NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ
NR Narayana Murthy: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹಾಗೂ ಸಂಸದೆ ಸುಧಾ ಮೂರ್ತಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೊತ್ತದ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದು, ದಂಪತಿ ಸುದ್ದಿಯಲ್ಲಿದ್ದಾರೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮನೆಯು ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಈಗ ಖರೀದಿ ಮಾಡಿರುವ ಮನೆಯು ಬೆಂಗಳೂರಿನ ಪ್ರೀಮಿಯಂ ಸ್ಥಳಗಳಲ್ಲಿ ಒಂದಾಗಿದ್ದು ಐಷಾರಾಮಿಗಳ ಪ್ರತಿಬಿಂಬವಾಗಿದೆ ಎಂದೇ ವ್ಯಾಖ್ಯಾಸಿಲಾಗಿದೆ.
ಯುಬಿ ಸಿಟಿ: ಬೆಂಗಳೂರಿನ ಪ್ರೀಮಿಯಂ ಸ್ಥಳ
ಬೆಂಗಳೂರಿನ ಹೃದಯಭಾಗ ಹಾಗೂ ಐಷಾರಾಮಿ ಸ್ಥಳಗಳಲ್ಲಿ ಒಂದು ಎಂದೇ ಖ್ಯಾತಿ ಗಳಿಸಿರುವ ಯುಬಿ ಸಿಟಿ: ಬೆಂಗಳೂರಿನ ಪ್ರೀಮಿಯಂ ಸ್ಥಳದಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಹೊಸ ಮನೆ ಇದೆ. ಬೆಂಗಳೂರಿನ ಕೇಂದ್ರ ವ್ಯಾಪಾರ ಪ್ರದೇಶವಾದ ಯುಬಿ ಸಿಟಿಯ ಕಿಂಗ್‌ಫಿಷರ್ ಟವರ್ಸ್‌ನಲ್ಲಿದೆ. ಇದು ನಗರದ ಅತ್ಯಂತ ಪ್ರಸಿದ್ಧ ಪ್ರದೇಶಗಳಲ್ಲಿ ಒಂದಾಗಿದೆ. ಅಲ್ಲದೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಬ್ಬನ್ ರಸ್ತೆಯಂತಹ ಅನೇಕ ಪ್ರಸಿದ್ಧ ಪ್ರದೇಶಗಳಿಗೆ ಕೂಗಳತೆಯ ದೂರದಲ್ಲಿದೆ.

ಹೇಗಿದೆ ಇನ್ಫೋ ದಂಪತಿಯ ಐಷಾರಾಮಿ ಮನೆ
ಇನ್ನು ಬೆಂಗಳೂರಿನಲ್ಲಿರುವ ದಂಪತಿಯ ಹೊಸ ಮನೆಯ / ಅಪಾರ್ಟ್‌ಮೆಂಟ್ ಸುಮಾರು 8,400 ಚದರ ಅಡಿ ವಿಸ್ತೀರ್ಣವನ್ನು ಒಳಗೊಂಡಿದ್ದು, ವಿಶಾಲವಾದ ನಾಲ್ಕು ಮಲಗುವ ಕೋಣೆಗಳನ್ನು ವಿನ್ಯಾಸ ಮಾಡಲಾಗಿದೆ. ಅಪಾರ್ಟ್‌ಮೆಂಟ್ ಸೌಕರ್ಯ ಮತ್ತು ಐಷಾರಾಮಿ ಸೇವೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಐದು ಪಾರ್ಕಿಂಗ್ ಸ್ಲಾಟ್‌ಗಳ ಹೆಚ್ಚುವರಿ ಪ್ರಯೋಜನವನ್ನೂ ಒಳಗೊಂಡಿದೆ. ದೊಡ್ಡ ಒಳಾಂಗಣ ಸ್ಥಳವು ಐಷಾರಾಮಿ ವ್ಯವಸ್ಥೆ ಸೇರಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಈ ಹೊಸ ಅಪಾರ್ಟ್‌ಮೆಂಟ್ ಮೌಲ್ಯವು ಅಂದಾಜು ಸುಮಾರು 50 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ದಂಪತಿ ಇದೇ ಕಟ್ಟಡದಲ್ಲಿ ಮತ್ತೊಂದು ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ, ಅದನ್ನು ಅವರು ಮೊದಲು 29 ಕೋಟಿ ರೂ. ಖರೀದಿ ಮಾಡಿದ್ದರು.
ವಿಶೇಷ ಸೌಲಭ್ಯಗಳು
ಇನ್ನು ಈ ಅಪಾರ್ಟ್‌ಮೆಂಟ್‌ನಲ್ಲಿ ಕಿಂಗ್‌ಫಿಷರ್ ಟವರ್ಸ್ ತನ್ನ ನಿವಾಸಿಗಳಿಗೆ ಈಜುಕೊಳ, ಕ್ಲಬ್‌ಹೌಸ್, ಟೆನಿಸ್ ಕೋರ್ಟ್ ಮತ್ತು ಹೆಲಿಪ್ಯಾಡ್‌ನಂತಹ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ. ಸುಂದರವಾಗಿ ನಿರ್ವಹಿಸಲ್ಪಟ್ಟ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಐಷಾರಾಮಿ ಸೌಲಭ್ಯಗಳು ನಿವಾಸಿಗಳು ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ಖಚಿತಪಡಿಸುತ್ತದೆ. ಕಿಂಗ್‌ಫಿಷರ್ ಟವರ್ಸ್ ಅನ್ನು 4.5 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಈ ರೀತಿ ಕೇವಲ 81 ವಿಶೇಷ ಅಪಾರ್ಟ್‌ಮೆಂಟ್‌ಗಳು ಇವೆ. ವಸತಿ ಸಂಕೀರ್ಣವನ್ನು ಸಾಮಾನ್ಯವಾಗಿ ಬಿಲಿಯನೇರ್ಸ್ ಟವರ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಬೆಂಗಳೂರಿನ ಕೆಲವು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ನೆಲೆಸಿದ್ದಾರೆ.












Click it and Unblock the Notifications