ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!

Posted By:
Subscribe to Oneindia Kannada

ಹೈದರಾಬಾದ್, ಮಾರ್ಚ್ 02 : ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿರುವ ವಿಡಿಯೋ ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದೆ. ಇಂದು ಕನ್ಹಯ್ಯಾ ಕುಮಾರ್ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಪ್ರಕಟಿಸಲಿದೆ.

ಕನ್ಹಯ್ಯಾ ಕುಮಾರ್ ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವ ಬಗ್ಗೆ ವಿಡಿಯೋದಲ್ಲಿ ಸಾಕ್ಷಿಗಳಿಲ್ಲ ಎಂದು ದೆಹಲಿ ಪೊಲೀಸರು ಫೆ.29ರಂದು ದೆಹಲಿ ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದರು. ಈಗ ಪೊಲೀಸರು ಸಂಗ್ರಹಣೆ ಮಾಡಿರುವ ವಿಡಿಯೋ ನಕಲಿ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಹೇಳಿದೆ. ['ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿಲ್ಲ']

jawaharlal nehru university

ಕನ್ಹಯ್ಯಾ ಕುಮಾರ್ ಅವರ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಾಗಿದ್ದು, ಸದ್ಯ ಅವರು ಪೊಲೀಸರ ವಶದಲ್ಲಿದ್ದಾರೆ. ಆರೋಪವನ್ನು ಸಾಬೀತುಪಡಿಸಲು ದೆಹಲಿ ಪೊಲೀಸರು 7 ವಿಡಿಯೋಗಳನ್ನು ಸಂಗ್ರಹಣೆ ಮಾಡಿದ್ದರು. ಫೆ.9ರಂದು ವಿವಿಯಲ್ಲಿ ನಡೆದ ಕಾರ್ಯಕ್ರಮಗಳ ವಿಡಿಯೋಗಳಲ್ಲಿ 2 ನಕಲಿ ಎಂದು ಪ್ರಯೋಗಾಲಯ ದೆಹಲಿ ಸರ್ಕಾರಕ್ಕೆ ವರದಿ ನೀಡಿದೆ. [ಬೇಲ್ ಕೇಳಿದ ಕನ್ಹಯ್ಯಾನನ್ನು ವಾಪಸ್ ಕಳಿಸಿದ ಸುಪ್ರೀಂಕೋರ್ಟ್]

ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯ ಆಡಿಯೋ, ವಿಡಿಯೋ, ತುಟಿ ಚಲನೆ ಸಂಯೋಜನೆಯ ಪರೀಕ್ಷೆಗಳನ್ನು ನಡೆಸಿದ ಬಳಿಕ 2 ವಿಡಿಯೋಗಳು ನಕಲಿ ಎಂದು ಹೇಳಿದೆ. ಬೇರೆ-ಬೇರೆ ಸ್ಥಳದಲ್ಲಿ ತೆಗೆದ ವಿಡಿಯೋಗಳನ್ನು ಸೇರಿಸಿ, ನಕಲಿ ವಿಡಿಯೋ ತಯಾರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.[ಅಫ್ಜಲ್ ಗುರು ಈತನ ಹೃದಯಕ್ಕೆ ಹತ್ತಿರವಾಗಿದ್ದನಂತೆ!]

ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಾಲಿದ್ ಸ್ವತಂತ್ರ ಕಾಶ್ಮೀರಕ್ಕಾಗಿ ಘೋಷಣೆ ಕೂಗುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿತ್ತು. ಮಾಧ್ಯಮಗಳಿಗೂ ಈ ವಿಡಿಯೋ ಸಿಕ್ಕಿತ್ತು. ಈ ವಿಡಿಯೋ ನಕಲಿ ಎಂದು ಪ್ರಯೋಗಾಲಯ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In its report submitted to the Delhi government, forensic analysis has revealed that two videos in which the Jawaharlal Nehru University Students’ Union president Kanhiya Kumar was heard shouting anti-national slogans were doctored.
Please Wait while comments are loading...