Bengaluru: 1 ಲೀಟರ್‌ಗೆ 180 ರೂ.! ಸಿಲಿಕಾನ್ ಸಿಟಿಯಲ್ಲಿ ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ, ಫೋಟೋ Viral

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತನ್ನ ವಿಶಿಷ್ಟ ಜೀವನಶೈಲಿ ಮತ್ತು ದಿನನಿತ್ಯದ ಅಚ್ಚರಿಯ ಘಟನೆಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಬೆಂಗಳೂರಿನ ರಸ್ತೆಬದಿಯ ಎಳನೀರು (Coconut water) ಅಂಗಡಿಯೊಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸಾಮಾನ್ಯವಾಗಿ ಎಳನೀರನ್ನು ಕಾಯಿಗಳ ಲೆಕ್ಕದಲ್ಲಿ, ಅಂದರೆ ಒಂದಕ್ಕೆ ಇಷ್ಟು ಹಣ ಎಂದು ನಿಗದಿಪಡಿಸಿ ಮಾರಾಟ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಇಲ್ಲೊಂದು ಅಂಗಡಿಯಲ್ಲಿ ಎಳನೀರನ್ನು 'ಲೀಟರ್' ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಈ ಕುತೂಹಲಕಾರಿ ಫೋಟೋ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ರಿತು ಜೂನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಸ್ತೆಬದಿಯ ಎಳನೀರು ಅಂಗಡಿಯ ಮುಂದೆ ಬೋರ್ಡ್ ಅಳವಡಿಸಲಾಗಿದ್ದು, ಅದರಲ್ಲಿ "1 ಲೀಟರ್ ಎಳನೀರಿಗೆ 180 ರೂ." ಎಂದು ಬರೆಯಲಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ರಿತು, "ನಾನು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡುವುದನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರ ನೋಡಿದ್ದೇನೆ. ಇದು ಪೀಕ್ ಬೆಂಗಳೂರು (Peak Bengaluru) ಮೊಮೆಂಟ್" ಎಂದು ಬರೆದುಕೊಂಡಿದ್ದಾರೆ. ಭಾರತದಾದ್ಯಂತ ಬಹುತೇಕ ಕಡೆಗಳಲ್ಲಿ ಎಳನೀರನ್ನು ಕಾಯಿಗಳ ಲೆಕ್ಕದಲ್ಲಿ ಮಾರಾಟ ಮಾಡುವುದೇ ವಾಡಿಕೆ. ಆದರೆ, ಈ ವಿಭಿನ್ನ ಬೆಲೆ ನಿಗದಿ ಮತ್ತು ಮಾರಾಟದ ಶೈಲಿ ನೆಟ್ಟಿಗರ ಗಮನ ಸೆಳೆದಿದೆ.

Bengaluru

ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ

ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ತಮ್ಮ ನಗರಗಳ ಎಳನೀರು ಬೆಲೆ ಮತ್ತು ಮಾರಾಟದ ವಿಧಾನವನ್ನು ಬೆಂಗಳೂರಿನೊಂದಿಗೆ ಹೋಲಿಸಿ ಕಮೆಂಟ್ ಮಾಡಲು ಶುರುಮಾಡಿದ್ದಾರೆ. ಕೆಲವರು ಈ ಬೆಲೆ ಅತಿಯಾಯಿತು ಎಂದರೆ, ಮತ್ತೆ ಕೆಲವರು ಇದು ಇತರ ನಗರಗಳಲ್ಲೂ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಬಳಕೆದಾರರೊಬ್ಬರು, "180 ರೂಪಾಯಿ ಎಂಬುದು ತೀರಾ ದುಬಾರಿ. ನನ್ನ ಊರಿನಲ್ಲಿ ಕೇವಲ 50 ರೂಪಾಯಿಗೆ ಎಳನೀರು ಸಿಗುತ್ತದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಇಂತಹ ವಿಭಿನ್ನ ಪ್ರಯೋಗಗಳು ಕೇವಲ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ" ಎಂದಿದ್ದಾರೆ.

ಹೈದರಾಬಾದ್‌ನಂತಹ ನಗರಗಳಲ್ಲೂ ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ ಮಾಡುವ ಪದ್ಧತಿ ಇದೆ, ಹಾಗಾಗಿ ಇದು ಸಂಪೂರ್ಣ ಹೊಸದೇನಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲದರ ನಡುವೆ, "ತೆಂಗಿನಕಾಯಿಯೊಳಗಿನ ನೀರಿನ ಪ್ರಮಾಣವನ್ನು ಲೀಟರ್ ಲೆಕ್ಕದಲ್ಲಿ ಅವರು ಹೇಗೆ ಅಳೆಯುತ್ತಾರೆ?" ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈ ಕುತೂಹಲಕ್ಕೆ ಪ್ರತಿಕ್ರಿಯಿಸಿದ ರಿತು ಜೂನ್, "ಗ್ರಾಹಕರು ತಮ್ಮದೇ ಆದ 1 ಲೀಟರ್ ಸಾಮರ್ಥ್ಯದ ಖಾಲಿ ಬಾಟಲಿಯನ್ನು ತಂದರೆ, ಅಂಗಡಿಯವರು ಕಾಯಿಗಳನ್ನು ಒಡೆದು ಅದಕ್ಕೆ ಎಳನೀರನ್ನು ಅಳೆದು ತುಂಬಿಕೊಡುತ್ತಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ಹೊಸ ಬಗೆಯ ವ್ಯಾಪಾರ ತಂತ್ರಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುವುದು, ಆಟೋಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು, ಇದೀಗ ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ- ಇವೆಲ್ಲವೂ 'ಪೀಕ್ ಬೆಂಗಳೂರು' ಟ್ರೆಂಡ್‌ಗೆ ಸಾಕ್ಷಿಯಾಗಿವೆ. ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+