವಾದರೂ, ತಮಗಿಂತ ಧ್ಯಾನಚಂದ್ ಅವರಿಗೆ ಮೊದಲು ಭಾರತ ರತ್ನ ನೀಡಿ ಎಂಬ ದೊಡ್ಡತನವನ್ನು ಸಚಿನ್ ತೋರುತ್ತಾರಾ ಎಂಬ ಬಾಣವನ್ನೂ ಎಸೆಯಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ಸೇರುವ ಮೊದಲೇ ಸಚಿನ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಿದ್ದರೆ ಆ ಪಕ್ಷದ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗುತ್ತಿತ್ತು. ಹಾಗೆ ಮಾಡದೆ ಸಚಿನ್ ಗೆ ಪ್ರಶಸ್ತಿ ಘೋಷಿಸಿ ಕಾಂಗ್ರೆಸ್ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಕರ್ನಾಟಕದ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿ ಯುಪಿಎ ಸರಕಾರ ತನ್ನ ಮಾನ ಉಳಿಸಿಕೊಂಡಿದೆ ಎಂದು ಟ್ವಿಟ್ಟಿಗರೊಬ್ಬರು ಉದ್ಘರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಗಿಂತ ಮೊದಲು ಧ್ಯಾನಚಂದ್ ಅವರಿಗೆ ಭಾರತ ರತ್ನ ಸಿಗಬೇಕಿತ್ತು ಎಂಬ ವಾದವನ್ನು ನೀವು ಒಪ್ಪುತ್ತೀರಾ? ಈ ಕುರಿತು ಟ್ವಿಟ್ಟರಲ್ಲಿ ಏನೇನು ಚರ್ಚೆಗಳು ನಡೆಯುತ್ತಿವೆ ಎಂಬುದರತ್ತ ಗಮನ ಹರಿಸೋಣ ಬನ್ನಿ. ಹಾಗೆಯೆ, ಸಚಿನ್ ತೆಂಡೂಲ್ಕರ್ ಮತ್ತು ಪ್ರೊ. ಸಿಎನ್ಆರ್ ರಾವ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.

ಅಪ್ರತಿಮ ಹಾಕಿ ಆಟಗಾರ ಧ್ಯಾನಚಂದ್

ಅಪ್ರತಿಮ ಹಾಕಿ ಆಟಗಾರ ಧ್ಯಾನಚಂದ್

1928, 1932 ಮತ್ತು 1936ರಲ್ಲಿ ಓಲಿಂಪಿಕ್ ಹಾಕಿ ಚಿನ್ನ ಗೆಲ್ಲಲು ಕಾರಣರಾಗಿದ್ದ, ಅತ್ಯುತ್ತಮ ಹಾಕಿಪಟುಗಳಲ್ಲಿ ಒಬ್ಬರೆನಿಸಿದ್ದ ಧ್ಯಾನಚಂದ್ (29 ಆಗಸ್ಟ್ 1905 - 3 ಡಿಸೆಂಬರ್ 1979) ಅವರಿಗೆ ಮೊದಲು 'ಭಾರತ ರತ್ನ' ಸಿಗಬೇಕೆಂಬ ಮಾತು ಕೇಳಿಬರುತ್ತಿವೆ. ಡಾನ್ ಬ್ರಾಡ್ಮನ್ ಅವರು, ಧ್ಯಾನಚಂದ್ ಗೋಲು ಗಳಿಸುತ್ತಿರುವುದು ನೋಡಿದರೆ ಕ್ರಿಕೆಟ್ ನಲ್ಲಿ ರನ್ ಗಳಿಸುತ್ತಿದ್ದಾರೇನೋ ಅನಿಸುತ್ತದೆ ಎಂದು ಹೇಳಿದ್ದರು.

ಧ್ಯಾನಚಂದ್ ಮತ್ತು ಮಿಲ್ಕಾಗೆ ಮಾಡಿದ ಅವಮಾನ

ಮೊದಲು ಸಚಿನ್ ಗೆ ಭಾರತ ರತ್ನ ನೀಡಿದರೆ ಅದು ಧ್ಯಾನಚಂದ್ ಮತ್ತು ಮಿಲ್ಕಾ ಸಿಂಗ್ ಗೆ ಮಾಡಿದ ಅವಮಾನ. ರಾಷ್ಟ್ರೀಯ ಆಟ ಹಾಕಿಗಿಂತ ಕ್ರಿಕೆಟ್ ದೊಡ್ಡದೆಂದು ಸರಕಾರ ಸಾಬೀತು ಮಾಡಿದೆ.

ಕಾಂಗ್ರೆಸ್ ಮೇಲಿನ ಅಭಿಮಾನ ಹೆಚ್ಚುತ್ತಿತ್ತು

ಕಾಂಗ್ರೆಸ್ ಪಕ್ಷ ಸೇರುವ ಮೊದಲೇ ಸಚಿನ್ ಅವರಿಗೆ ಭಾರತ ರತ್ನ ನೀಡಿದ್ದರೆ ಅದರ ಮೇಲಿನ ಅಭಿಮಾನ ಹೆಚ್ಚುತ್ತಿತ್ತು. ಆದರೆ...

ಸಚಿನ್ ತಮ್ಮ ಘನತೆ ಹೆಚ್ಚಿಸಿಕೊಳ್ಳುವರೆ?

ಭಾರತ ರತ್ನ ಪ್ರಶಸ್ತಿ ಸ್ವೀಕರಿಸುವ ಮೊದಲು ಧ್ಯಾನಚಂದ್ ಗೆ ಪ್ರಶಸ್ತಿ ನೀಡಿ ಎಂದು ಸಚಿನ್ ಹೇಳಿದರೆ ಅವರ ಘನತೆ ಹೆಚ್ಚುತ್ತದೆ. ಅವರು ಹಾಗೆ ಮಾಡುವರೆ?

ವಿಜ್ಞಾನ ಲೋಕದ ಬೆಳಗುವ ತಾರೆ

ಸಿಎನ್ಆರ್ ರಾವ್ ಅವರು ವಿಜ್ಞಾನ ಲೋಕದ ಬೆಳಗುವ ತಾರೆ ಎಂದಿದ್ದಾರೆ ಬಯೋಕಾನ್ ಚೀಫ್ ಕಿರಣ್ ಮಜುಂದಾರ್ ಷಾ.

ಇದೆಲ್ಲ ವೋಟ್ ರಾಜಕೀಯ

ಧ್ಯಾನಚಂದ್ ಮತ್ತು ಸಚಿನ್ ಇಬ್ಬರಿಗೂ ಒಟ್ಟಿಗೇ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಒಳ್ಳೆಯದಿತ್ತು. ಇದೆಲ್ಲ ವೋಟ್ ರಾಜಕೀಯ.

ಧ್ಯಾನಚಂದ್, ಕಪಿಲ್, ವಿ. ಆನಂದ್ ಗೂ ಸಿಗಬೇಕು

ಕ್ರೀಡಾಲೋಕದ ತಾರೆಗಳಾದ ಧ್ಯಾನಚಂದ್ರ, ಕಪಿಲ್ ದೇವ್, ವಿಶ್ವನಾಥನ್ ಆನಂದ್ ಅವರಿಗೂ ಭಾರತ ಸಿಗಬೇಕು. ಆದರೆ, ಸಚಿನ್ ಅವರಿಗೆ ಸಿಗಬಾರದಿತ್ತು ಅನ್ನುವುದು ಸಣ್ಣತನ. ಹಾಗೆಯೆ, ಸಿಎನ್ಆರ್ ರಾವ್ ಅವರಿಗೂ...

ಇದಕ್ಕೆ ಕಾರಣ ಸಚಿನ್ ಅಲ್ಲ

ಹಾಕಿ ಮಾಂತ್ರಿಕ ಧ್ಯಾನಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗದಿದ್ದರೆ ಇದರೆ ಕಾರಣ ಸರಕಾರವೇ ಹೊರತು ಸಚಿನ್ ಅಲ್ಲ.

ಇಬ್ಬರೂ ಅರ್ಹರೇ

ಕ್ರೀಡೆಯಲ್ಲಿ ಅಪಾರ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಮತ್ತು ಧ್ಯಾನಚಂದ್ ಇಬ್ಬರೂ ಭಾರತ ರತ್ನ ಪ್ರಶಸ್ತಿಗೆ ಅರ್ಹರು.

ಇದು ಬೆಂಗಳೂರು ಸಂಭ್ರಮಿಸುವ ಕ್ಷಣ

ಪ್ರೊ. ಸಿಎನ್ಆರ್ ರಾವ್ ಅವರಿಗೆ ಭಾರತ ರತ್ನ. ಇದು ಬೆಂಗಳೂರು ಸಂಭ್ರಮಿಸುವ ಕ್ಷಣ.

English summary
Though no one can question the contribution made to the country by Sachin Tendulkar in for the form of Cricket, though he deserves the Bharat Ratna award, many feel that the highest civilian award first should have been given to hockey legend Dhyan Chand. Do you agree?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X