ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಸಿಎಫ್‌ಎಲ್ ಬಲ್ಬ್ ಹಿಂದಕ್ಕೆ ನೀಡಿ, 10 ರು. ಪಡ್ಕೊಳ್ಳಿ

|
Google Oneindia Kannada News

ನವದೆಹಲಿ, ಫೆಬ್ರವರಿ, 23: ಹಳೆಯ ರದ್ದಿ ಕಾಗದ, ಕಬ್ಬಿಣದ ತುಂಡು, ಪ್ಲಾಸ್ಟಿಕ್ ಮರುಬಳಕೆಗೆ ತೆಗೆದುಕೊಂಡು ಹೋಗುವುದನ್ನು ನೋಡಿದ್ದೆವೆ. ಇಲ್ಲಿ ಪುಡಿಗಾಸು ಸಿಗುತ್ತದೆ ಎನ್ನುವುದಕ್ಕಿಂತ ಅವು ಮರುಬಳಕೆ ಮಾಡಿದರೆ ಮಾಲಿನ್ಯ ಕಡಿಮೆಯಾಗುವುದರ ಜತೆಗೆ ಸಂಪನ್ಮೂಲಗಳ ಪುನರ್ ಉಪಯೋಗ ಆಗುತ್ತದೆ ಎಂಬುದು ಮುಖ್ಯ.

ಆದರೆ ನಿಮ್ಮ ಮನೆಯಲ್ಲಿ ಬಳಕೆ ಮಾಡಿ ಬಿಟ್ಟ ಸಿಎಫ್ ಎಲ್ ಬಲ್ಬ್ ಗಳಿಗೂ ಬೆಲೆ ಬಂದಿದೆ. ಹೌದು ಹಳೆಯ ಬಲ್ಬ್ ಹಿಂದಕ್ಕೆ ನೀಡಿದರೆ ನಿಮಗೆ 10 ರು. ಸಹ ಸಿಗಲಿದೆ. ಪಾದರಸ ಪರಿಸರ ಮಾಲಿನ್ಯ ತಡೆಗೆ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಬಳಕೆದಾರರಿಂದ ಹಳೆಯ ಸಿಎಫ್ ಎಲ್ ಬಲ್ಬ್ ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಮುಂದಾಗಿದೆ.[ಎಲ್ ಇಡಿ, ಸಿಎಫ್ ಎಲ್, ಸಾಮಾನ್ಯ ಬಲ್ಬ್‌ ನಡುವಿನ ವ್ಯತ್ಯಾಸ]

Central Government plans CFL return scheme

ಪಾದರಸ ಮಾಲಿನ್ಯ ತಡೆಯಲು ಹಳೆಯ ಸಿಎಫ್ ಎಲ್ ಬಲ್ಬ್‌ ಗಳನ್ನು ಗ್ರಾಹಕರಿ೦ದ ಹಿ೦ಪಡೆದುಕೊಳ್ಳಲು ಕೇ೦ದ್ರ ಸಕಾ೯ರ ಚಿ೦ತನೆ ನಡೆಸಿದೆ. ಈ ಕುರಿತಾಗಿ ಕೇ೦ದ್ರ ಪರಿಸರ ಸಚಿವಾಲಯ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಬಲ್ಬ್ ಗಳನ್ನು ಮರಳಿಸುವವರಿಗೆ 10 ರೂ. ನೀಡಲಾಗುವುದೆ೦ದು ಎಂದು ಹೇಳಲಾಗಿದೆ.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

ಈ ಹೊಸ ನೀತಿಯ ಬಗ್ಗೆ ಹೂಡಿಕೆದಾರರಿಂಧ ಅಭಿಪ್ರಾಯ ಸಹ ಕೇಳಲಾಗಿದೆ. ಬಲ್ಬ್ ಉತ್ಪಾದಕರೆ ವಾಪಸ್ ಪಡೆದುಕೊಳ್ಳಬೇಕಿದ್ದು ಅದನ್ನು ಸೂಕ್ತ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಅವರೇ ಹೊಂದಿರುತ್ತಾರೆ. ಸಿಎಫ್ ಎಲ್ ಬಲ್ಬ್‌ ಗಳಿ೦ದಾಗುತ್ತಿರುವ ಪಾದರಸ ಮಾಲಿನ್ಯದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯ ಸೂಕ್ತ ಪರಿಹಾರ ಕ್ರಮಕ್ಕೆ ಚಿಂತನೆ ನಡೆಸುವಂತೆ ತಿಳಿಸಿತ್ತು.

English summary
The Central Government and environment ministry has proposed a scheme whereby old compact fluorescent lamp (CFL) bulbs can be returned to the manufacturer for Rs.10, as part of an initiative to control mercury pollution from CFLs. Under the draft scheme published by the ministry of environment, forests and climate change (MoEFCC), manufacturers will set up centres to collect old and discarded CFLs. This will come under the concept of Extended Producer Responsibility or EPR. The ministry had last week put up a draft of the scheme on its website, seeking comments from all stakeholders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X