ಬ್ಯಾಂಕ್, ರೈಲ್ವೆ ಇಲಾಖೆ ಸೇರಿ ಸರ್ಕಾರಿ ಸಂಸ್ಥೆಗಳಲ್ಲೇ ಹೆಚ್ಚಿದ ಭ್ರಷ್ಟಾಚಾರ: CVC ವಾರ್ಷಿಕ ವರದಿಯಲ್ಲಿ ಬಹಿರಂಗ

ಕೇಂದ್ರದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಾಸ್ತವ ಚಿತ್ರಣವನ್ನ ಇದೀಗ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಬಿಚ್ಚಿಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಕೇಂದ್ರ ಜಾಗೃತ ಆಯೋಗದ ವಾರ್ಷಿಕ ವರದಿಯ ಪ್ರಕಾರ, 2025ನೇ ಸಾಲಿನಲ್ಲಿ ದೇಶಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳ ವಿರುದ್ಧ ಒಟ್ಟು 70,584 ಭ್ರಷ್ಟಾಚಾರ ದೂರುಗಳು ದಾಖಲಾಗಿವೆ.

ಈ ಅಂಕಿ-ಅಂಶಗಳು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯನ್ನ ಎತ್ತಿತೋರಿಸುತ್ತಿವೆ. ದಾಖಲಾಗಿರುವ ಒಟ್ಟು ದೂರುಗಳ ಪೈಕಿ, ವಿವಿಧ ಇಲಾಖೆಗಳ ಮುಖ್ಯ ಜಾಗೃತ ಅಧಿಕಾರಿಗಳು (ಸಿವಿಒ) 2025ರ ಡಿಸೆಂಬರ್ 31ರೊಳಗೆ 64,905 ದೂರುಗಳನ್ನ ಪರಿಶೀಲಿಸಿ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

CVC Annual Report 2025 Over 70 500 Corruption Complaints Filed Banks and Railways Top the List

ಬ್ಯಾಂಕ್ ಹಾಗೂ ರೈಲ್ವೆ ಇಲಾಖೆಯಲ್ಲಿ ಗರಿಷ್ಠ ದೂರು

ಸಿವಿಸಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಭಾರತೀಯ ರೈಲ್ವೆ ಇಲಾಖೆ ಮೊದಲ ಎರಡು ಸ್ಥಾನಗಳನ್ನ ಆಕ್ರಮಿಸಿಕೊಂಡಿವೆ. ವರದಿಯ ಪ್ರಕಾರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ ಬರೋಬ್ಬರಿ 9,933 ದೂರುಗಳು ದಾಖಲಾಗಿವೆ. ಇವುಗಳಲ್ಲಿ 9,520 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, ಇನ್ನೂ 413 ಪ್ರಕರಣಗಳು ಬಾಕಿ ಉಳಿದಿವೆ.

ಈ ಪೈಕಿ 52 ಪ್ರಕರಣಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲದಿಂದ ವಿಚಾರಣೆ ಹಂತದಲ್ಲಿವೆ. ಬ್ಯಾಂಕ್‌ಗಳ ನಂತರದ ಸ್ಥಾನದಲ್ಲಿರುವ ರೈಲ್ವೆ ಇಲಾಖೆಯ ವಿರುದ್ಧ 9,381 ದೂರುಗಳು ಕೇಳಿಬಂದಿವೆ. ಈ ಪೈಕಿ 8,754 ದೂರುಗಳನ್ನ ಇತ್ಯರ್ಥಗೊಳಿಸಲಾಗಿದ್ದು, 627 ದೂರುಗಳ ವಿಲೇವಾರಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇತರೆ ಪ್ರಮುಖ ಸರ್ಕಾರಿ ಸಂಸ್ಥೆಗಳ ಮೇಲಿನ ದೂರುಗಳ ವಿವರ

ಬ್ಯಾಂಕ್ ಮತ್ತು ರೈಲ್ವೆಯನ್ನು ಹೊರತುಪಡಿಸಿ, ಕೇಂದ್ರದ ಇತರ ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ವಿರುದ್ಧವೂ ಸಾವಿರಾರು ದೂರುಗಳು ದಾಖಲಾಗಿವೆ. ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ವಿರುದ್ಧ 6,531 ದೂರುಗಳು ಬಂದಿದ್ದರೆ, ದೆಹಲಿ ಸರ್ಕಾರೇತರ ಸ್ಥಳೀಯ ಸಂಸ್ಥೆಗಳ ವಿರುದ್ಧ 4,834 ದೂರುಗಳು ದಾಖಲಾಗಿವೆ.

ಅದೇ ರೀತಿ, ಕಲ್ಲಿದ್ದಲು ವಲಯದಲ್ಲಿ 4,118, ಹಣಕಾಸು ಇಲಾಖೆಯಲ್ಲಿ 3,107, ದೆಹಲಿ ಸರ್ಕಾರದ ವಿರುದ್ಧ 2,804 ದೂರುಗಳು ದಾಖಲಾಗಿವೆ. ಪೆಟ್ರೋಲಿಯಂ ಸಚಿವಾಲಯದ ಮೇಲೆ 2,722, ದೆಹಲಿ ಪೊಲೀಸ್ ಮೇಲೆ 2,633, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮೇಲೆ 2,139, ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ವಿರುದ್ಧ 2,036 ದೂರುಗಳು ದಾಖಲಾಗಿರುವುದಾಗಿ ಕೇಂದ್ರ ಜಾಗೃತ ಆಯೋಗ ಸ್ಪಷ್ಟಪಡಿಸಿದೆ.

ವಿಲೇವಾರಿಯಾಗದ ಭ್ರಷ್ಟಾಚಾರ ಪ್ರಕರಣಗಳು

ಒಟ್ಟಾರೆ ದಾಖಲಾದ ದೂರುಗಳ ಪೈಕಿ 5,679 ದೂರುಗಳು ಇನ್ನೂ ವಿಲೇವಾರಿ ಪ್ರಕ್ರಿಯೆಯಲ್ಲಿದ್ದು, ಇವುಗಳಲ್ಲಿ 2,002 ದೂರುಗಳು ಕಳೆದ ಮೂರು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ. ನಿಯಮಗಳ ಪ್ರಕಾರ, ಮುಖ್ಯ ಜಾಗೃತ ಅಧಿಕಾರಿಗಳು ತಮಗೆ ಸಲ್ಲಿಕೆಯಾದ ದೂರುಗಳನ್ನ ಕೇವಲ ಮೂರು ತಿಂಗಳ ಗಡುವಿನೊಳಗೆ ತನಿಖೆ ನಡೆಸಿ ಮುಕ್ತಾಯಗೊಳಿಸಬೇಕು. ಆದರೆ, ಸಾವಿರಾರು ಪ್ರಕರಣಗಳು ವಿಳಂಬವಾಗುತ್ತಿರುವುದು ಆಡಳಿತಾತ್ಮಕ ಹಿನ್ನಡೆಗೆ ಕಾರಣವಾಗಿದೆ.

ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಕೇಂದ್ರ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರೂ, ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಇಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.

ಸಾರ್ವಜನಿಕರ ಹಣ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವ ಬ್ಯಾಂಕ್ ಹಾಗೂ ರೈಲ್ವೆಯಂತಹ ಬೃಹತ್ ಸಂಸ್ಥೆಗಳಲ್ಲೇ ಅತಿ ಹೆಚ್ಚು ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಕಿ ಇರುವ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಿವಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+