'ಸುಳ್ಳು ಹೇಳುತ್ತಿರುವುದು ಮೋದಿಯೋ, ಫ್ರಾನ್ಸ್ ಮಾಜಿ ಅಧ್ಯಕ್ಷರೋ?!'

ಹೈದರಾಬಾದ್, ಸೆಪ್ಟೆಂಬರ್ 22: 'ರಫೇಲ್ ಖರೀದಿಗೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿರುವವರು ಪ್ರಧಾನಿ ನರೇಂದ್ರ ಮೋದಿಯವರೋ ಅಥವಾ ಫ್ರೆಂಚ್ ಮಾಜಿ ಅಧ್ಯಕ್ಷ ಒಲಾಂಡ್ ಅವರೋ ಎಂಬುದನ್ನು ಭಾರತೀಯರಿಗೆ ತಿಳಿಸಿ' ಎಂದು ಎಐಎಂಐಎಂ(All India Majlis-e-Ittehad-ul Muslimeen) ಪಕ್ಷದ ಮುಖಂಡ, ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

ರಫೇಲ್ ಯುದ್ಧ ವಿಮಾನ ಬಿಡಿ ಭಾಗಗಳ ತಯಾರಿಕೆಗೆ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಹೆಸರನ್ನೇ ಸೂಚಿಸುವಂತೆ ಭಾರತ ಸರ್ಕಾರವೇ ಫ್ರಾನ್ಸ್ ಸರ್ಕಾರವನ್ನು ಕೋರಿತ್ತು ಎಂಬ ಸ್ಫೋಟಕ ಹೇಳಿಕೆಯನ್ನು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಶುಕ್ರವಾರ ನೀಡಿದ್ದರು. ಆ ನಂತರ 'ರಿಲಯನ್ಸ್ ಹೆಸರನ್ನು ಸೂಚಿಸಿದ್ದರಲ್ಲಿ ನನ್ನ ಪಾತ್ರವಿಲ್ಲ' ಎಂದು ಫ್ರಾನ್ಸ್ ಸರ್ಕಾರ ಸ್ಪಷ್ಟನೆ ನೀಡಿತ್ತು.

Who is lying? PM or French President? asks Asaduddin Owaisi

ಈ ಕುರಿತು ಪ್ರತಿಕ್ರಿಯೆ ನೀಡಿದ ಓವೈಸಿ, ಒಲಾಂಡೋ ಅವರ ಮಾತನ್ನು ನಂಬಬೇಕೋ, ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ನಂಬಬೇಕೋ? ಇವರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ನೀವೇ ತಿಳಿಸಿ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಓವೈಸಿ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+