ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳ ಇಳಿಕೆ
ನವದೆಹಲಿ, ಅಕ್ಟೋಬರ್ 13: ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 55,342 ಪ್ರಕರಣಗಳು ಪತ್ತೆಯಾಗಿವೆ.
ಒಂದೇ ದಿನ 706 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 71,75,881 ಕೊರೊನಾ ಸೋಂಕಿತರಿದ್ದಾರೆ. 8,38,729 ಸಕ್ರಿಯ ಪ್ರಕರಣಗಳಿವೆ. 62,27,296 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,09,856 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಲಯ ಮಾಹಿತಿ ನೀಡಿದೆ.
ಸೋಮವಾರ 10,73,014 ಮಾದರಿಯನ್ನು ಪರೀಕ್ಷಿಸಲಾಗಿದೆ. ಇದುವರೆಗೂ 8,89,45,107 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸೋಮವಾರ ಒಂದೇ ದಿನ 66,732 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಕೊರೊನಾ ಸೋಂಕಿತರು 71 ಲಕ್ಷ ಗಡಿ ದಾಟಿದ್ದಾರೆ. ಒಂದೇ ದಿನ 816 ಮಂದಿ ಸಾವನ್ನಪ್ಪಿದ್ದರು.
ವಿಶ್ವದಲ್ಲಿ 37.7 ಮಿಲಿಯನ್ ಕೊರೊನಾ ಸೋಂಕಿತರಿದ್ದಾರೆ. 26.2 ಮಿಲಿಯನ್ ಮಂದಿ ಗುಣಮುಖರಾಗಿದ್ದಾರೆ. 1.08 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ.
ಸಾಕಷ್ಟು ಲಸಿಕೆಗಳ ಪ್ರಯೋಗ ಪ್ರಗತಿಯಲ್ಲಿದೆ.












Click it and Unblock the Notifications