ಎಬಿವಿಪಿ ತೊರೆದವರು ದೆಹಲಿಯಲ್ಲಿ ಮನುಸ್ಮೃತಿ ಸುಟ್ಟರು

ನವದೆಹಲಿ, ಮಾರ್ಚ್.09: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಯದ ಗೊಂದಲ, ಗಲಾಟೆ, ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದೀಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯನ್ನು ತೊರೆದ ಕೆಲ ವಿದ್ಯಾರ್ಥಿಗಳು ವಿವಿ ಆವರಣದಲ್ಲಿಯೇ ಮನುಸ್ಮೃತಿ ಸುಟ್ಟು ಹಾಕಿದ್ದಾರೆ.

ಮನುಸ್ಮೃತಿ ಸುಟ್ಟಿದ್ದಕ್ಕೆ ಅವರು ನೀಡಿರುವ ಕಾರಣ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳೆಯರನ್ನು ಅವಹೇಳನ ಮಾಡುವಂಥ ವಿಷಯಗಳಿರುವ ಮನುಸ್ಮೃತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಣೆಯನ್ನು ಕೂಗಿದ್ದಾರೆ.[ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ ಝಾನ್ವಿ ]

jnu

ಮನುಸ್ಮೃತಿಯಲ್ಲಿ ಮಹಿಳೆಯರನ್ನು ಅವಹೇಳನ ಮಾಡುವಂಥ 40 ಸಂಗತಿಗಳಿವೆ ಎಂದು ಹೇಳಿದ ಪ್ರತಿಭಟನಾಕಾರರು ಒಂದೊಂದೆ ವಿಷಯಗಳನ್ನು ಓದಿದ ನಂತರ ಆ ಪುಟಗಳ ಪ್ರತಿಯನ್ನು ಸುಟ್ಟರು.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ಮಹಿಳೆ ಮತ್ತು ದಲಿತರನ್ನು ಅವಹೇಳನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದ ಪ್ರತಿಭಟನಾಕಾರರು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಬಂಧನದ ಪ್ರಕರಣವನ್ನು ವಿರೋಧಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+