Bank Holidays: 2026 ಜನವರಿ ತಿಂಗಳ ಬ್ಯಾಂಕ್ ರಜೆ ಅಪ್ಡೇಟ್ಸ್
Bank Holidays Jan 2026: ಹೊಸ ವರ್ಷ 2026 ಜನವರಿ ತಿಂಗಳಿನಲ್ಲಿ ಭರ್ಜರಿ ಬ್ಯಾಂಕ್ ರಜೆಗಳು ಇವೆ. ಬ್ಯಾಂಕ್ಗಳು ಯಾವ ದಿನ ರಜೆ ಇರಲಿವೆ ಎನ್ನುವುದನ್ನು ಮೊದಲೇ ತಿಳಿದುಕೊಳ್ಳುವುದರಿಂದ ನೀವು ಆಯಾ ದಿನಗಳ ಹಿಂದಿನ ಅಥವಾ ಮುಂದಿನ ದಿನಗಳಲ್ಲಿ ಅದಕ್ಕೆ ಪರ್ಯಾಯವಾಗಿ ಬ್ಯಾಂಕ್ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬಹುದು. ಬ್ಯಾಂಕ್ಗಳು ಜನವರಿ ತಿಂಗಳಿನಲ್ಲಿ ಯಾವ ದಿನ ರಜೆ ಇರಲಿವೆ ಹಾಗೂ ಜನವರಿ ತಿಂಗಳಿನ ಹಬ್ಬಗಳು ಯಾವುದು ಎನ್ನುವ ವಿವರ ಇಲ್ಲಿದೆ.
ಆರ್ಬಿಐ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಪ್ರಕಾರ ಜನವರಿ 2026ರಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಬ್ಯಾಂಕ್ಗಳು ಒಟ್ಟಾರೆ 16 ದಿನಗಳವರೆಗೆ ಮುಚ್ಚಿರಲಿವೆ. ಇದರಲ್ಲಿ ಕರ್ನಾಟಕದಲ್ಲಿ ಯಾವ ದಿನಗಳು ರಜೆ ಇರಲಿವೆ ಎನ್ನುವುದು ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ. ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಬ್ಯಾಂಕ್ ರಜೆ ದಿನಗಳು ಬದಲಾಗುತ್ತವೆ.

ಪ್ರತಿ ತಿಂಗಳಿನಲ್ಲೂ ಈ ದಿನಗಳಲ್ಲಿ ಬ್ಯಾಂಕ್ಗಳಿಗೆ ರಜೆ
ಪ್ರತಿ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರದಂದು ಭಾರತದಾದ್ಯಂತ ಬ್ಯಾಂಕ್ಗಳಿಗೆ ರಜೆ ಇರಲಿವೆ. ಜನವರಿಯಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಭಾರತದ ಪ್ರಮುಖ ಬ್ಯಾಂಕ್ಗಳಿಗೆ ರಜೆ ಇರಲಿವೆ. ಜನವರಿ 2026 ರಲ್ಲಿ 16 ಬ್ಯಾಂಕ್ ರಜಾದಿನಗಳು ಇವೆ.
ವಾರಾಂತ್ಯ ಬ್ಯಾಂಕ್ ರಜಾ ದಿನಗಳ ವಿವರ
ಜನವರಿ 4: ಭಾನುವಾರದಂದು ಬ್ಯಾಂಕ್ ರಜಾದಿನ.
ಜನವರಿ 10: ಎರಡನೇ ಶನಿವಾರ ಬ್ಯಾಂಕ್ ರಜಾದಿನ.
ಜನವರಿ 11: ಭಾನುವಾರ ಬ್ಯಾಂಕ್ ರಜಾದಿನ.
ಜನವರಿ 18: ಭಾನುವಾರ ಬ್ಯಾಂಕ್ಗಳಿಗೆ ರಜೆ.
ಜನವರಿ 24: ಎರಡನೇ ಶನಿವಾರ ಬ್ಯಾಂಕ್ ರಜೆ.
ಜನವರಿ 25: ಭಾನುವಾರ ಬ್ಯಾಂಕ್ ರಜೆ.
ಕರ್ನಾಟಕದಲ್ಲಿ ಈ ದಿನ ಬ್ಯಾಂಕ್ಗಳಿಗೆ ರಜೆ
ಜನವರಿ ತಿಂಗಳಿನಲ್ಲಿ ವಾರಾಂತ್ಯದ 6 ರಜೆ ದಿನಗಳು ಹಾಗೂ 2 ಸಾರ್ವತ್ರಿಕ ರಜೆ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 8 ದಿನಗಳು ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ.
ಜನವರಿ 15: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದ ಬ್ಯಾಂಕ್ಗಳಿಗೆ ರಜೆ ಇರಲಿವೆ.
ಜನವರಿ 26: ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.
ದೇಶದಾದ್ಯಂತ ಜನವರಿ 2026ರಲ್ಲಿ ಬ್ಯಾಂಕ್ ರಜಾದಿನ ಸಂಪೂರ್ಣ ವಿವರ
ಜನವರಿ 1: ಹೊಸ ವರ್ಷದ ದಿನ / ಗಾನ್-ನಗೈ ಕಾರಣ ತಮಿಳುನಾಡು, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರ, ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಪ್ರದೇಶಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಜನವರಿ 2: ಮನ್ನಂ ಜಯಂತಿ ಕಾರಣ ಮಿಜೋರಾಂ ಮತ್ತು ಕೇರಳದಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿವೆ.
ಜನವರಿ 3: ಹಜರತ್ ಅಲಿ ಜನ್ಮದಿನಾಚರಣೆ ಅಂಗವಾಗಿ ಉತ್ತರ ಪ್ರದೇಶದಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿವೆ.
ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನದ ಕಾರಣ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಜನವರಿ 14: ಮಕರ ಸಂಕ್ರಾಂತಿ / ಮಾಘ ಬಿಹು ಕಾರಣ ಗುಜರಾತ್, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿವೆ.
ಜನವರಿ 15: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಸಿಕ್ಕಿಂ ರಾಜ್ಯಗಳ ಬ್ಯಾಂಕ್ಗಳಿಗೆ ರಜೆ ಇರಲಿವೆ.
ಜನವರಿ 16: ತಿರುವಳ್ಳುವರ್ ದಿನದಂದು ತಮಿಳುನಾಡಿನಾದ್ಯಂತ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಜನವರಿ 17: ಉಝವರ ತಿರುನಾಳ್ ಕಾರಣ ತಮಿಳುನಾಡಿನಲ್ಲಿ ಬ್ಯಾಂಕ್ ರಜೆ ಇರಲಿದೆ.
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ, ಸರಸ್ವತಿ ಪೂಜೆ, ಬಸಂತ ಪಂಚಮಿ ಹಿನ್ನೆಲೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತ್ರಿಪುರಾದಲ್ಲಿ ಬ್ಯಾಂಕ್ ರಜೆ ಇರಲಿದೆ.
ಜನವರಿ 26: ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications