ಕ್ಷುಲ್ಲಕ ಜಗಳ, ಪತ್ನಿ, ನವಜಾತ ಶಿಶುವಿಗೆ ಬೆಂಕಿ ಇಟ್ಟ ಪತಿ
ತೆಲಂಗಾಣ, ಫೆಬ್ರವರಿ 11: ಕೌಟುಂಬಿಕ ಕಲಹ ತಾರಕ್ಕೇರಿ ಪತಿ ಕೋಪದಲ್ಲಿ ಪತ್ನಿ ಹಾಗೂ ನವಜಾತ ಶಿಶುವಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
27 ವರ್ಷದ ವ್ಯಕ್ತಿ ಪತ್ನಿ ಹಾಗೂ ನಾಲ್ಕು ತಿಂಗಳ ಮಗುವನ್ನು ಕೊಲೆಮಾಡಿರುವುದು ಬೆಳಗ್ಗೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಕೆಯನ್ನು 2015ರಲ್ಲಿ ಮದುವೆಯಾಗಿದ್ದ ಅವರಿಗೆ ಮುದ್ದಾದ ಗಂಡು ಮಗುವಿತ್ತು ಎಂದು ಪ್ರಥಮ ತನಿಖೆ ವೇಳೆ ಬಹಿರಂಗಗೊಂಡಿದೆ. ಪತಿ-ಪತ್ನಿಯಲ್ಲಿ ಭಿನ್ನಾಭಿಪ್ರಾಯವಿದ್ದ ಕಾರಣ ಮಹಿಳೆ ಕೆಲವು ತಿಂಗಳಿಂದ ತಾಯಿಯ ಮನೆಯಲ್ಲಿ ಇರುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಂದು ಮಹಿಳೆಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಲಾಗಿತ್ತು ಮಗುವಿಗೂ ಕೂಡ ನಿದ್ರೆ ಮಾತ್ರೆ ಪುಡಿಯನ್ನು ಬೆರೆಸಲಾಗಿತ್ತು. ಬಳಿಕ ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications