Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ
Prakash Raj: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಅಧಿಕೃತ ಭೇಟಿ ನೀಡುವ ಸಂದರ್ಭದಲ್ಲಿ ಅಥವಾ ವಿದೇಶಿ ರಾಷ್ಟ್ರದ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಹಿ ಹಾಕುವ ಕೆಲವು ನಿರ್ದಿಷ್ಟ ಅಂತರರಾಷ್ಟ್ರೀಯ ದಾಖಲೆಗಳಿಗೆ ಇನ್ನು ಮುಂದೆ ಸಚಿವ ಸಂಪುಟದ ಪೂರ್ವ ಅನುಮೋದನೆ ಅಗತ್ಯವಿಲ್ಲ ಎಂದು ಟ್ರಿಬ್ಯೂನ್ ವರದಿ ಮಾಡಿದೆ. ಈ ವಿಚಾರವು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದ್ದು. ಇದನ್ನು ನಟ ಪ್ರಕಾಶ್ ರಾಜ್ ಅವರು ಸಹ ಪ್ರಶ್ನೆ ಮಾಡಿದ್ದಾರೆ. ಈ ಸುದ್ದಿಯನ್ನು ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್ ಅವರು, Baap Ka Maal Bhej raha hai kya ?? What Nonsense is this ಎಂದು ಪ್ರಶ್ನೆ ಮಾಡಿದ್ದಾರೆ.
ಮಹತ್ವದ ಒಪ್ಪಂದಗಳನ್ನು ಬಹಿರಂಗಪಡಿಸುವ ಅವಶ್ಯಕತೆ ಇಲ್ಲ ಎನ್ನುವ ಸುದ್ದಿಯನ್ನು ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್ ಅವರು, ಅಪ್ಪನ ಮನೆ ಆಸ್ತಿ ಮಾರಾಟ ಮಾಡುತ್ತಿದ್ದಾರೆಯೇ ಏನಿದು ಮೂರ್ಖತನ ಎಂದು ಕೇಳಿದ್ದಾರೆ. ಇನ್ನು ಸಂಪುಟ ಸಚಿವಾಲಯವು ಭಾರತ ಸರ್ಕಾರ (ವ್ಯವಹಾರ ವಹಿವಾಟು) ನಿಯಮಗಳು, 1961 ರ ಅಡಿಯಲ್ಲಿ ಎಲ್ಲಾ ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ನೀಡಲಾಗುತ್ತದೆ. ಇದು ಪೂರ್ವ ಅನುಮೋದನೆ, ವಾಸ್ತವಿಕ ಅನುಮೋದನೆ ಅಥವಾ ಮಾಹಿತಿಗಾಗಿ ಯಾವ ವಿಷಯಗಳನ್ನು ಸಂಪುಟದ ಮುಂದೆ ತರಬೇಕು ಎಂಬುದನ್ನು ನಿರ್ದಿಷ್ಟವಾಗಿ ಮೊದಲೇ ನಿರ್ಧರಿಸಲಾಗಿರುತ್ತದೆ. ಇದೀಗ ಈ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಅಂತರರಾಷ್ಟ್ರೀಯ ದಾಖಲೆಗಳಲ್ಲಿ ಒಪ್ಪಂದಗಳು, ಸಮಾವೇಶಗಳು, ಪ್ರೋಟೋಕಾಲ್ಗಳು, ತಿಳವಳಿಕೆಯ ಜ್ಞಾಪಕ ಪತ್ರಗಳು (MoUಗಳು), ಜಂಟಿ ಉದ್ದೇಶದ ಘೋಷಣೆಗಳು, ಉದ್ದೇಶದ ಹೇಳಿಕೆಗಳು, ಸಹಕಾರದ ಜ್ಞಾಪಕ ಪತ್ರಗಳು ಮತ್ತು ವಿದೇಶಗಳೊಂದಿಗೆ ಮಾಡಿಕೊಂಡ ಪತ್ರಗಳು ಸೇರಿವೆ ಎಂದು ಹೇಳಲಾಗಿದೆ.
ನಟ ಪ್ರಕಾಶ್ರಾಜ್ ಸರಣಿ ಟ್ವೀಟ್
ಇನ್ನು ನಟ ಪ್ರಕಾಶ್ ರಾಜ್ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದಾರೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ಭಾರೀ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಿಯ ನಾಗರಿಕರೇ, ನಾವು ನೋಡುವಂತೆ ಮನೆಗಳು.. ಹೋಟೆಲ್ಗಳು ಮತ್ತು ಸ್ಮಶಾನಗಳು ಮೇಲೂ ಸಹ ಪರಿಣಾಮ ಬೀರಿವೆ. ಗೋಭಿ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡೋಣ #justasking ಎಂದು ಹೇಳಿದ್ದಾರೆ.
ಈಗಿನ ರಾಜಿ ಸನ್ನಿವೇಶದಲ್ಲಿ.. ಯಾವುದು ಚೆನ್ನಾಗಿ ಕೇಳಿಸುತ್ತದೆ. ವಿಶ್ವಗುರು ಅಥವಾ ವಿಶ್ವಗುಲಮಾ ದಯವಿಟ್ಟು ಹೇಳಿ. #justasking ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು ?
ಇನ್ನು ಈ ಬೆಳವಣಿಗೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ . ನಮ್ಮ ರಫ್ತುದಾರರೊಂದಿಗೆ ನಿರಂತರ ಯುದ್ಧ ನಡೆಯುತ್ತಿರುವಾಗ ಬೆಲೆಗಳು ಹೇಗೆ ಕಡಿಮೆಯಾಗುತ್ತವೆ ಎಂದು ನೀವು ನಿರೀಕ್ಷಿಸುತ್ತೀರಿ ಎಂದು ನೆಟ್ಟಿಗರೊಬ್ಬರು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇರಾನ್ - ಇಸ್ರೇಲ್ ಯುದ್ಧದಿಂದಾಗಿ ಜಗತ್ತಿನಲ್ಲಿ (ಯುರೋಪ್, ರಷ್ಯಾ, ಚೀನಾ ಇತ್ಯಾದಿ) ಎಲ್ಪಿಜಿ ಮತ್ತು ತೈಲದ ಕೊರತೆಯಿದೆ. ಭಾರತ ಚಂದ್ರನ ಮೇಲೆ ಇಲ್ಲ, ಆದ್ದರಿಂದ ಅದು ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ಕಾಮೆಂಟ್ಗಳು ಬಂದಿವೆ.
Dear Citizens as we see. Homes.. hotels.. and even crematoriums affected.. lets see how Gobhi bhakts react #justasking pic.twitter.com/4O577LJoJT
— Prakash Raj (@prakashraaj) March 9, 2026
ಕುರುಡು ನಂಬಿಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡೋಣವೇ, ಅವರಿಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಈ ರೀತಿಯ ಕಾಮೆಂಟ್ ಮಾಡುತ್ತಿರುವವರಿಗೆ ನೆಟ್ಟಿಗರೊಬ್ಬರು ಹೇಳಿದ್ದಾರೆ.
-
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
Bengaluru: 1 ಲೀಟರ್ಗೆ 180 ರೂ.! ಸಿಲಿಕಾನ್ ಸಿಟಿಯಲ್ಲಿ ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ, ಫೋಟೋ Viral -
Vaibhav Suryavanshi: ವೈಭವ್ ಸೂರ್ಯವಂಶಿಗೆ ಯುವರಾಜ್ ಸಿಂಗ್ ಮಹತ್ವದ ಸಲಹೆ: ಟೀಮ್ ಇಂಡಿಯಾ ಪ್ರವೇಶದ ಬಗ್ಗೆ ಭವಿಷ್ಯವಾಣಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ












Click it and Unblock the Notifications