2026: ಸ್ವಿಗ್ಗಿ ಸೇರಿ ಈ ಪ್ಲಾಟ್ಫಾರ್ಮ್ಗಳಲ್ಲಿ ಬಿರಿಯಾನಿ - ಕಾಂಡೋಮ್ ಸೇರಿ ಈ ವಸ್ತುಗಳಿಗೆ ಡಿಮ್ಯಾಂಡ್
ಹೊಸ ವರ್ಷದ ಹಿಂದಿನ ದಿನ 2025ರ ಡಿಸೆಂಬರ್ 31ರಂದು ಸ್ವಿಗ್ಗಿಯಲ್ಲಿ ಹಲವು ಭರ್ಜರಿ ಆರ್ಡರ್ಗಳನ್ನು ಮಾಡಲಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹಲವರು ಪಾರ್ಟಿಗಳಿಗೆ ಸಂಬಂಧಿಸಿದ ಫೂಡ್ಗಳನ್ನು ಆರ್ಡರ್ ಮಾಡಿದ್ದಾರೆ. ಚಿನ್ನ, ಬಿರಿಯಾನಿ ಹಾಗೂ ಸಿಹಿ ತಿನಿಸುಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಕಾಂಡೋಮ್ ಆರ್ಡರ್ಗಳು ಸಹ ಹೆಚ್ಚು ಸದ್ದು ಮಾಡುತ್ತಿದ್ದವೂ ಆದರೆ ಈ ವರ್ಷ ಇದರ ಟ್ರೆಂಡ್ ತುಸು ಬದಲಾಗಿದೆ.
ಹೊಸ ವರ್ಷದ ಹಿಂದಿನ ದಿನದಂದು ಮನೆಗಳಲ್ಲಿ ಸಂಭ್ರಮಾಚರಣೆ ಟ್ರೆಂಡ್ ಸೃಷ್ಟಿ ಮಾಡಿದೆ. ಇದರೊಂದಿಗೆ ಮನೆಗಳಲ್ಲಿ ಎಲ್ಲರೂ ಸೇರಿ ಊಟ ಮಾಡಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಹೊಸ ವರ್ಷದ ಸಂಭ್ರಮದಲ್ಲಿ ಚಿನ್ನ - ಬೆಳ್ಳಿಯಂತಹ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಫೂಡ್ ಆರ್ಡರ್ಗೆ ಹೆಚ್ಚು ಡಿಮ್ಯಾಂಡ್ ಬಂದಿದೆ. ಸ್ವಿಗ್ಗಿ ಫೂಡ್ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿರುವಂತೆ ಬುಧವಾರ ಸಂಜೆಯಿಂದಲೇ ವಿವಿಧ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಸಂಜೆ 7.30ರಿಂದ ಟ್ರೆಂಡ್ ಪ್ರಾರಂಭವಾಗಿದ್ದು, ಮಧ್ಯರಾತ್ರಿಯ ವರೆಗೂ ಇದು ಮುಂದುವರಿದಿದೆ. ಈ ಬಾರಿಯೂ ಬಿರಿಯಾನಿ ಅಗ್ರಸ್ಥಾನದಲ್ಲಿ ಇದೆ.

ಸ್ವಿಗ್ಗಿಯಲ್ಲಿ ಬುಧವಾರ ಸಂಜೆ 7:30 ರ ಹೊತ್ತಿಗೆ 2,18,993 ಪ್ಲೇಟ್ಗಳ ಬಿರಿಯಾನಿಗಳನ್ನು ಜನ ಆರ್ಡರ್ ಮಾಡಿದ್ದಾರೆ. ಇನ್ನು ರಾತ್ರಿ 9.30 ರ ವೇಳೆಗೆ 90,000 ಕ್ಕೂ ಹೆಚ್ಚು ಬರ್ಗರ್ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ. 4,244 ಜನರು ಉಪ್ಪಿಟ್ಟು ಸಹ ಆರ್ಡರ್ ಮಾಡಿದ್ದರು. ಬೆಂಗಳೂರಿನಲ್ಲಿ 1,927 ಬಳಕೆದಾರರು ಸಲಾಡ್ ಅನ್ನು ಆರ್ಡರ್ ಮಾಡಿದ್ದರೆ, 9,410 ಜನರು ಖಿಚ್ಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಇದು ಹೊಸ ವರ್ಷವನ್ನು ಜನ ಹೇಗೆ ಬರಮಾಡಿಕೊಂಡರು, ಜನರ ಅಭಿರುಚಿಗಳು ಹೇಗೆ ಭಿನ್ನವಾಗಿದ್ದವು ಎನ್ನುವುದನ್ನು ತೋರಿಸಿದೆ.
ಸಿಹಿ ತಿಂಡಿಗಳ ಆರ್ಡರ್ನಲ್ಲೂ ದಾಖಲೆ
ಇನ್ನು ಸಿಹಿ ತಿಂಡಿಗಳ ಆರ್ಡರ್ನಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ. ರಾತ್ರಿ 9.30ರ ವೇಳೆಗೆ 7,573 ಕ್ಯಾರೆಟ್ ಹಲ್ವಾ ಆರ್ಡರ್ ಮಾಡಲಾಗಿದೆ. 2025ರಲ್ಲಿ 6,67,04,007 ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹಂಚಿಕೊಂಡಿದೆ. ಇದು ಗಿಫ್ಟ್ ನೀಡುವ ಮತ್ತು ಊಟವನ್ನು ಹಂಚುವ ಟ್ರೆಂಡ್ ಹೆಚ್ಚಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ.
ಈ ಬಾರಿಯೂ ಕಾಂಡೋಮ್ಗೆ ಡಿಮ್ಯಾಂಡ್
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕಾಂಡೋಮ್ಗೆ ಡಿಮ್ಯಾಂಡ್ ಹೆಚ್ಚಳವಾಗಿದೆ. ಡಿಸೆಂಬರ್ 31, 2025ರ ರಾತ್ರಿ, ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಬ್ಲಿಂಕಿಟ್ ಭಾರತದಾದ್ಯಂತ 122,000 ಕ್ಕೂ ಹೆಚ್ಚು ಕಾಂಡೋಮ್ ಪ್ಯಾಕ್ಗಳನ್ನು ವಿತರಿಸಿದೆ ಎಂದು ವರದಿ ಮಾಡಿದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ ಕೂಡ ಗಮನಾರ್ಹ ಮಾರಾಟವನ್ನು ದಾಖಲಿಸಿದೆ, ಮಧ್ಯಾಹ್ನದ ವೇಳೆಗೆ 4,779 ಪ್ಯಾಕ್ಗಳನ್ನು ಸೇಲ್ ಮಾಡಿರುವುದಾಗಿ ತಿಳಿಸಿದೆ.
ಬ್ಲಿಂಕಿಟ್: ಹೊಸ ವರ್ಷದ ಹಿಂದಿನ ದಿನದಂದು ರಾತ್ರಿ 9,50ರ ಸುಮಾರಿಗೆ 122,356 ಕಾಂಡೋಮ್ ಪ್ಯಾಕ್ಗಳ ಆರ್ಡರ್ ಬಂದಿದ್ದವು.
ಸ್ವಿಗ್ಗಿ ಇನ್ಸ್ಟಾಮಾರ್ಟ್: ಡಿಸೆಂಬರ್ 31ರ ಬುಧವಾರ ಮಧ್ಯಾಹ್ನದಷ್ಟರಲ್ಲಿ 4,779 ಪ್ಯಾಕ್ಗಳ ಸೇಲ್ ಆಗಿವೆ. ಬ್ಲಿಂಕಿಟ್ ಆರ್ಡರ್ ಮಾಡಿದ ಅತ್ಯಂತ ಜನಪ್ರಿಯ ಕಾಂಡೋಮ್ ಫ್ಲೇವರ್ಗಳ ವಿವರವನ್ನು ಸಹ ಒದಗಿಸಿದೆ. ಆದರೆ ಒಟ್ಟಾರೆ ಕಾಂಡೋಮ್ ಆರ್ಡರ್ಗಳ ಸಂಖ್ಯೆಯ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.
ಚಾಕೊಲೇಟ್: ಮಾರಾಟದ 39%
ಸ್ಟ್ರಾಬೆರಿ: ಮಾರಾಟದ 31%
ಬಬಲ್ಗಮ್: ಮಾರಾಟದ 19%
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications