ಕಾಂಗ್ರೆಸ್ ವಿರುದ್ಧ ವಿರೋಧಪಕ್ಷಗಳು MeToo ಎನ್ನುತ್ತವೆ ಎಂದ ರಾಜನಾಥ್ ಸಿಂಗ್!

ಹೈದರಾಬಾದ್, ಅಕ್ಟೋಬರ್ 27: ಪ್ರಸ್ತುತ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ #MeToo ಆಂದೋಲನವನ್ನು ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಬಳಸಿಕೊಂಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಜತೆ ಕೈಜೋಡಿಸಿರುವ ವಿರೋಧಪಕ್ಷಗಳು ನಿರಾಶೆಗೆ ಮತ್ತು ಕೋಪಕ್ಕೆ ಒಳಗಾಗಲಿವೆ ಎಂದು ಎಚ್ಚರಿಕೆ ನೀಡಿದಿದ್ದಾರೆ.

'ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಪಕ್ಷಗಳೆಲ್ಲವೂ ವಿಫಲವಾಗಿವೆ. ಎಲ್ಲ ವಿರೋಧ ಪಕ್ಷಗಳೂ ಮುಂದೆ ವಂಚನೆಗೆ ಒಳಗಾಗದೆ ಇರಲು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಆಶಯ ವ್ಯಕ್ತಪಡಿಸೋಣ. ಇಲ್ಲದಿದ್ದರೆ ಅವರು ಕಾಂಗ್ರೆಸ್ ವಿರುದ್ಧ #MeToo ಆಂದೋಲನ ಮಾಡುವ ಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.

Rajnath Singh oppositions parties alliance betrayal Metoo congress

ರಾಜನಾಥ್ ಸಿಂಗ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಉದ್ಯೋಗ ಸ್ಥಳಗಳಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಲು ರಚಿಸಿರುವ ಸಚಿವರ ಸಮಿತಿಯ ನೇತೃತ್ವವನ್ನು ರಾಜನಾಥ್ ಸಿಂಗ್ ವಹಿಸಿದ್ದಾರೆ.

ಈ ರೀತಿಯ ಹೇಳಿಕೆ ಮೂಲಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಆಂದೋಲನವನ್ನು ರಾಜನಾಥ್ ಸಿಂಗ್ ಅಣಕಿಸಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಕಾನೂನುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಸಮಿತಿಯಲ್ಲಿರುವ ರಾಜನಾಥ್ ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+