Bank Holiday: ವಾರದಲ್ಲಿ ಎರಡು ದಿನ ರಜೆಗಾಗಿ ಸಿಬ್ಬಂದಿ ಮುಷ್ಕರಕ್ಕೆ ನಿರ್ಧಾರ: ದೇಶಾದ್ಯಂತ 4 ದಿನ ಬ್ಯಾಂಕ್ ಸೇವೆ ಸ್ಥಗಿತ
Bank Holiday: ಬ್ಯಾಂಕ್ ಸಿಬ್ಬಂದಿ ವಾರದಲ್ಲಿ ಎರಡು ದಿನ ರಜೆಗಳನ್ನು ನೀಡಬೇಕು ಎಂದು ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಈ ಬೇಡಿಕೆ ಈಡೇರಿರಲಿಲ್ಲ. ಆದ್ದರಿಂದ ಸಿಬ್ಬಂದಿಗಳು ಇದೀಗ ಮುಷ್ಕರಕ್ಕೆ ಮುಂದಾಗಿದ್ದು, ದೇಶಾದ್ಯಂತ ನಾಲ್ಕು ದಿನ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ ಎನ್ನುವ ಮಾಹಿತಿಯಿದೆ. ಹಾಗಾದ್ರೆ ದಿನಾಂಕಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸದ್ಯ ಬ್ಯಾಂಕ್ಗಳು ಪ್ರತಿ ತಿಂಗಳ ಎರಡು, ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ದಿನದಂದು ಮುಚ್ಚಲ್ಪಡುತ್ತದೆ. ಇದೀಗ ಸಿಬ್ಬಂದಿ ವಾರದಲ್ಲಿ ಎರಡು ದಿನ ರಜೆ ನೀಡಲೇಬೇಕು ಎಂಬ ಪಟ್ಟು ಹಿಡಿದು ಕುಳಿತಿದ್ದು, ಇದೇ ವಿಚಾರವಾಗಿ ನಾಲ್ಕು ದಿನ ಮುಷ್ಕರಕ್ಕೂ ಮುಂದಾಗಿದ್ದಾರೆ. ಈ ವೇಳೆ ಬ್ಯಾಂಕ್ಗಳ ವ್ಯವಹಾರ ಸ್ಥಗಿತಗೊಳ್ಳಲಿದೆ ಎನ್ನಲಾಗುತ್ತಿದೆ.

ಬ್ಯಾಂಕ್ ಮುಷ್ಕರಕ್ಕೆ ನಿರ್ಧಾರ: ವಾರಾಂತ್ಯದ ರಜೆಗಳ ಜೊತೆ ಬ್ಯಾಂಕ್ ಸಿಬ್ಬಂದಿಗಳು ನಾಲ್ಕು ದಿನ ಮುಷ್ಕರಕ್ಕೆ ಮುಂದಾಗಿದ್ದಾರೆ. ಪರಿಣಾಮ ಈ ವೇಳೆ ಬ್ಯಾಂಕ್ ವ್ಯವಹಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕೆಲಸದ ಅವಧಿ ಕಡಿತಗೊಳಿಸುವಂತೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ವಾರದಲ್ಲಿ 6 ದಿನಗಳ ಬದಲು ಐದು ದಿನಗಳ ಕೆಲಸದ ಅವಧಿಯನ್ನು ನಿಗದಿಪಡಿಸಬೇಕೆಂಬುದು ಅವರ ಪ್ರಮುಖ ಬೇಡಿಕೆ ಆಗಿದೆ. ಈ ಹಿನ್ನೆಲೆ ಜನವರಿ 27ರಂದು ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಮುಷ್ಕರ ನಡೆಯಲಿದೆ.
ಈ ಮುಷ್ಕರಕ್ಕೆ ಜೊತೆಗೆ ಈಗಾಗಲೇ ಇರುವ ರಜೆಗಳ ಹಿನ್ನೆಲೆ ಜನವರಿ 24 ಶನಿವಾರ, 25 ಭಾನುವಾರ, 26ರಂದು ಗಣರಾಜ್ಯೋತ್ಸವದ ಸರ್ಕಾರಿ ರಜೆ ಹಾಗೂ 27ರಂದು ಬ್ಯಾಂಕ್ ಮುಷ್ಕರ ಮಾಡಲು ಮುಂದಾಗಿದ್ದು, ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.
ಈ ಅವಧಿಯಲ್ಲಿ ಶಾಖಾ ಮಟ್ಟದ ಎಲ್ಲಾ ಬ್ಯಾಂಕ್ಗಳ ಸೇವೆಗಳು ಸ್ಥಗಿತ ಆಗಲಿದ್ದು, ಹಣ ವಹಿವಾಟು, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್, ಪಾಸ್ಬುಕ್ ಎಂಟ್ರಿ ಸೇರಿದಂತೆ ಪ್ರಮುಖ ವ್ಯವಹಾರಗಳು ವ್ಯತ್ಯಯ ಆಗಲಿವೆ. ಇದರಿಂದ ಗ್ರಾಹಕರು ಮತ್ತು ವ್ಯಾಪಾರ ವಲಯಕ್ಕೆ ತುಂಬಾ ತೊಂದರೆಯಾಗುವ ಸಾಧ್ಯತೆಯಿದೆ.
ಗ್ರಾಹಕರಿಗೆ ಪ್ರಮುಖ ಸಲಹೆಗಳು: ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಹಾಗೂ ಎಟಿಎಂ ಸೇವೆಗಳು ಇರಲಿವೆ. ಆದ್ದರಿಂದ ಡಿಜಿಟಲ್ ಮೂಲಕ ಹಣ ವರ್ಗಾವಣೆ ಹಾಗೂ ಪಾವತಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಬ್ಯಾಂಕ್ ಮೂಲಗಳು ಸ್ಪಷ್ಟಪಡಿಸಿವೆ. ಅಗತ್ಯವಿರುವ ನಗದು ವಿತ್ಡ್ರಾ, ಚೆಕ್ ಸಲ್ಲಿಕೆ ಅಥವಾ ಇತರೆ ಪ್ರಮುಖ ಬ್ಯಾಂಕ್ ಕಾರ್ಯಗಳನ್ನು ಗ್ರಾಹಕರು ಮುಂಚಿತವಾಗಿ, ವಾರಾಂತ್ಯಕ್ಕೆ ಮುನ್ನವೇ ಪೂರ್ಣಗೊಳಿಸಿಕೊಳ್ಳಬೇಕು ಅಂತಲೂ ಗ್ರಾಹಕರಿಗೆ ಸಲಹೆ ನೀಡಿದ್ದಾರೆ.
ಕೆಲಸದ ಒತ್ತಡ ತಗ್ಗಿಸಲು ಸಹಾಯ: ಐದು ದಿನಗಳ ವರ್ಕಿಂಗ್ ಡೇ ನೀತಿಯಿಂದ ಕೆಲಸದ ಒತ್ತಡ ಕಡಿಮೆ ಆಗುತ್ತದೆ. ಕೆಲಸದ ಕಾರ್ಯಕ್ಷಮತೆಯಲ್ಲಿ ಸುಧಾರಿಸುತ್ತದೆ ಮತ್ತು ಉದ್ಯೋಗಿಗಳಿಗೆ ತಮ್ಮ ಕುಟುಂಬಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಗಲಿದೆ ಎಂದು ಬ್ಯಾಂಕ್ ಒಕ್ಕೂಟಗಳು ಹೇಳುವ ಮಾತಾಗಿದೆ. ಭಾರತದಲ್ಲಿನ ಹೆಚ್ಚಿನ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಹಣಕಾಸು ಸಂಸ್ಥೆಗಳು ಈಗಾಗಲೇ ಐದು ದಿನಗಳ ವೇಳಾಪಟ್ಟಿಯನ್ನು ಪಾಲಿಸುತ್ತವೆ. ಇತರೆ ಬ್ಯಾಂಕ್ ಸಿಬ್ಬಂದಿಯೂ ಇದೀಗ ಬೇಡಿಕೆ ಮುಂದಿಟ್ಟಿದ್ದಾರೆ.
ಶನಿವಾರದಂದು ರಜೆ ಘೋಷಣೆ: ಗ್ರಾಹಕ ಸೇವೆಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು, ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 40 ಹೆಚ್ಚುವರಿ ನಿಮಿಷ ಕೆಲಸ ಮಾಡಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಪ್ರಸ್ತಾಪಿಸಿದೆ. RBI, LIC, GIC, ಷೇರು ಮಾರುಕಟ್ಟೆಗಳು, ಫಾರೆಕ್ಸ್ ಮತ್ತು ಹಣ ಮಾರುಕಟ್ಟೆಗಳು ಈಗಾಗಲೇ ಶನಿವಾರದಂದು ರಜೆ ಘೋಷಣೆ ಮಾಡಿವೆ.
UFBU ಒಂಬತ್ತು ಪ್ರಮುಖ ಬ್ಯಾಂಕ್ ಒಕ್ಕೂಟಗಳನ್ನು ಪ್ರತಿನಿಧಿಸುವ ಒಂದು ಸಂಸ್ಥೆ ಆಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಕೆಲವು ಹಳೆಯ ಖಾಸಗಿ ಬ್ಯಾಂಕುಗಳ ಉದ್ಯೋಗಿಗಳನ್ನು ಒಳಗೊಂಡಿದೆ. ಭಾರತದ ವಿಶಾಲವಾದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಐದು ದಿನಗಳ ಕೆಲಸದ ವಾರವನ್ನು ಜಾರಿಗೆ ತರುವುದು ಸುಲಭವಲ್ಲ. ಕೆಲಸದ ಸಮಯ, ವೇತನ ಮತ್ತು ಕಾರ್ಯಾಚರಣೆಯ ಬದಲಾವಣೆಗಳ ಕುರಿತು ಒಪ್ಪಂದ ಇಲ್ಲದೆ, ಪರಿವರ್ತನೆ ಸುಲಭವಲ್ಲ. ಗ್ರಾಹಕರು ತಾತ್ಕಾಲಿಕ ಅನಾನುಕೂಲತೆಯನ್ನು ಎದುರಿಸಬೇಕಾಗಬಹುದು. ಆದರೆ ಉತ್ತಮ ಕೆಲಸ, ಸಮತೋಲನ ಮತ್ತು ದೀರ್ಘಕಾಲೀನ ದಕ್ಷತೆಗೆ ಈ ಕ್ರಮ ಅತ್ಯಗತ್ಯ ಎಂಬುದು ಒಕ್ಕೂಟಗಳ ವಾದವಾಗಿದೆ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications