Get Updates
Get notified of breaking news, exclusive insights, and must-see stories!

Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ

Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ ಎನ್ನುವ ಬಗ್ಗೆ ಹವ್ಯಾಸಿ ಬರಹಗಾರರಾದ ಅಶ್ವಿನಿ ದಾಸರೆ ಅವರ ಬರಹ ಇಲ್ಲಿದೆ.

ಉಳಿದ ಊರುಗಳ ಪರಿಸ್ಥಿತಿ ಇನ್ನೂ ಚೆನ್ನಾಗೆ ಇದೆ Especially ಉತ್ತರ ಕರ್ನಾಟಕ ಹಾಗೂ ಕರಾವಳಿ ನಮ್ಮ ಭಾಷೆ ಹಾಗೂ ಸಂಸ್ಕೃತಿ ಉಳಿಸಿಕೊಂಡು ಹೋಗುವಲ್ಲಿ ಇವರುಗಳ ಪಾತ್ರ ಹೆಚ್ಚಾಗಿಯೇ ಇದೆ.. But ಬೆಂಗಳೂರಿನಂಥ ನಗರಗಳಲ್ಲಿ ಈ Northiesಗಳ ಹಾವಳಿಯಿಂದ ಕನ್ನಡ ಕ್ಷೀಣಿಸುತ್ತಿದೆ! ತುಂಬ ಜವಾಬ್ದಾರಿಯಿಂದಲೇ ಇದನ್ನು ಹೇಳ್ತಾ ಇದಿನಿ. ಭಾಷೆಯನ್ನು ಉಳಿಸಲು ವೇದಿಕೆಗಳು ಬೇಡ ಎಂದುಕೊಂಡಿದ್ದೆ ನಾನು ಆದರೆ ಬೆಂಗಳೂರಿನ ಬೋರ್ಡ್‌ಗಳ ಹಾವಳಿಯಿಂದ ಈ ವೇದಿಕೆಗಳ ಪ್ರಾಮುಖ್ಯತೆ ಅರ್ಥವಾಯಿತು. ನನ್ನ ಜೊತೆ ಅನೇಕ ಪಾಲಕರು ಒಪ್ಪಬಹುದಾದ ಒಂದು ಕಹಿ ಸತ್ಯ ಹೇಳಲೇಬೇಕು... ನಮ್ಮ ಜನರಿಗೆ ನಮ್ಮ ಕನ್ನಡವೇ ಅಸಹ್ಯ.

Bengaluru Kannada

how do you write so much in kannada yaar? ಅಯ್ಯೋ ಕನ್ನಡ ಬರೆಯೊದೆಲ್ಲ i can't even imagine ಅಂತ ದೊಡ್ಡಸ್ತಿಕೆಯಲ್ಲಿ ಹೇಳಿಕೊಳ್ಳುವ ಪಾಲಕರ ಮಕ್ಕಳಿಗೆ ಇನ್ಯಾವ ರೀತಿಯಲ್ಲಿ ಕನ್ನಡ ಹೇಳಿಕೊಡಬಹುದು ಮನೆಯಲ್ಲಿ ಎಂಬುದನ್ನ ಊಹಿಸಲು ಅಸಾಧ್ಯ. ಹೀಗೆ ಹೇಳುವವರು ಕನ್ನಡಿಗರೇ ಅನ್ನೋದು ಇನ್ನಷ್ಟು ವಿಚಿತ್ರ. ನನಗೆ ವೈಯಕ್ತಿಕವಾಗಿ ಯಾವ ಭಾಷೆಯ ಮೇಲು ಅಸಡ್ಡೆಯಾಗಲೀ ದ್ವೇಷವಾಗಲೀ ಇಲ್ಲ, ಡಿಡಿ ನೋಡಿ ಬೆಳೆದ ನಮಗೆ ಮತ್ತು ಮುಸ್ಲಿಂ ಜನರ ಒಡನಾಟವಿದ್ದ ಬಾರ್ಡರ್ ಊರುಗಳ ಮಕ್ಕಳಿಗೆ ಶಾಲೆಯಲ್ಲಿ ಆರನೆ ಕ್ಲಾಸಿಗೆ ಶುರುವಾಗುವ ಹಿಂದಿ ಭಾಷೆಯ ಲಿಪಿ ಕಲಿಯುವ ಮುಂಚೆ ನಿರರ್ಗಳವಾಗಿ ಹಿಂದಿ ಮಾತನಾಡಲು ಬರುತ್ತಿತ್ತು.

ಲಿಪಿ ಕಲಿಯುವುದರಿಂದ ಭಾಷೆ ಬರುತ್ತದೆ ಅನ್ನೋಕಾಗಲ್ಲ ಹಾಂ ಓದು ಬರಹ ಕಲಿಯಬಹುದು ಸಂವಹನಕ್ಕು ಲಿಪಿ ಕಲಿಕೆಗು ಸಂಬಂಧವಿಲ್ಲ! ಹುಬ್ಬಳ್ಳಿಯಲ್ಲಿ ಇರುವಾಗ ಮಗಳು ಇದೇ CBSC ಪಠ್ಯದಲ್ಲಿ ಬರುವ ಕನ್ನಡವನ್ನು ಇಷ್ಟ ಪಟ್ಟೇ ಓದುತ್ತಿದ್ದಳು... ಬೆಂಗಳೂರಿನ ದೊಡ್ಡ ಶಾಲೆಗೆ ಸೇರಿದ ನಂತರ, ಕನ್ನಡ ಈಸ್ ಸೋ ಬೋರಿಂಗ್ ಅಮ್ಮ, ನಂಗ್ ಇಷ್ಟನೇ ಆಗ್ತಿಲ್ಲ ಯಾಕ್ ಬೇಕು ಆ ಭಾಷೆ ಅಂದುಬಿಟ್ಲು. ಒಂದೇಟು ಬಿಟ್ಟು ಕೂರಿಸಿ ಬುದ್ಧಿ ಹೇಳಿದೆ ನಿಂಗ್ ಇಷ್ಟಾ ಆಗ್ತಿಲ್ವ ಅಥವಾ ಕಷ್ಟ ಆಗ್ತಿದಿಯಾ? problem ಎಲ್ಲಿದೆ ಅಂತ ಕೇಳಿದರೆ, ಇವಳ ಸ್ನೆಹಿತರ ಬಳಗವೆಲ್ಲ ಉತ್ತರ ಭಾರತದವರು, ಅವರೆಲ್ಲರಜೊತೆ ಮಾತು ಇಂಗ್ಲಿಷ್‌ನಲ್ಲಿ ಅವರಿಗೆಲ್ಲ ಕನ್ನಡ ಇಷ್ಟವಿಲ್ಲ, ಹಂಗಾಗಿ ನಂಗೂ ಇಷ್ಟ ಆಗ್ತಿಲ್ಲ ಅಂತ ಉತ್ತರ ಬಂತು.

ಸಮಾಧಾನವಾಗಿ ಕೂರಿಸಿ ಅವರಿಗೆ ಇಷ್ಟ ಇಲ್ಲ ಅಂದ್ರೆ ಯಾರಿಗೂ ನಷ್ಟವಿಲ್ಲ ಬಂಗಾರ, ನಿಂಗೆ ಅವರ ಜೊತೆ ಸೇರಿ ಇಷ್ಟಾ ಆಗ್ತಿಲ್ಲ ಅಂದ್ರೆ ನಿನ್ ಫ್ರೆಂಡ್ ಶ್ರದ್ಧಾಗೆ ನಾನೂ ಇಷ್ಟ ಆಗಲ್ಲ, ಅವಳಿಗೆ ಅವಳಮ್ಮ ಜಾಸ್ತಿ ಇಷ್ಟ ಅಲ್ವಾ? ಹಂಗಾರೆ ನೀನು ಅವರಮ್ಮನ್ನೇ ಇಷ್ಟ ಪಡು ನನ್ನ ಬೇಡ ಅಂದೆ... ಇಲ್ಲಮ್ಮ ನಂಗ್ ಅರ್ಥ ಆಯ್ತು ಇವಾಗ ನಾಳೆಯಿಂದ ನಾನೇ ಅವರಿಗೆಲ್ಲ ಹೇಳ್ತಿನಿ, ನಮ್ ಭಾಷೆಯನ್ನ ಅವಮಾನಿಸುವವರಿಗೆ ತಿಳಿಸಿ ಹೇಳ್ತಿನಿ ದಿನಕ್ಕೊಂದು ಕನ್ನಡ ಪದ ಕಲಸ್ತಿನಿ, ಅಂತ ತಪ್ಪು ಒಪ್ಪಿಕೊಂಡಳು, ಅದಾದ ಒಂದು ವಾರಕ್ಕೆ ಅಮ್ಮ ನಮ್ಮ ಗ್ರೂಪ್‌ನಲ್ಲಿ ಇಬ್ಬರು ಕನ್ನಡಿಗರೇ ಇದ್ದಾರೆ. ಅವರು ಕನ್ನಡ ಪಿರಿಯಡ್ ಅಂತ ಎಂತದ್ದೋ Expression ಕೊಡ್ತಿದ್ರು, You should be ashamed to say this being Kannadiga ಅಂತ ದಬಾಯ್ಸಿದೆ ಅಂತ ಹೇಳಿದಳು... ಇವಾಗ ಅವರೆಲ್ಲರ ಕನ್ನಡದ ಬಗ್ಗೆ ಇರುವ ಅಸಮಧಾನ ಕಮ್ಮಿಯಾಗಿದೆ ಇಷ್ಟವೋ ಕಷ್ಟವೋ ಕಲಿತಿದಾರೆ... ಈಗಂತೂ ಪರೀಕ್ಷೆ ಮುಗಿದು ರಜೆ ಕೂಡ ಶುರುವಾಗಿದೆ.

ನಾವು ಮನೆಯಲ್ಲಿ ಮಕ್ಕಳಿಗೆ ಭಾಷೆಯ ಬಗ್ಗೆ ಜ್ಞಾನ ಕೊಡದೇ ಇರುವ ಕಾರಣಕ್ಕೆ ಸಮೂಹ ಸನ್ನಿಯ ಜೊತೆಗೆ ಮಕ್ಕಳು ಈ ರೀತಿ ತಮಗರಿವಿಲ್ಲದೇ ಒಂದು ಹಿಂಡಿನ ಜೊತೆ ಗುರುತಿಸಿಕೊಂಡು ನಮ್ಮ ಬೇರುಗಳಿಂದ ವಿಮುಖರಾಗುತ್ತಾರೆ.. ಹಾಗಿದ್ರೆ ನಿಮ್ ಮಕ್ಕಳಿಗೆ ಕನ್ನಡ ಮೀಡಿಯಂನಲ್ಲಿ ಓದಿಸಿ ಅಂತ ವ್ಯರ್ಥ ಪ್ರಲಾಪ ಮಾಡುವ ಜನರಿಗೆ ಹೇಳಲು ಎಂತದ್ದು ಇಲ್ಲ ನಿಮ್ಮ ಮೆದುಳು ಸರಿಮಾಡಿಸಿಕೊಳ್ಳಿ ಅಂತಷ್ಟೇ ಹೇಳಬಹುದು. Need of the hour is met at the right time. ಉಳಿದದ್ದೇನೆ ಇರಲಿ ಬೆಂಗಳೂರಿನ ಹಲವು ಶಾಲೆಗಳು ಇಂಗ್ಲಿಷ್ ಹಿಂದಿಮಯವಾಗಿರುವ ಸಮಯದಲ್ಲಿ ಇದು ಸೂಕ್ತ ನಿರ್ಧಾರ. ನಮ್ಮ ಭಾಷೆಗೆ ಆದ್ಯತೆ ಕೊಡುವುದು ರಾಜಕೀಯ ವಿಷಯವಾಗಿರುವುದು ದುರಂತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+