Get Updates
Get notified of breaking news, exclusive insights, and must-see stories!

ಪಂಚರಾಜ್ಯ ಚುನಾವಣೆಗಳಲ್ಲಿ ಅಕ್ರಮ: ಚುನಾವಣಾ ಆಯೋಗದಿಂದ ₹650 ಕೋಟಿಗೂ ಅಧಿಕ ಮೌಲ್ಯದ ವಸ್ತು ಜಪ್ತಿ

ಭಾರತೀಯ ಚುನಾವಣಾ ಆಯೋಗವು (ECI) ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ದೇಶಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ಸೇರಿ ಪಂಚರಾಜ್ಯ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಬರೋಬ್ಬರಿ ₹650 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಗದು ಹಾಗೂ ವಿವಿಧ ವಸ್ತುಗಳನ್ನು ಅಧಿಕಾರಿಗಳು ಇದುವರೆಗೆ ವಶಪಡಿಸಿಕೊಂಡಿದ್ದಾರೆ.

2026ರ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಫೆಬ್ರವರಿ 26ರಿಂದ ಏಪ್ರಿಲ್ 5ರವರೆಗಿನ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಬರೊಬ್ಬರಿ ₹651.51 ಕೋಟಿ ಮೌಲ್ಯದ ಅಕ್ರಮ ನಗದು, ಮದ್ಯ, ಮಾದಕ ದ್ರವ್ಯ ಹಾಗೂ ಉಚಿತ ಉಡುಗೊರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Election Commission of India

ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳ

ಈ ಬೃಹತ್ ಕಾರ್ಯಾಚರಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಅಲ್ಲಿ ಅತಿ ಹೆಚ್ಚು ಅಂದರೆ ₹319 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ₹170 ಕೋಟಿ, ಅಸ್ಸಾಂನಲ್ಲಿ ₹97 ಕೋಟಿ, ಕೇರಳದಲ್ಲಿ ₹58 ಕೋಟಿ ಹಾಗೂ ಪುದುಚೇರಿಯಲ್ಲಿ ₹7 ಕೋಟಿ ಮೌಲ್ಯದ ಅಕ್ರಮಗಳನ್ನು ಪತ್ತೆಹಚ್ಚಲಾಗಿದೆ. ಜಪ್ತಿಯಾದ ಒಟ್ಟು ಮೊತ್ತದಲ್ಲಿ ₹230 ಕೋಟಿ ಮೌಲ್ಯದ ಮಾದಕ ದ್ರವ್ಯಗಳು ಹಾಗೂ ₹231 ಕೋಟಿ ಮೌಲ್ಯದ ಉಚಿತ ಉಡುಗೊರೆಗಳು (Freebies) ಸೇರಿರುವುದು ಆತಂಕಕಾರಿ ವಿಷಯವಾಗಿದೆ. ಇದರೊಂದಿಗೆ ₹53.2 ಕೋಟಿ ನಗದು ಮತ್ತು ₹79.3 ಕೋಟಿ ಮೌಲ್ಯದ ಸುಮಾರು 29 ಲಕ್ಷ ಲೀಟರ್ ಮದ್ಯವನ್ನು ಸಹ ವಶಕ್ಕೆ ಪಡೆಯಲಾಗಿದೆ.

ಅಕ್ರಮ ತಡೆಗೆ ಮಾಸ್ಟರ್‌ಪ್ಲ್ಯಾನ್‌

ಚುನಾವಣಾ ಅಕ್ರಮಗಳನ್ನು ತಡೆಯಲು ಆಯೋಗವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬೃಹತ್ ಪಡೆಯನ್ನೇ ಅಖಾಡಕ್ಕಿಳಿಸಿದೆ. ದೇಶಾದ್ಯಂತ 5,173 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದ್ದು, ಇವು ಯಾವುದೇ ದೂರು ಬಂದ ಕೇವಲ 100 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುತ್ತಿವೆ. ಇದರ ಜೊತೆಗೆ 5,200ಕ್ಕೂ ಹೆಚ್ಚು ಸ್ಥಿರ ಕಣ್ಗಾವಲು ತಂಡಗಳು (SST) ವಿವಿಧೆಡೆ ನಾಕಾಬಂಧಿ ಹಾಕಿ ತಪಾಸಣೆ ನಡೆಸುತ್ತಿವೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಸಾರ್ವಜನಿಕರು ಆಯೋಗದ 'ಸಿ-ವಿಜಿಲ್' (C-Vigil) ಆಪ್ ಮೂಲಕ ನೇರವಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇಷ್ಟೆಲ್ಲ ಕಟ್ಟುನಿಟ್ಟಿನ ತಪಾಸಣೆಗಳ ನಡುವೆಯೂ, ಸಾಮಾನ್ಯ ನಾಗರಿಕರಿಗೆ ಅಥವಾ ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಆಯೋಗವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಪಾಸಣೆಯ ಸಮಯದಲ್ಲಿ ಉಂಟಾಗುವ ಕುಂದುಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ಸಹ ರಚಿಸಲಾಗಿದೆ. ಮತದಾರರಿಗೆ ಆಮಿಷ ಒಡ್ಡುವ ಯಾವುದೇ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಆಯೋಗವು ಈ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+