ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಗಲಭೆ ಪಟ್ಟಿ-2017: ಯುಪಿ ನಂ. 1,ಕರ್ನಾಟಕ ನಂ. 2

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 6: 2017ರಲ್ಲಿ ದೇಶದಲ್ಲಿ 822 ಕೋಮು ಗಲಭೆಗಳು ನಡೆದಿದ್ದು ಇದರಲ್ಲಿ 111 ಜನರು ಸಾವನ್ನಪ್ಪಿದ್ದಾರೆ ಮತ್ತು 2,384 ಜನರು ಗಾಯಗೊಂಡಿದ್ದಾರೆ. ಹೀಗೊಂದು ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಲೋಕಸಭೆಯಲ್ಲಿ ನೀಡಿದ್ದಾರೆ.

ಎಂದಿನಂತೆ ಕೋಮು ಗಲಾಟೆಗಳಲ್ಲಿ ಮೊದಲ ಸ್ಥಾನವನ್ನು ಉತ್ತರ ಪ್ರದೇಶ ಅಲಂಕರಿಸಿದ್ದು, ಒಂದೇ ವರ್ಷದಲ್ಲಿ 192 ಘರ್ಷಣೆಗಳು ನಡೆದಿವೆ. ಇದರಲ್ಲಿ 44 ಜನರು ಸಾವನ್ನಪ್ಪಿದ್ದು 542 ಇತರರು ಗಾಯಗೊಂಡಿದ್ದಾರೆ.

ಅಚ್ಚರಿ ಮತ್ತು ಅವಮಾನಕರ ಎಂದರೆ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕ ಒಟ್ಟು 100 ಕೋಮು ಸಂಘರ್ಷಗಳಿಗೆ 2017ರಲ್ಲಿ ಸಾಕ್ಷಿಯಾಗಿದೆ. ಇದರಲ್ಲಿ ಒಟ್ಟು 9 ಜನರು ಸಾವನ್ನಪ್ಪಿ 229 ಜನರು ಗಾಯಗೊಂಡಿದ್ದಾರೆ.

111 killed in 822 communal incidents in 2017: Govt

ಇನ್ನು ರಾಜಸ್ಥಾನದಲ್ಲಿ 91 ಕೋಮು ಗಲಭೆಗಳಿಗೆ 12 ಜನರು ಸಾವನ್ನಪ್ಪಿ 175 ಜನರು ಗಾಯಗೊಂಡಿದ್ದಾರೆ. ಬಿಹಾರದಲ್ಲಿ 85 ಕೋಮು ಗಲಾಟೆಗಳು ನಡೆದಿದ್ದು 3 ಜನರು ಸಾವನ್ನಪ್ಪಿ 321 ಜನರಿಗೆ ಗಾಯಗಳಾಗಿವೆ.

2017ರಲ್ಲಿ ಮಧ್ಯ ಪ್ರದೇಶದಲ್ಲಿ 60 ಕೋಮು ಘಟನೆಗಳಿಂದ 9 ಜನರು ಸಾವನ್ನಪ್ಪಿ 191 ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 58 ಕೋಮು ಘರ್ಷಣೆಗಳಿಗೆ 9 ಜನರು ಸಾವನ್ನಪ್ಪಿ 230 ಜನರಿಗೆ ಗಾಯಗಳಾಗಿವೆ.

ಗುಜರಾತ್ ನಲ್ಲಿ ಇದೇ ಅವಧಿಯಲ್ಲಿ 50 ಕೋಮು ಗಲಭೆಗಳಿಗೆ 8 ಜನರು ಸಾವನ್ನಪ್ಪಿ 125 ಜನರಿಗೆ ಗಾಯಗಳಾಗಿವೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2016ರಲ್ಲಿ 703 ಕೋಮುಗಲಭೆಗಳಲ್ಲಿ 86 ಜನರು ಸಾವನ್ನಪ್ಪಿದ್ದರೆ 2,321 ಜನರು ಗಾಯಗೊಂಡಿದ್ದಾರೆ. ಇನ್ನು 2015ರಲ್ಲಿ 751 ಕೋಮು ಗಲಭೆಗಳಲ್ಲಿ 97 ಜನರು ಸಾವನ್ನಪ್ಪಿ 2,264 ಜನರು ಗಾಯಗೊಂಡಿದ್ದಾರೆ.

English summary
As many as 111 people were killed and 2,384 others were injured in 822 communal incidents in the country in 2017, the Lok Sabha was informed today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X