ದೆಹಲಿ: Gen Z ಪ್ರತಿಭಟನೆಯ ಹಿಂದೆ ಪಾಕಿಸ್ತಾನದ ಕುಮ್ಮಕ್ಕು? 400ಕ್ಕೂ ಹೆಚ್ಚು ಖಾತೆಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಜೆನ್-ಜಿ ವಿದ್ಯಾರ್ಥಿಗಳ ಪ್ರತಿಭಟನೆಯು ಈಗ ಹೊಸದೊಂದು ಸ್ವರೂಪ ಪಡೆದುಕೊಂಡಿದೆ. ಶಾಂತಿಯುತವಾಗಿ ನಡೆಯಬೇಕಿದ್ದ ಈ ಪ್ರತಿಭಟನೆಯನ್ನ ದೇಶವ್ಯಾಪಿ ಬಿಂಬಿಸಲು ಪಾಕಿಸ್ತಾನ ಸೇರಿದಂತೆ ಕೆಲವು ವಿದೇಶಿ ಕೈಗಳು ಡಿಜಿಟಲ್ ಪ್ಲ್ಯಾಟ್‌ ಫಾರ್ಮ್‌ ಮೂಲಕ ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಈ ಪ್ರತಿಭಟನೆಯ ಹಿಂದೆ ನಡೆದಿರುವ ವಿದೇಶಿ ಡಿಜಿಟಲ್ ಸಂಪರ್ಕಗಳು ಹಾಗೂ ಅನುಮಾನಾಸ್ಪದ ಆರ್ಥಿಕ ವಹಿವಾಟುಗಳ ಕುರಿತು ದೆಹಲಿ ಪೊಲೀಸರು ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ. ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಈ ಜಾಲ ಕೆಲಸ ಮಾಡಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Delhi Police

ಜೆನ್-ಜಿ ಪ್ರತಿಭಟನೆ ಪಾಕಿಸ್ತಾನ ನಂಟು

ದೆಹಲಿ ಪೊಲೀಸರ ತನಿಖಾ ತಂಡವು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಸುಮಾರು 180 ಜನಪ್ರಿಯ ಇನ್‌ಫ್ಲುಯೆನ್ಸರ್‌ಗಳು ಹಾಗೂ ಯೂಟ್ಯೂಬರ್‌ಗಳ ಖಾತೆಗಳನ್ನ ಪರಿಶೀಲನೆಗೆ ಒಳಪಡಿಸಿದೆ. ಇದರೊಂದಿಗೆ, ಪಾಕಿಸ್ತಾನದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿವೆ ಎನ್ನಲಾದ 400ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಚಟುವಟಿಕೆಗಳನ್ನ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಕೇವಲ ವೈಯಕ್ತಿಕ ಖಾತೆಗಳಷ್ಟೇ ಅಲ್ಲದೆ, ಮೂರು ಖಾಸಗಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳ ಮೇಲೂ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಅವುಗಳ ಹಣಕಾಸು ಮೂಲಗಳನ್ನ ಪತ್ತೆಹಚ್ಚಲಾಗುತ್ತಿದೆ. ಈ ಎಲ್ಲಾ ಖಾತೆಗಳು ಪ್ರತಿಭಟನೆಗೆ ಸಂಬಂಧಿಸಿದ ಪ್ರಚೋದನಕಾರಿ ವಿಷಯಗಳನ್ನ ಹಂಚಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತ 20 ನೀಟ್ ವಿದ್ಯಾರ್ಥಿಗಳ ನ್ಯಾಯಕ್ಕೆ ಹೋರಾಡಿದ ಸಿಜೆಪಿ, ಗೆದ್ದ ಖುಷಿಯಲ್ಲಿ ಪಾರ್ಟಿ ಬೇಕಿತ್ತಾ?
ಪ್ರತಿಭಟನೆಯ ಸಮಯದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಸಲು ಆಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್, ಎಕ್ಸ್, ಯೂಟ್ಯೂಬ್ ಹಾಗೂ ಇತರೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲದಲ್ಲಿ ಒಂದೇ ರೀತಿಯ ನರೇಟಿವ್‌ಗಳನ್ನ ಹಂಚಲು ಕೃತಕ ಬುದ್ಧಿಮತ್ತೆ ಆಧಾರಿತ ಪರಿಕರಗಳನ್ನ ಬಳಸಲಾಗಿದೆ.

ಎಐ ಮೂಲಕ ಒಂದೇ ಸಂದೇಶದ ನೂರಾರು ವಿಭಿನ್ನ ರೀತಿಯಾಗಿ ಮಾಡಿ, ಅವುಗಳನ್ನ ಸಾವಿರಾರು ಖಾತೆಗಳ ಮೂಲಕ ಏಕಕಾಲಕ್ಕೆ ಪೋಸ್ಟ್ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ನಡೆಯುತ್ತಿದ್ದ ಒಂದು ಪ್ರತಿಭಟನೆಯು ಇಡೀ ದೇಶದಲ್ಲೇ ದೊಡ್ಡ ಸಮಸ್ಯೆಯಾಗಿದೆ ಎಂಬಂತಹ ಸುಳ್ಳು ಸುದ್ದಿಯನ್ನಾ ಪಸರಿಸಲು ಪ್ರಯತ್ನಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಈ ಡಿಜಿಟಲ್ ದಾಳಿಯಲ್ಲಿ ಮತ್ತೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ದೇಶದಲ್ಲಿ ನಡೆದ 'ಆಪರೇಷನ್ ಸಿಂಧೂರ್' ಸೇರಿದಂತೆ ಹಲವು ಪ್ರಮುಖ ಆನ್‌ಲೈನ್ ಚಟುವಟಿಕೆಗಳ ಸಂದರ್ಭದಲ್ಲಿ ಸಕ್ರಿಯವಾಗಿದ್ದ ಹಲವು ಖಾತೆಗಳೇ, ಜಂತರ್ ಮಂತರ್ ಪ್ರತಿಭಟನೆಯ ಸಮಯದಲ್ಲಿ ಏಕಾಏಕಿ ಮತ್ತೆ ಸಕ್ರಿಯಗೊಂಡಿವೆ.

ಭಾರತದ ಆಂತರಿಕ ವಿಚಾರಗಳಲ್ಲಿ ಗೊಂದಲ ಸೃಷ್ಟಿಸುವಾಗಲೆಲ್ಲಾ ನಿರ್ದಿಷ್ಟ ವಿದೇಶಿ ಖಾತೆಗಳು ಸಕ್ರಿಯವಾಗುವ ಕುರಿತು ಸೈಬರ್ ಕ್ರೈಂ ವಿಭಾಗದ ತಜ್ಞರು ತನಿಖೆ ನಡೆಸುತ್ತಿದ್ದಾರೆ.

ವಿದೇಶಿ ಹಣಕಾಸು ವಹಿವಾಟುಗಳ ಮೇಲೆ ನಿಗಾ

ಪ್ರತಿಭಟನೆಯನ್ನು ತೀವ್ರಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಹಾಗೂ ಕೆಲವು ಇನ್‌ಫ್ಲುಯೆನ್ಸರ್‌ಗಳಿಗೆ ವಿದೇಶಗಳಿಂದ ರಹಸ್ಯವಾಗಿ ಹಣ ಬರುತ್ತಿದೆಯೇ ಎಂಬುದರ ಬಗ್ಗೆಯೂ ತನಿಖೆ ಮುಂದುವರೆದಿದೆ. ಬ್ಯಾಂಕ್ ಖಾತೆಗಳು, ಕ್ರಿಪ್ಟೋಕರೆನ್ಸಿ ವಹಿವಾಟುಗಳು ಹಾಗೂ ಹವಾಲಾ ಮಾರ್ಗಗಳ ಮೂಲಕ ನಡೆದಿರಬಹುದಾದ ಆರ್ಥಿಕ ವ್ಯವಹಾರಗಳನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+