ಈ ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ!

Posted By:
Subscribe to Oneindia Kannada

ಬೆಂಗಳೂರು/ ನವದೆಹಲಿ, ಜ 14: ಹಬ್ಬಹರಿದಿನ, ಸಾಲುಸಾಲು ರಜೆಗಳು, ಪರವೂರಿಗೆ ಹೋಗುವವರು ಬರುವವರು ಸಾವಿರ ರೂಪಾಯಿ ಮುಖಬೆಲೆಯ ನೋಟು ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಪರಿಶೀಲಿಸಿ.

ಹೌದು, ಖೋಟಾ ನೋಟಿನ ಭಾರೀ ಜಾಲವೊಂದು ವ್ಯವಸ್ಥಿತವಾಗಿ ಭಾರತದ ಮಾರುಕಟ್ಟೆಗೆ ಕೋಟಿ ಕೋಟಿ ಮೌಲ್ಯದ ಸಾವಿರ ರೂಪಾಯಿ ನೋಟನ್ನು ನುಸುಳಿಸುವಲ್ಲಿ ಯಶಸ್ವಿಯಾಗಿದೆ.

Beware of thousand rupees face value currency notes: RBI notification

ರಿಸರ್ವ್ ಬ್ಯಾಂಕ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಎರಡು ಕ್ರಮಸಂಖ್ಯೆಯ ನೋಟನ್ನು ಸ್ವೀಕರಿಸಬಾರದೆಂದು ತನ್ನ ನೋಟೀಸ್ ನಲ್ಲಿ ತಿಳಿಸಿದೆ. (ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು)

ಭಾರತೀಯ ಮಾರುಕಟ್ಟೆಗೆ ಒಂದು ಸಾವಿರ ರೂಪಾಯಿಯ ಎರಡು ಕೋಟಿ ನೋಟು ಪ್ರವೇಶಿಸಿದೆ, ಅಂದರೆ ಎರಡು ಸಾವಿರ ಕೋಟಿ ಮೌಲ್ಯದ ಖೋಟಾ ನೋಟು ಚಲಾವಣೆಯಲ್ಲಿದೆ. ಅದು ಯಾರ ಯಾರ ಕೈಯಲ್ಲಿದಿಯೋ ದೇವರೇ ಬಲ್ಲ!

2AQ ಮತ್ತು 8AC ಕ್ರಮಸಂಖ್ಯೆಯನ್ನು ಹೊಂದಿರುವ ನೋಟನ್ನು ಸ್ವೀಕರಿಸದಿರಿ, ಇದು ಖೋಟಾ ನೋಟು ಎಂದು RBI ಸಾರ್ವಜನಿಕರನ್ನು ಎಚ್ಚರಿಸಿದೆ.

Beware of thousand rupees face value currency notes: RBI notification

ಸಾರ್ವಜನಿಕರ ನಿರ್ಲಕ್ಷ್ಯವೇ ವಂಚಕರ ಬಂಡವಾಳ ಎನ್ನುವುದನ್ನು ಅರಿತಿರುವ ದಂಧೆಕೋರರನ್ನು ಹತ್ತಿಕ್ಕಲು, ಭಾರತ ಸರಕಾರ ಚಾಪೆಯ ಕೆಳಗೆ ನುಗ್ಗಿದರೆ ವಂಚಕರು ರಂಗೋಲಿ ಕೆಳಗೆ ನುಸುಳುವಲ್ಲಿ ಯಶಸ್ವಿಯಾಗುತ್ತಲೇ ಬರುತ್ತಿರುವುದು ವಿಪರ್ಯಾಸ.

ಒಂದು ವೇಳೆ, ಈಗಾಗಲೇ ಈ ನೋಟು ಹೊಂದಿದವರು ಏನು ಮಾಡಬೇಕು, ಬ್ಯಾಂಕಿಗೆ ಹಿಂದಿರುಗಿಸಿದರೆ ಅಸಲಿ ನೋಟು ಕೊಡುತ್ತಾರಾ ಅಥವಾ ನಕಲಿ ನೋಟನ್ನು ಬ್ಯಾಂಕಿನವರು ಹರಿದು ಹಾಕುತ್ತಾರಾ ಎನ್ನುವುದರ ಬಗ್ಗೆ RBI ಸ್ಪಷ್ಟನೆ ನೀಡಿಲ್ಲ.

ಪಾಕಿಸ್ತಾನದಲ್ಲಿ ಮುದ್ರಣವಾಗುವ ಖೋಟಾ ನೋಟುಗಳು ಬಾಂಗ್ಲಾ ಮೂಲಕ ಭಾರತಕ್ಕೆ ಬರುತ್ತವೆ ಎನ್ನುವುದನ್ನು ಗುಪ್ತಚರ ಇಲಾಖೆ ಪುರಾವೆ ಸಮೇತ ಹಲವಾರು ಬಾರಿ ದೃಢ ಪಡಿಸಿದ್ದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two crores of one thousand note, value of Two Thousand Crore entered Indian market bearing serial number 2AQ and 8AC, RBI notification.
Please Wait while comments are loading...