ಕಸದ ರಾಶಿಯಾಗಿದ್ದ 500 ವರ್ಷಗಳ ಹಳೆಯ ಕಲ್ಯಾಣಿ.. ಯುವಕನ ಒಂದೇ ಒಂದು ವೀಡಿಯೊದಿಂದ ಬದಲಾಯ್ತು ಚಿತ್ರಣ, ನಟ ಮಾಧವನ್ ಮೆಚ್ಚುಗೆ

ಮಧ್ಯಪ್ರದೇಶದ ಬ್ಯಾವೋರಾ ಪ್ರದೇಶದಲ್ಲಿ ಬಿಟ್ಟು ತಬಾಹಿ (ಸುರೇಂದ್ರ ಸಿಂಗ್ ಚೌಧರಿ) ಅವರು ಇತ್ತೀಚೆಗಷ್ಟೇ ಆಜ್ಞಾರ್ ನದಿಯನ್ನು ಸ್ವಚ್ಛಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ ಇದಕ್ಕೂ ಮುನ್ನವೇ ಆಂಧ್ರಪ್ರದೇಶದ ಯುವಕ ಅಬ್ಬಾಯಿ ಕಾಂತ್ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಇವರ ಮಹತ್ವದ ಕಾರ್ಯವನ್ನು ಭಾರತದ ಪ್ರಸಿದ್ಧ ನಟ ಆರ್.ಮಾಧವನ್ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿರುವ ಅಬ್ಬಾಯಿ ಕಾಂತ್ ಆಂಧ್ರಪ್ರದೇಶದ ಪೀಪುಲ್ಲಿ ಮಂಡಲದಲ್ಲಿರುವ 500 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ದೇವಸ್ಥಾನದ ಕಲ್ಯಾಣಿಗೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿನ ಸ್ಥಿತಿಯನ್ನು ಕಂಡು ಅವರು ದಿಗ್ಭ್ರಮೆಗೊಂಡರು.

Abbayi Kanth 500-Year-Old Temple well Transformed R Madhavan Praises Effort on Social Media

ಕಸದ ತೊಟ್ಟಿಯಾಗಿದ್ದ 500 ವರ್ಷಗಳ ಹಳೆಯ ಕಲ್ಯಾಣಿ

ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ್ದ ಆ ಕಲ್ಯಾಣಿ ಪ್ಲಾಸ್ಟಿಕ್ ತ್ಯಾಜ್ಯ, ಆಹಾರದ ಕವರ್‌ಗಳು, ತೆಂಗಿನ ಚಿಪ್ಪುಗಳು, ಅರಿಶಿಣದ ಪೊಟ್ಟಣಗಳು, ಎಲೆಗಳು ಮತ್ತು ಪೂಜೆಗೆ ಬಳಸಿದ ಒಣಗಿದ ಹೂಮಾಲೆಗಳಿಂದ ತುಂಬಿ ಸಂಪೂರ್ಣವಾಗಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಈ ದೃಶ್ಯವನ್ನು ಅವರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ಸೋಷಿಯಲ್ ಮೀಡಿಯಾದಿಂದ ಜನಾಂದೋಲನ ಆರಂಭ

ಅಬ್ಬಾಯಿ ಕಾಂತ್ ಅವರು ಹಂಚಿಕೊಂಡ ವೀಡಿಯೊ ಜಾಲತಾಣಗಳಲ್ಲಿ ಶೀಘ್ರವೇ ದೊಡ್ಡ ಮಟ್ಟದಲ್ಲಿ ವೈರಲ್ ಸಹ ಆಯಿತು. ಈ ವೀಡಿಯೊವನ್ನು ನೋಡಿ ನೂರಾರು ಜನರು ಪ್ರೇರೇಪಿತರಾದರು. ಕೇವಲ ಕೆಲವೇ ದಿನಗಳಲ್ಲಿ, ಪುರಾತನ ಪರಂಪರೆಗಳ ರಕ್ಷಣೆಗಾಗಿ ಶ್ರಮಿಸುವ 'ಪೂರ್ವ ಸಂಪದ ರಕ್ಷಕ ಸೇನಾ' ಸಂಘಟನೆಯ ಕಾರ್ಯಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಸ್ವಯಂಸೇವಕರು ಈ ಸ್ಥಳವನ್ನು ಸ್ವಚ್ಛಗೊಳಿಸಲು ಮುಂದೆ ಬಂದರು.

ಹಗಲಿರುಳು ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು

ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಮತ್ತು ಬೇರೆ ಬೇರೆ ಕ್ಷೇತ್ರಗಳ ಜನರು ಕೈಗವಸು, ಚೀಲಗಳು ಮತ್ತು ಸ್ವಚ್ಛತಾ ಉಪಕರಣಗಳನ್ನು ಹಿಡಿದು ಭಾವಿಗಿಳಿದರು. ವರ್ಷಗಳಿಂದ ಶೇಖರಣೆಯಾಗಿದ್ದ ಟನ್‌ಗಟ್ಟಲೆ ತ್ಯಾಜ್ಯವನ್ನು ಹಗಲಿರುಳು ಶ್ರಮಿಸಿ ಹೊರತೆಗೆದು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದರು.

ನಟ ಆರ್. ಮಾಧವನ್‌ರಿಂದ ಮೆಚ್ಚುಗೆ

ಸ್ವಯಂಸೇವಕರ ನಿರಂತರ ಶ್ರಮದ ಫಲವಾಗಿ, ಕಲ್ಯಾಣಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ಕಸದ ರಾಶಿ ಸಂಪೂರ್ಣವಾಗಿ ಖಾಲಿಯಾಯಿಗಿ ಸ್ವಚ್ಛವಾಯಿತು. 500 ವರ್ಷಗಳ ಹಳೆಯ ಈ ಕಲ್ಯಾಣಿಯು ಮತ್ತೆ ಮೊದಲಿನಂತೆ ಸುಂದರವಾಗಿ ಕಂಗೊಳಿಸಿತು. ಈ ದಿಢೀರ್ ಬದಲಾವಣೆ ಮತ್ತು ಯುವಕರ ಶ್ರಮದ ಫೋಟೋವನ್ನು ನಟ ಆರ್. ಮಾಧವನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಬ್ಬಾಯಿ ಕಾಂತ್ ಹಾಗೂ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಜಾಗೃತಿಯ ಸಂದೇಶ

ಭಾವಿಯನ್ನು ಒಮ್ಮೆ ಸ್ವಚ್ಛಗೊಳಿಸುವುದು ಮಾತ್ರವಲ್ಲದೆ, ಅದನ್ನು ಮುಂದೆಯೂ ಹಾಗೆಯೇ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ, ಅಬ್ಬಾಯಿ ಕಾಂತ್ ಮತ್ತು ತಂಡವು ಸ್ಥಳೀಯ ನಿವಾಸಿಗಳು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಐತಿಹಾಸಿಕ ತಾಣಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಪ್ರಾರಂಭಿಸಿತು.

ಕಲ್ಯಾಣಿಯ ಸುತ್ತಮುತ್ತ ಜಾಗೃತಿ ಫಲಕಗಳನ್ನು ಅಳವಡಿಸಲಾಯಿತು. ಪಾರಂಪರಿಕ ತಾಣಗಳನ್ನು ಸುರಕ್ಷಿತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಸೋಷಿಯಲ್ ಮೀಡಿಯಾವನ್ನು ಕೇವಲ ಮನರಂಜನೆಗಷ್ಟೇ ಬಳಸದೆ, ಇಂತಹ ಸಾಂಸ್ಕೃತಿಕ ಮತ್ತು ನೈಸರ್ಗಿಕ ಆಸ್ತಿಗಳ ರಕ್ಷಣೆಗೆ ಹೇಗೆ ಬಳಸಬಹುದು ಎಂಬುದಕ್ಕೆ ಅಬ್ಬಾಯಿ ಕಾಂತ್ ಅವರ ಈ ಯಶೋಗಾಥೆಯೇ ಉತ್ತಮ ಉದಾಹರಣೆಯಾಗಿದೆ ಅಂತಲೇ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+