ಬಿಪಿಎಲ್‌ ಕುಟುಂಬಗಳಿಗೆ ಇಲ್ಲಿ 500 ರೂಪಾಯಿಗೆ LPG ಗ್ಯಾಸ್ ಸಿಲಿಂಡರ್ ಲಭ್ಯ

ಜೈಪುರ, ಡಿಸೆಂಬರ್‌ 19: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಥವಾ ಅಡುಗೆ ಅನಿಲ ಸಿಲಿಂಡರ್ ಬೆಲೆಗಳ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ.

ಏಪ್ರಿಲ್ 1, 2023 ರಿಂದ ಬಿಪಿಎಲ್ ಮತ್ತು ಉಜ್ವಲ ಯೋಜನೆಯಡಿಯಲ್ಲಿ ಜನರಿಗೆ ತಲಾ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

ಬಿಪಿಎಲ್ ಅಡಿಯಲ್ಲಿ ಬರುವ ಜನರು ಅಥವಾ ಉಜ್ವಲ ಯೋಜನೆಗೆ ಸಂಬಂಧಿಸಿರುವ ಜನರು, ನಾವು ಅವರ ಸಮೀಕ್ಷೆಯನ್ನು ನಾವು ನಡೆಸುತ್ತೇವೆ ಮತ್ತು ಏಪ್ರಿಲ್ 1 ರಿಂದ ಅವರು ಪ್ರತಿ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಪ್ರಸ್ತುತ ಬೆಲೆ ರೂಪಾಯಿ 1040 ರ ಬದಲಿಗೆ ತಲಾ 500 ರೂಪಾಯಿಗೆ ಪಡೆಯುತ್ತಾರೆ ಎಂದು ಗೆಹ್ಲೋಟ್ ಹೇಳಿದರು.

Ashok Gehlot announces one LPG cylinder for Rs 500 in Rajasthan

ಹಿರಿಯ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ ಅವರು, ತಮ್ಮ ಸರ್ಕಾರವು ಈ ಕುಟುಂಬಗಳಿಗೆ ಅರ್ಧಕ್ಕಿಂತ ಕಡಿಮೆ ಬೆಲೆಗೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತದೆ ಎಂದು ಹೇಳಿದರು.

ನಾನು ಮುಂದಿನ ತಿಂಗಳು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ. ಇದೀಗ, ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು. ಆದರೆ ಸಿಲಿಂಡರ್ ಖಾಲಿಯಾಗಿದೆ. ಏಕೆಂದರೆ (ಸಿಲಿಂಡರ್) ದರಗಳು ಈಗ ₹ 400 ಮತ್ತು ₹ 1,040 ರ ನಡುವೆ ಇದೆ. ಬಡವರಿಗೆ ಮತ್ತು ಉಜ್ವಲ ಯೋಜನೆಯಡಿಯಲ್ಲಿ ತಲಾ ₹ 500 ರಂತೆ ನಾವು ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತೇವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಗೆಹ್ಲೋಟ್ ಹೇಳಿದರು.

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ ಆಡಳಿತಕ್ಕಿಂತ ಹೆಚ್ಚಾಗಿ ಪಕ್ಷದ ಒಳಜಗಳವೇ ಕಣ್ಣಿಗೆ ರಾಚಿದೆ. ಈ ತಿಂಗಳ ಆರಂಭದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ರಾಜ್ಯವನ್ನು ತಲುಪುವ ಮೊದಲು ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಹೊಸ ಘರ್ಷಣೆ ಉಂಟಾಗಿತ್ತು.

Ashok Gehlot announces one LPG cylinder for Rs 500 in Rajasthan

ಗೆಹ್ಲೋಟ್ ಅವರ ಸರ್ಕಾರ ತೆರೆದಿರುವ 1,700 ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿಶೇಷ ಉಲ್ಲೇಖದೊಂದಿಗೆ ಸೋಮವಾರ ಭಾರತ್‌ ಜೋಡೋ ಯಾತ್ರೆ ಅಂಗವಾಗಿ ಅಲ್ವಾರ್‌ನಲ್ಲಿ ರಾಹುಲ್‌ ಗಾಂಧಿ, ಗೆಹ್ಲೋಟ್ ಅವರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+