ಛತ್ತೀಸ್ ಗಢದಲ್ಲಿ ಟಿಕೆಟ್ ಗಾಗಿ ಚೇರ್, ಪಾಟ್ ಮುರಿದ ಕಾಂಗ್ರೆಸ್ ಕಾರ್ಯಕರ್ತರು!

ರಾಯ್ಪುರ, ನವೆಂಬರ್ 02: ಛತ್ತೀಸ್ ಗಢದಲ್ಲಿ ಬಿಜೆಪಿ ವಿರುದ್ಧ ಜಯಗಳಿಸಲೇಬೇಕು ಎಂಬ ಜಿದ್ದಿಗೆ ಕಾಂಗ್ರೆಸ್ ಬಿದ್ದಿದೆ. ಆದರೆ ಬಿಜೆಪಿ ವಿರುದ್ಧ ತಂತ್ರ ರೂಪಿಸುವುದಕ್ಕಿಂತ ಪಕ್ಷದ ಒಳಗಿನ ಅಸಮಾಧಾನ ಶಮನ ಮಾಡುವುದಕ್ಕೆ ತಂತ್ರ ರೂಪಿಸುವುದೇ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿದೆ.

ಛತ್ತೀಸ್ ಗಢದ ರಾಜಧಾನಿ ರಾಯ್ಪುರ ಮತ್ತು ಬಿಲಾಸ್ಪುರದಲ್ಲಿರುವ ಕಾಂಗ್ರೆಸ್ ಕಚೇರ ಗುರುವಾರದಂದು ಸಾಕಷ್ಟು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ.

Congress workers in Chhattisgarh break chairs over ticket distribution for Elections

ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಕೆಲವು ಹೆಸರುಗಳ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದೇ ಇದ್ದಲ್ಲಿ ಸುಮ್ಮನಿರುವುವದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತವಾಗಿ ಕಚೇರಿಯ ಕುರ್ಚಿಗಳು, ಹೂಕುಂಡಗಳನ್ನು ಮುರಿದು ಹಾಕಿದ ಘಟನೆ ನಡೆಯಿತು.

ಪಕ್ಷಕ್ಕಾಗಿ ನಿರಂತರವಾಗಿ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸುವುದು ಸಹಜ. ಪಕ್ಷದಿಂದ ಯಾರೂ ಬಂಡಾಯವೆದ್ದಿಲ್ಲ. ಟಿಕೆಟ್ ಹಂಚಿಕೆಯ ವಿಷಯದಲ್ಲಿ ಅನ್ಯಾಯವಾಗಬಾರದು ಎಂಬುದಷ್ಟೇ ಪಕ್ಷದ ಕಾರ್ಯಕರ್ತರ ಕಳಕಳಿ ಎಂದು ಕಾಂಗ್ರೆಸ್ ಮುಖಂಡ ನರೇಂದ್ರ ಬೊಲಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+