ಯುವತಿ ಮೇಲೆ ನಾಲ್ಕು ವರ್ಷದಿಂದ ಅತ್ಯಾಚಾರ, ಮೂವರ ಬಂಧನ

ಹೈದರಾಬಾದ್, ಜನವರಿ 14: ಹದಿನಾರು ವರ್ಷದ ಯುವತಿಯ ಸೋದರ ಸಂಬಂಧಿ ಹಾಗೂ ಆತನ ಸ್ನೇಹಿತರು ಸತತ ನಾಲ್ಕು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ ಘಟನೆ ವರದಿ ಆಗಿದೆ. ಸೋದರ ಸಂಬಂಧಿಯು ಯುವತಿ ಮೇಲೆ ಅತ್ಯಾಚಾರ ಎಸಗುವ ವೇಳೆ, ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡು, ಇತರರಿಗೂ ಅ ವಿಡಿಯೋ ಕಳುಹಿಸಿದ್ದಾನೆ.

ಆ ವಿಡಿಯೋವನ್ನು ತೋರಿಸುತ್ತಿದ್ದ ಇತರರು ಕೂಡ ಆಕೆಗೆ ಬೆದರಿಕೆಯೊಡ್ಡಿ, ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆ ಯುವತಿಯ ಕುಟುಂಬದಲ್ಲಿ ಯಾರೊಬ್ಬರ ಗಮನಕ್ಕೂ ಈ ಬಗ್ಗೆ ಅನುಮಾನ ಬಂದಿಲ್ಲ. ಕಳೆದ ತಿಂಗಳು ಹೈದರಾಬಾದ್ ನಲ್ಲಿ ಭರೋಸಾ ಕೇಂದ್ರಕ್ಕೆ ಯುವತಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಯುವತಿಯು ಹೇಳಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಹೇಳಿಕೆ ಪ್ರಕಾರ, ಮನೆಯ ಮಹಡಿಯ ಮೇಲೆ ಆ ಸೋದರ ಸಂಬಂಧಿಯು ಯುವತಿಯ ಅತ್ಯಾಚಾರ ನಡೆಸಿ, ವಿಡಿಯೋ ಮಾಡಿಕೊಂಡಿದ್ದಾನೆ. ಪಾನೀಯದಲ್ಲಿ ಔಷಧ ಬೆರೆಸಿ, ಈ ಕೃತ್ಯ ಎಸಗಿದ್ದಾನೆ. ಆ ನಂತರ ವಿಡಿಯೋವನ್ನು ತೋರಿಸಿ, ಬೆದರಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.

Hyderabads 16 year old girl repeatedly raped for 4 years

ಆ ನಂತರ ತನ್ನ ಸ್ನೇಹಿತರ ಜತೆಗೂ ವಿಡಿಯೋ ಷೇರ್ ಮಾಡಿ, ಆ ಸ್ನೇಹಿತರಿಂದಲೂ ಯುವತಿ ಮೇಲೆ ದೌರ್ಜನ್ಯ ಆಗಿದೆ. ಈಗ ಆರೋಪಿಗಳ ಪೈಕಿ ಒಬ್ಬನ ಸ್ನೇಹಿತನೇ ಸಾಕ್ಷ್ಯವಾಗಿ ಇದ್ದಾನೆ. ಆ ಯುವತಿಯ ಕುಟುಂಬದವರು ಹಾಗೂ ನೆರೆಮನೆಯವರು ಪ್ರತಿಭಟನೆ ನಡೆಸಿದ್ದಾರೆ. ಈಗ ಬಂಧಿಸಿರುವ ಮೂವರನ್ನು ಹೊರತುಪಡಿಸಿ, ಸಾಕ್ಷಿ ಆಗಿರುವ ವ್ಯಕ್ತಿಯೂ ಸೇರಿ ಎಂಟು ಮಂದಿ ಯುವತಿ ಮೇಲೆ ದೌರ್ಜನ್ಯ ಎಸಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+