ಮಗನ ಕಳೆದುಕೊಂಡ ತಾಯಿಗೆ ನ್ಯಾಯ ಸಿಗುವುದೇ?

Subscribe to Oneindia Kannada

ಪಾಟ್ನಾ, ಮೇ 10: ಕಾರು ಓವರ್ ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡ ಯುವಕನ ಅಮ್ಮನ ಪರಿಸ್ಥಿತಿ ಹೇಗಿರಬಹುದು? ಊಹಿಸಿದರೆ ನಮ್ಮ ಕಣ್ಣು ತೇವವಾಗುವುದು ನಿಶ್ಚಿತ.

ಗುಂಡಿಟ್ಟು ಹತ್ಯೆ ಮಾಡಿದ ಆರೋಪಿ ಬಿಹಾರ ಜೆಡಿಯು ವಿಧಾನಪರಿಷತ್‌ ಸದಸ್ಯೆಯ ಮಗ ರಾಕಿ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

bihar

ಜೆಡಿ (ಯು)ನ ಶಾಸಕಿ ಮನೋರಮಾ ದೇವಿ ಹಾಗೂ ಬಿಂದಿ ಯಾದವ್‌ ಪುತ್ರ ರಾಕಿ ಯಾದವ್‌ ಬಂಧಿತ ಆರೋಪಿ. ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್‌ ದೇವ್‌ ಹತ್ಯೆಗೀಡಾಗಿದ ಯುವಕ. ಒನ್ ಇಂಡಿಯಾದೊಂದಿಗೆ ಮಾತನಾಡಿದ ಆದಿತ್ಯ ಅವರ ತಾಯಿ ಚಾಂದ್ ಸಚ್ ದೇವ್ ನೋವು ತೆರೆದಿಟ್ಟರು. ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹ ಮಾಡಿದರು.

ಮಗನನ್ನು ಕಳೆದುಕೊಂಡಿದ್ದೇನೆ, ಒಬ್ಬ ತಾಯಿಯಾಗಿ ಏನು ಮಾಡಲು ಸಾಧ್ಯ? ನ್ಯಾಯಕ್ಕಾಗಿ ಅಂಗಲಾಚುವುದೊಂದೆ ನನ್ನ ಮುಂದಿರುವ ದಾರಿ ಎಂದು ಆದಿತ್ಯ ಅವರ ಅಮ್ಮ ನೋವಿನಿಂದ ಹೇಳಿದರು.[ಸೊಸೆ ಕುಸುಮಾ ಬಗ್ಗೆ ರವಿ ತಾಯಿ ಗೌರಮ್ಮ ಹೇಳಿದ್ದೇನು?]

bihar

ಈ ಬಗ್ಗೆ ಸರ್ಕಾರಕ್ಕೆ, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದಲೇ ಕಾಲ ಕಳೆಯುತ್ತಿದ್ದೇವೆ ಎಂದು ಚಾಂದ್ ಸಚ್ ದೇವ್ ಹೇಳುತ್ತಾರೆ.[ಮುಂಬೈನ ಮೊದಲ ಪ್ರನಾಳ ಶಿಶು ತಾಯಿಯಾದ ಕ್ಷಣ]

ಕ್ಷುಲ್ಲಕ ಕಾರಣಕ್ಕೆ ಒಂದು ಜೀವ ಬಲಿಯಾಗಿ ಹೋಗಿದೆ. ಘಟನೆ ದೂರದ ಬಿಹಾರದಲ್ಲಿ ನಡೆದಿರಬಹುದು. ಆದರೆ ವಿವಿಐಪಿಗಳ ವರ್ತನೆಗೆ ಇದೊಂದು ಉದಾಹರಣೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಹಿಂದೆ ಕರ್ನಾಟಕದಲ್ಲಿ ಸಚಿವರಾಗಿದ್ದ ಮಹೋದಯರೊಬ್ಬರು ತಮ್ಮ ಕಾರು ಓವರ್ ಟೇಕ್ ಮಾಡಿದ್ದವರನ್ನು ತರಾಟೆಗೆ ತೆದುಕೊಂಡು ಹಲ್ಲೆ ಮಾಡಿದ್ದು ಸುದ್ದಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After three days of investigation and raids in Aditya Sachdeva murder case, the accused Rocky Yadav has finally been arrested by police in Gaya, Bihar.Soon after his arrest Rocky, son of JDU MLC Manorama Devi, denied from all the charges and claimed he was in Delhi when the incident happened on Saturday, May 7. He was arrested for allegedly shooting 19-year-old Aditya on Gaya-Bodh Gaya Road.
Please Wait while comments are loading...