ಇಂದು CBSE ಕ್ಲಾಸ್ 12 ರಿಸಲ್ಟ್, ಫಲಿತಾಂಶ ಪಡೆಯಲು ಹೀಗೆ ಮಾಡಿ
ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್ ಇ) ಕ್ಲಾಸ್ 12 ಪರೀಕ್ಷೆ ಫಲಿತಾಂಶ ಮೇ 28(ಭಾನುವಾರ) ಪ್ರಕಟಗೊಳ್ಳಲಿದೆ. ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ವೀಕ್ಷಿಸಬಹುದು.
ನವದೆಹಲಿ, ಮೇ 26: ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್ ಇ) ಕ್ಲಾಸ್ 12 ಪರೀಕ್ಷೆ ಫಲಿತಾಂಶ ಮೇ 28(ಭಾನುವಾರ) ಪ್ರಕಟಗೊಳ್ಳಲಿದೆ. ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ವೀಕ್ಷಿಸಬಹುದು.
ಮೇ 24ರಂದು ಪ್ರಕಟಗೊಳ್ಳಬೇಕಿದ್ದ 12ನೇ ತರಗತಿ ಫಲಿತಾಂಶ ಮುಂದೂಡಲ್ಪಟ್ಟಿತ್ತು.ಕೇಂದ್ರ ಸಚಿವ ಜಾವಡೇಕರ್ ಅವರು ಮೇ 27ರೊಳಗೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು.[ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ]

ಸುಮಾರು 10,98,891 ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶ ಪ್ರಕಟಗೊಳ್ಳುವುದು ತಡವಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿತ್ತು. ಸಿಬಿಎಸ್ ಇ ಆಡಳಿತ ಮಂಡಳಿ ಸಭೆಯಲ್ಲಿ ದೆಹಲಿ ಹೈಕೋರ್ಟ್ ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.[ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ]
ಏತಕ್ಕೆ ವಿಳಂಬ?: ಅಂಕ ಮಿತಿ ನಿಯಮವೇ ಗಲಾಟೆಗೆ ಕಾರಣ ಕಳೆದ ವರ್ಷದವರೆಗೂ ಸಿಬಿಎಸ್ ಇ ಫಲಿತಾಂಶವನ್ನು ಅಂಕಗಳ ಮಿತಿ ನಿಯಮಗಳ ಆಧಾರದಲ್ಲೇ ಪ್ರಕಟಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಆ ಪದ್ಧತಿಯನ್ನು ಮಂಡಳಿ ಕೈಬಿಟ್ಟಿದೆ. ಇದರ ವಿರುದ್ಧ ಕೆಲವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಅಂಕ ಮಿತಿ ನಿಯಮ ಕೈಬಿಡದಂತೆ ಸೂಚಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸಿಬಿಎಸ್ಇ ಸುಪ್ರೀಂಕೋರ್ಟಿಗೆ ಮೊರೆ ಹೋಗುವುದಾಗಿ ಹೇಳಿದ್ದು ಇನ್ನಷ್ಟು ಸಮಸ್ಯೆ ಜಟಿಲಗೊಳಿಸಿತ್ತು.
ಫಲಿತಾಂಶ ನೋಡುವುದು ಹೇಗೆ?: ಅಧಿಕೃತ ವೆಬ್ ಸೈಟ್ ಗಳಿಗೆ ಲಾಗ್ ಇನ್ ಆಗಿ cbse.nic.in, cbseresults.nic.in, results.nic.in
* Senior School Certificate Examinations (Class 12) Results 2017 ಗಾಗಿ ಹುಡುಕಿ
* ನಿಮ್ಮ ನೋಂದಣಿ ಹಾಗೂ ಶಾಲೆ ಸಂಖ್ಯೆ ಹಾಕಿ
* ಪ್ರಿಂಟ್ ಔಟ್ ತೆಗೆದುಕೊಳ್ಳಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications