ಪತಿಯ ಅಗಲಿಕೆಯ ನಂತರ ಒಂಟಿತನ ಗೆದ್ದು ಉದ್ಯಮಿಯಾದ ಅಜ್ಜಿ: 70ರಲ್ಲಿ ಸ್ವಂತ ಉದ್ಯಮ ಶುರು ಮಾಡಿ ಸೈ ಎನಿಸಿಕೊಂಡ ನಯನಾ ಮೆಹ್ತಾ
"ನನ್ನ ಮೊದಲ ಆರ್ಡರ್ ಸಿಕ್ಕಾಗ ಮತ್ತು ಅದರಿಂದ ಹಣ ಸಂಪಾದಿಸಿದಾಗ, ನನಗೆ ನನ್ನ ಬಗ್ಗೆಯೇ ಅತೀವ ಹೆಮ್ಮೆ ಎನಿಸಿತು." ಇದು 70ರ ಹರೆಯದ ನಯನಾ ಮೆಹ್ತಾ ಅವರ ಮಾತು. ಸಾಧನೆ ಮಾಡಲು ವಯಸ್ಸು ಕೇವಲ ಒಂದು ನಂಬರ್ ಎಂಬುದನ್ನ ಸಾಬೀತುಪಡಿಸಿರುವ ಇವರು, ತಮ್ಮ 70ನೇ ವಯಸ್ಸಿನಲ್ಲಿ 'ಮಾಮೀಸ್ ಮಂಚೀಸ್' ಎಂಬ ಸ್ವಂತ ಉದ್ಯಮವನ್ನ ಹುಟ್ಟುಹಾಕಿದ್ದಾರೆ.
ಹೌದು, ಅಡುಗೆ ಮಾಡುವ ತಮ್ಮ ಹಳೆಯ ಹವ್ಯಾಸವನ್ನೇ ಇಂದು ದೊಡ್ಡ ವ್ಯವಹಾರವಾಗಿ ಬೆಳೆಸಿರುವ ಇವರು, ಇಂದು ನಯನಾ ಅವರ ಕೈಯಾರೆ ತಯಾರಾದ ತಿಂಡಿಗಳು ಇಂದು ಕೇವಲ ಭಾರತ ಮಾತ್ರವಲ್ಲದೆ, ಯುರೋಪ್, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದಾದ್ಯಂತ 2,000ಕ್ಕೂ ಹೆಚ್ಚು ಗ್ರಾಹಕರನ್ನ ತಲುಪಿವೆ. ಈ 70ರ ಹರೆಯದ ಮಹಿಳಾ ಉದ್ಯಮಿಯ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗುತ್ತದೆ.

ಪತಿಯ ಅಗಲಿಕೆ ನಂತರ ಒಂಟಿತನ ದೂರ ಮಾಡಲು ಇಟ್ಟ ಹೊಸ ಹೆಜ್ಜೆ
ನಯನಾ ಅವರ ಈ ಉದ್ಯಮದ ಪ್ರಯಾಣ ಶುರುವಾಗಿದ್ದು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ. ತಾವು ತುಂಬ ಪ್ರೀತಿಸುತ್ತಿದ್ದ ತಮ್ಮ ಪತಿಯನ್ನ ಕಳೆದುಕೊಂಡ ನಂತರ ನಯನಾ ಅವರ ಬದುಕಿನಲ್ಲಿ ಒಂದು ರೀತಿಯ ಶೂನ್ಯತೆ ಆವರಿಸಿತ್ತು. ಆ ಒಂಟಿತನವನ್ನ ದೂರ ಮಾಡಲು ಮತ್ತು ತಮ್ಮನ್ನ ತಾವು ಯಾವುದಾದರೂ ಅರ್ಥಪೂರ್ಣ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದರು.
ಆಗ ಅವರ ಕೈಹಿಡಿದದ್ದು ತಾವು 13ನೇ ವಯಸ್ಸಿನಲ್ಲೇ ಕಲಿತ ಅಡುಗೆ ಮಾಡುವ ಕಲೆ. ನಯನರವರಿಗೆ, ರುಚಿಕರವಾದ ತಿಂಡಿ ತಿನಿಸುಗಳನ್ನ ಮಾಡುವುದೆಂದರೆ ಪಂಚಪ್ರಾಣ. ಹಾಗಾಗಿ ಬೇರೆಯವರಿಗಾಗಿ ಅಡುಗೆ ಮಾಡಲು ಮುಂದಾದರು. ಕೇವಲ ಸಮಯ ಕಳೆಯಲು ಮತ್ತು ಮನಸ್ಸಿನ ಶಾಂತಿಗಾಗಿ ಶುರುವಾದ ಈ ಪ್ರಯತ್ನ, ನಿಧಾನವಾಗಿ ಒಂದು ಯಶಸ್ವಿ ಮನೆಯಲ್ಲೇ ತಯಾರಿಸಿದ ತಿಂಡಿಗಳು ಮಾರಾಟ ಮಾಡುವ ವ್ಯವಹಾರವಾಗಿ ಬದಲಾಯಿತು.
ಮಾಮೀಸ್ ಮಂಚೀಸ್ ಬ್ರ್ಯಾಂಡ್‌ನ ಯಶಸ್ಸು
ನಯನಾ ಅವರು ಅತ್ಯಂತ ಪ್ರೀತಿಯಿಂದ ತಯಾರಿಸುವ ಗರಿಗರಿಯಾದ ಖಾರದ ತಿಂಡಿಗಳು ಮತ್ತು ಸಾಂಪ್ರದಾಯಿಕ ಸಿಹಿ ತಿನಿಸುಗಳು ಬಹುಬೇಗನೆ ಜನರ ಮನಸ್ಸು ಗೆಲ್ಲಲು ಆರಂಭಿಸಿದವು. ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.
ಯಾವುದೇ ದೊಡ್ಡ ಜಾಹೀರಾತುಗಳಿಲ್ಲದೆ, ಕೇವಲ ಗ್ರಾಹಕರ ಬಾಯಿಂದ ಬಾಯಿಗೆ ಹರಡಿದ ಮೆಚ್ಚುಗೆಯ ಮಾತುಗಳೇ ಇಂದು ಮಾಮೀಸ್ ಮಂಚೀಸ್ ಬ್ರ್ಯಾಂಡ್ ಅನ್ನಾ ಬೆಳೆಸಿದವು.
At 70, Nayana Mehta has turned her love for cooking into a business of her own, Maami’s Munchies, which has now reached over 2,000 customers across India, Europe, Dubai, Australia and several other parts of the world.It all began during the COVID-19 lockdown. After her husband passed away, Nayana found herself dealing with an emptiness in life. Looking for a way to keep herself occupied and find a new purpose, she began cooking for others. What started as a way to fill her days slowly blossomed into a successful business.From crunchy savouries to traditional sweets, her homemade creations soon began winning hearts. Today, her son manages the business logistics, while her daughters look after social media. Without relying on big advertising campaigns, Maami’s Munchies has grown through happy customers and word-of-mouth recommendations.With Diwali around the corner, Nayana is busier than ever, preparing orders with the same enthusiasm she had when she first began cooking at just 13.“Keeping yourself happy is very important. Age doesn't matter. What matters is the passion within you to do something,” she says.At 70, Nayana has found a new purpose in an old passion. And as she prepares to make this Diwali sweeter for her customers, she reminds us that it's never too late to start something of your own.#WomenEntrepreneurs #SecondInnings #DiwaliSpecial #WomenInBusiness #AgeIsJustANumber[70 year old woman entrepreneur, Nayana Mehta Maamis Munchies, Indian homemade snacks business, women entrepreneurs starting late in life, traditional Indian sweets and savouries]
— The Better India (@thebetterindia) November 3, 2026
ಕುಟುಂಬದ ಬೆಂಬಲ
ಈ ಯಶಸ್ವಿ ಉದ್ಯಮದ ಹಿಂದೆ ನಯನಾ ಅವರ ಮಕ್ಕಳ ಶ್ರಮವೂ ಅಡಗಿದೆ. ಪ್ರಸ್ತುತ, ನಯನಾ ಅವರ ಮಗ ವ್ಯವಹಾರದ ಲಾಜಿಸ್ಟಿಕ್ಸ್ ಮತ್ತು ಡೆಲಿವರಿ ಜವಾಬ್ದಾರಿಯನ್ನ ನೋಡಿಕೊಳ್ಳುತ್ತಿದ್ದರೆ, ಅವರ ಹೆಣ್ಣುಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್‌ನ ಕೆಲಸವನ್ನಾ ನೋಡಿಕೊಳ್ಳುತ್ತಿದ್ದಾರೆ.
ಇದೀಗ ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ, ನಯನಾ ಅವರು ಎಂದಿಗಿಂತಲೂ ಹೆಚ್ಚು ಕಾರ್ಯನಿರತರಾಗಿದ್ದಾರೆ. ತಮ್ಮ 13ನೇ ವಯಸ್ಸಿನಲ್ಲಿ ಅಡುಗೆ ಮನೆಗೆ ಕಾಲಿಟ್ಟಾಗ ಅವರಲ್ಲಿದ್ದ ಅದೇ ಉತ್ಸಾಹ, ಇಂದಿಗೂ ಅವರಲ್ಲಿದೆ.
ವಯಸ್ಸು ಕೇವಲ ಸಂಖ್ಯೆ ಮಾತ್ರ
"ನಮ್ಮನ್ನು ನಾವು ಸದಾ ಸಂತೋಷವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಏನನ್ನಾದರೂ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ, ನಮ್ಮೊಳಗಿರುವ ಉತ್ಸಾಹ ಮತ್ತು ಆಸಕ್ತಿ ಮುಖ್ಯ," ಎಂದು ನಯನಾ ಮೆಹ್ತಾ ಹೇಳುತ್ತಾರೆ. 70ನೇ ವಯಸ್ಸಿನಲ್ಲಿ ಹೊಸ ಬದುಕನ್ನು ಕಟ್ಟಿಕೊಂಡಿರುವ ಇವರು, ಸ್ವಂತವಾಗಿ ಏನನ್ನಾದರೂ ಸಾಧಿಸಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಇಡೀ ಜಗತ್ತಿಗೆ ಸಾರಿದ್ದಾರೆ


Click it and Unblock the Notifications
