ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ನಕಲಿ ಸಾಧುವನ್ನು ಥಳಿಸಿದ ಗ್ರಾಮಸ್ಥರು
ಹೈದರಾಬಾದ್, ಅಕ್ಟೋಬರ್ 14: ಹದಿನೈದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ನಕಲಿ ಸಾಧುವನ್ನು ಗ್ರಾಮಸ್ಥರು ಥಳಿಸಿರುವ ಘಟನೆ ನಿಜಾಮಾಬಾದ್‌ನಲ್ಲಿ ನಡೆದಿದೆ.
ಬಾಲಕಿಗಿರುವ ಮಾನಸಿಕ ಅನಾರೋಗ್ಯವನ್ನು ಸರಿಪಡಿಸುತ್ತೇನೆಂದು ಕರೆಸಿಕೊಂಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ.ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನುವ ಕಾರಣಕ್ಕೆ ಈ ಸಾಧುವಿನ ಬಳಿ ಕರೆದುಕೊಂಡು ಬಂದಿದ್ದರು. ಆತ ಮೂರು ತಿಂಗಳುಗಳ ಕಾಲ ದೌರ್ಜನ್ಯವೆಸಗಿದ್ದ.
ಆಕೆಯ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ವೈದ್ಯರ ಬಳಿ ತೆರಳಿದಾಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ.ಧ್ಯಾನ ಮತ್ತಿತರೆ ಕಾರಣ ಹೇಳಿ ನಶೆಯ ಮಾತ್ರೆಗಳನ್ನು ಕೊಟ್ಟು ಆಕೆಯ ಮೇಲೆ ಅತ್ಯಾಚಾರವಸಗಿದ್ದ, ಈ ವಿಷಯ ತಿಳಿದು ಸಾಧುವಿನ ಬಳಿ ತೆರಳಿದಾಗ ಆತ ಓಡಿ ಹೋಗಲು ಪ್ರಯತ್ನಿಸಿದ್ದ ಬಳಿಕ ಊರಿನವರು ಸೇರಿ ಆತನನ್ನು ಹಿಡಿದು ಥಳಿಸಿದ್ದಾರೆ.

ಆತನನ್ನು ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ನಕಲಿ ಸುವಿನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.












Click it and Unblock the Notifications