ತೆಲಂಗಾಣ ಪೊಲೀಸರ ''ನಾಗೀನ್ ಡ್ಯಾನ್'' ವಿಡಿಯೋ ವೈರಲ್

ಹೈದರಾಬಾದ್, ಮಾರ್ಚ್ 01: ಸಂಡೇ ನೋಡೋದಕ್ಕೆ ಮಜವಾದ ವಿಡಿಯೋ ಸಿಕ್ತು ಅಂತಾ ಈ ವಿಡಿಯೋ ನೋಡಿ ಸುಮ್ಮನಾಗಬೇಡಿ, ಪೊಲೀಸರ ನೃತ್ಯ ನೋಡಿದ ಬಳಿಕ ಈ ವಿಡಿಯೋ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಲುಪುವ ತನಕ ಶೇರ್ ಮಾಡಿ ಎಂಬ ಟ್ವೀಟ್ ವೈರಲ್ ಆಗಿದೆ. ತೆಲಂಗಾಣ ಪೊಲೀಸರ ಸ್ನೇಕ್ ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಮಾರು 10 ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ವಿಡಿಯೋದಲ್ಲಿ ಸಿವಿಲ್ ಡ್ರೆಸ್ ನಲ್ಲಿರುವ ಪೊಲೀಸರು ಕುಡಿತ ಮತ್ತಿನಲ್ಲಿ ಹಾವಿನಂತೆ ಬಳಕುತ್ತಾ, ಕೈಯಾಡಿಸುತ್ತಾ ಸ್ನೇಕ್ ಡ್ಯಾನ್ಸ್ ಮಾಡಿದ್ದಾರೆ. ಕೊಥೂರ್ ಠಾಣೆ ಪೊಲೀಸರು ಇವರು ಎಂದು ತಿಳಿದು ಬಂದಿದೆ. ಒಬ್ಬ ಎಎಸ್ಐ ಹಾಗೂ ಐವರು ಸಹಾಯಕರು ಈ ಘಟನೆಯಲ್ಲಿ ಪಾತ್ರಧಾರಿಗಳಾಗಿದ್ದು, ಈ ಕುರಿತಂತೆ ಸೈಬರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.

Caught on cam, Telangana cops performing snake dance after consuming liquor in Hyderabad

ತಕ್ಷಣದಿಂದ ಜಾರಿಗೆ ಬರುವಂತೆ ಎಎಸ್ಐ ಹಾಗೂ ಐದು ಮಂದಿ ಕಾನ್ಸ್ ಟೇಬಲ್ ರನ್ನು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಎಸಿಪಿ ನೇತೃತ್ವದಲ್ಲಿ ತನಿಖೆ ಜಾರಿಯಲ್ಲಿದೆ, ತನಿಖೆ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ತಿಳಿಸಬಹುದು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಹೇಳಿದ್ದಾರೆ.

ಸ್ನೇಕ್ ಡ್ಯಾನ್ಸ್ ಮಾಡಿದವರನ್ನು ಸಬ್ ಇನ್ಸ್ ಪೆಕ್ಟರ್ ಬಾಲಸ್ವಾಮಿ, ಕಾನ್ಸ್ ಟೇಬಲ್ ಅಶೋಕ್ ರೆಡ್ಡಿ, ಅಮರನಾಥ್, ಚಂದ್ರಮೋಹನ್, ವೆಂಕಟೇಶ್ ಗೌಡ್, ರಾಮಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ.

ಕಾನ್ಸ್ ಟೇಬಲ್ ಮದುವೆ ಮುಗಿಸಿಕೊಂಡು ಗುಂಡು ಹಾಕಿ ನರ್ತನ ಮಾಡಿದ್ದರು. ಈ ಸಂದರ್ಭದಲ್ಲಿ ಡ್ಯೂಟಿಯಲ್ಲಿರಲಿಲ್ಲ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ಈ ಹಿಂದೆ ಶಾದ್ ನಗರ ಇನ್ಸ್ ಪೆಕ್ಟರ್ ಶ್ರೀಧರ್ ಕುಮಾರ್ ಅವರು ನಾಗೀನ್ ಚಿತ್ರದ ಜನಪ್ರಿಯ ಟ್ಯೂನಿಗೆ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ತಕ್ಷಣವೇ ಇನ್ಸ್ ಪೆಕ್ಟರ್ ವಿರುದ್ಧ ಆಯುಕ್ತರು ಕ್ರಮ ಜರುಗಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+